ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’
Team Udayavani, May 7, 2024, 7:25 AM IST
ಮಂಗಳೂರು: “ಅಸ್ತಮಾ’ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಯಾಗಿದ್ದು, ವ್ಯಕ್ತಿಯ ಸರಾಗ ಉಸಿರಾಟದ ಮೇಲೆ ಪರಿಣಾಮ ಬೀರುವುದರೊಂದಿಗೆ ದೈನಂ ದಿನ ಚಟುವಟಿಕೆಗಳಿಗೆ ಅಡ್ಡಿಪ ಡಿಸಿ, ದೈಹಿಕ ಮಾನಸಿಕವಾಗಿ ಕುಗ್ಗಿಸುತ್ತದೆ. ಇದಕ್ಕೆ ಚಿಕಿತ್ಸಾ ಕ್ರಮಗಳು ಇದ್ದರೂ ವ್ಯಕ್ತಿಯ ದೇಹ ಪ್ರಕೃತಿಯನ್ನು ಅವಲಂಬಿಸಿದೆ.
ವಾತಾವರಣದಲ್ಲಿ ಬೇರೆ ಬೇರೆ ಅಲರ್ಜಿಕಾರಕ (ಏರೋಅಲ ರ್ಜನ್) ಕಣಗಳಿಂದ ಶ್ವಾಸನಾಳದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗು ವುದನ್ನು “ಅಸ್ತಮಾ’ ಎನ್ನಲಾಗುತ್ತದೆ. ಈ ಅಲರ್ಜಿಕಾರಕಗಳು ಸಾಮಾನ್ಯ ವ್ಯಕ್ತಿಯ ಪರಿಣಾಮ ಬೀರುವುದಿಲ್ಲ. ಅದನ್ನು ಸ್ವೀಕರಿಸಿ ಹಾಗೇ ಹೊರಗೆ ಕಳುಹಿಸುತ್ತದೆ. ಆದರೆ ದೇಹದಲ್ಲಿ ಅಲರ್ಜಿ ಅಂಶ ಇರುವಂಥ ವ್ಯಕ್ತಿಗಳಲ್ಲಿ ಇದು ವ್ಯತಿರಿಕ್ತವಾಗಿ ಸ್ಪಂದಿಸುತ್ತದೆ. ಇದರಿಂದಾಗಿ ಶ್ವಾಸನಾಳಗಳು ಕಿರಿದಾಗಿ ಉಸಿರಾಡಲು ಕಷ್ಟವಾಗುತ್ತದೆ.
100ರಲ್ಲಿ 85 ಮಂದಿ “ಅಸ್ತಮಾ’ ರೋಗಿಗಳಿಗೆ ಅಲರ್ಜಿಯೇ ಕಾರಣ. ಉಳಿದವರಲ್ಲಿ ಬೇರೆ ಬೇರೆ ಕಾರಣಗಳಿಗೆ ಶ್ವಾಸನಾಳಗಳು ಗಾಳಿಯಲ್ಲಿರುವ ಇರಿಟೆಂಟ್ ಕಣಗಳಿಂದಾಗಿ ಕುಗ್ಗುತ್ತವೆ. ಅಲರ್ಜಿಕ್ ಆಸ್ತಮಾ ಹೆಚ್ಚಾಗಿ ಕಂಡು ಬರುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.
ಅಸ್ತಮಾ ಲಕ್ಷಣ
ಕೆಮ್ಮು (ವಿಶೇಷವಾಗಿ ರಾತ್ರಿಯಲ್ಲಿ ಅಥವಾ ಮುಂಜಾನೆ), ಎದೆ ಗಟ್ಟಿಯಾಗಿ ಉಸಿರಾ ಟಕ್ಕೆ ಕಷ್ಟವಾಗುವುದು, ಎದೆ ನೋವು, ಮಲ ಗಲು ತೊಂದರೆಯಾಗುವ ಲಕ್ಷಣಗಳು ಕಂಡು ಬರುತ್ತದೆ. ಇದನ್ನು ಕಾಯಿಲೆ ಎನ್ನುವುದಕ್ಕಿಂತ ಅಲರ್ಜಿಕಾರಕ ಅಂಶಗಳಿಗೆ ದೇಹ ಪ್ರತಿಕ್ರಿಯೆ ನೀಡುವ ರೀತಿ ಎನ್ನುತ್ತಾರೆ ವೈದ್ಯರು.
ಇನ್‌ಹೇಲರ್ ಥೆರಪಿ ಪರಿಣಾಮಕಾರಿ
ಅಸ್ತಮಾಕ್ಕೆ ಮೂಲವಾದ “ಶ್ವಾಸನಾಳ’ಕ್ಕೆ ಚಿಕಿತ್ಸೆ ನೀಡುವ “ಇನ್‌ಹೇಲರ್ ಥೆರಪಿ’ಯನ್ನು ಅಸ್ತಮಾ ರೋಗಿಗಳಿಗೆ ಚಿಕಿತ್ಸೆ ನೀಡಲು ಅನು ಸರಿಸಲಾಗುತ್ತದೆ. ಶ್ವಾಸನಾಳದ ಸುತ್ತಳತೆ ಕಿರಿ ದಾಗಿ ಉಸಿರಾಡುವಾಗ ಗಾಳಿ ಹೋಗದೆ ಕಷ್ಟವಾಗುವುದರಿಂದ ಶ್ವಾಸನಾಳಗಳಿಗೇ ಔಷಧ ವನ್ನು ನೀಡುವ ಥೆರಪಿಗೆ “ಇನ್‌ಹೇಲರ್ ಥೆರಪಿ’ ಎನ್ನುತ್ತಾರೆ. ಕಡಿಮೆ ಅಡ್ಡ ಪರಿಣಾಮವಿರುವ ಪರಿಣಾಮಕಾರಿ ಚಿಕಿತ್ಸೆ. ರೋಗಿಯ ಲಕ್ಷಣಗಳ ಆಧಾರದ ಮೇಲೆಯೇ ಚಿಕಿತ್ಸೆ ನೀಡಲಾಗುತ್ತದೆ.
ವಿವಿಧ ಹಂತಗಳ ಚಿಕಿತ್ಸೆ
ಅಸ್ತಮಾ ಕೆಲವರಲ್ಲಿ ವರ್ಷದಲ್ಲಿ ಒಂದೆರಡು ಬಾರಿ ಕಾಣಿಸಿಕೊಂಡು ಮೂರ್ನಾಲ್ಕು ದಿನ ಇದ್ದು ಕಡಿಮೆಯಾಗುತ್ತದೆ. ಇಂತಹವರಿಗೆ ಮೊದಲ ಹಂತದ ಚಿಕಿತ್ಸೆ ನೀಡಲಾಗುತ್ತದೆ. ಇನ್ನು ಕೆಲವರಿಗೆ ವರ್ಷದಲ್ಲಿ 3-4 ಸಲ ಬಂದು 10-15 ದಿನ ಇರುತ್ತದೆ ಎಂದಾದರೆ ಎರಡನೇ ಹಂತದ ಚಿಕಿತ್ಸೆ ನೀಡಲಾಗುತ್ತದೆ. ಕೆಲವರಿಗೆ ವರ್ಷ ಪೂರ್ತಿ ಇರುತ್ತದೆ. ುಕ್ಕಳಾದರೆ ಶಾಲೆಗೆ ಪದೇಪದೆ ಗೈರಾಗುವ ಸಮಸ್ಯೆ ಇರುತ್ತದೆ. ಇಂತಹವರು ಇನ್‌ಹೇಲರ್ ಥೆರಪಿ ಜತೆಗೆ ಮಾತ್ರೆಗಳನ್ನೂ ಸೇವಿಸುವ ಅಗತ್ಯವಿರುತ್ತದೆ.
ಮಕ್ಕಳಲ್ಲಿ ಹೆಚ್ಚು, ಚಿಕಿತ್ಸೆಯಿಂದ ಗುಣ
5 ರಿಂದ 15 ವರ್ಷದ ಮಕ್ಕಳಲ್ಲಿ ಅಸ್ತಮಾ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಚಿಕಿತ್ಸೆ ನೀಡಿದಾಗ ಲಕ್ಷಣಗಳ ತೀವ್ರತೆ ಕಡಿಮೆಯಾಗ ತೊಡಗಿ, 20-22 ವರ್ಷದ ವೇಳೆಗೆ ಸಂಪೂರ್ಣ ಗುಣವಾ ಗುತ್ತದೆ. ಆದರೆ 35 ವರ್ಷದ ಬಳಿಕ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಇದು ಸ್ವಾಭಾವಿಕ ರೀತಿ. ಸಣ್ಣ ಮಕ್ಕಳಿಗೆ ಮೊದಲು ಚರ್ಮದಲ್ಲಿ ಬಳಿಕ ಮೂಗಿನಲ್ಲಿ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಚಿಕಿತ್ಸೆ ನೀಡದಿದ್ದರೆ ಅದು ಶ್ವಾಸನಾಳಕ್ಕೆ ಹೋಗಿ ಅಸ್ತಮಾ ಆಗಿ ಬದಲಾಗುತ್ತದೆ. ಚಿಕ್ಸಿತೆ ಪಡೆದು ಅಥವಾ ಪಡೆಯದಿದ್ದರೂ ಕೆಲವರಿಗೆ 15-20 ವರ್ಷವಾದಾಗ ಗುಣವಾಗುವ ಸಾಧ್ಯತೆಯೂ ಇದೆ. ಆದರೆ ಜೀವನ ಶೈಲಿಯ ಗುಣಮಟ್ಟವನ್ನು ಉತ್ತಮ ಪಡಿಸಿಕೊಳ್ಳಲು “ಇನ್‌ಹೇಲರ್ ಥೆರಪಿ’ ನೆರವಾಗುತ್ತದೆ. ಮಕ್ಕಳು ಚಟುವಟಿಕೆಯಿಂದ ಇರಲು ಚಿಕಿತ್ಸೆ ನೆರವಾಗುತ್ತದೆ.
ದೇಶದಲ್ಲಿ ಪ್ರಕರಣ
ಭಾರತದಲ್ಲಿ ಪ್ರತೀ 100ರಲ್ಲಿ 3 ಮಂದಿ ಗೆ ಅಸ್ತಮಾ ಸಮಸ್ಯೆ ಕಂಡು ಬರುತ್ತದೆ. ಸಮಭಾಜಕ ವೃತ್ತದ ಆಚೀಚೆ ಇರುವ ಪ್ರದೇಶದಲ್ಲಿ ಹೆಚ್ಚಿರಲೂ ಬಹುದು. ನಮ್ಮಲ್ಲಿ ಸಸ್ಯ ಸಂಪತ್ತು, ಪ್ರಾಣಿ ಸಂಪತ್ತು ಇರು ವುದರಿಂದ ಸ್ವಾಭಾವಿಕವಾಗಿ ಅಲರ್ಜಿ ಉಂಟುಮಾಡುವ ಕಣಗಳು ಹೆಚ್ಚಿ ರುತ್ತವೆ. ಹಾಗಾಗಿ ಅಸ್ತಮಾ ಪ್ರಮಾಣ ತುಸು ಹೆಚ್ಚು.
ಗಾಳಿಯಲ್ಲಿರುವ ಏರೋ ಅಲರ್ಜನ್‌ಗಳಿಗೆ ಅಲರ್ಜಿ ಅಂಶ ಇರುವ ವ್ಯಕ್ತಿಯ ಶ್ವಾಸನಾಳಗಳು ವ್ಯತಿರಿಕ್ತವಾಗಿ ಸ್ಪಂದಿಸುವುದನ್ನು ಅಸ್ತಮಾ ಎನ್ನುತ್ತಾರೆ. ಅಲರ್ಜಿಗೆ ದೇಹದ ಯಾವುದೇ ಭಾಗವೂ ವ್ಯತಿರಿಕ್ತವಾಗಿ ಸ್ಪಂದಿಸಬಹುದು. ಶ್ವಾಸನಾಳ ವ್ಯತಿರಿಕ್ತವಾಗಿ ಸ್ಪಂದಿಸಿದರೆ ಅಸ್ತಮಾ. ಚಿಕಿತ್ಸೆಯ ಮೂಲಕ ಗುಣಪಡಿಸಬಹುದು.
– ಡಾ| ಶರತ್ ಬಾಬು
ಶ್ವಾಸಕೋಶ ತಜ್ಞರು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.