ಕೈಗಳ ಸ್ವಚ್ಛತೆ ಆರೋಗ್ಯಕರ ಜೀವನದ ಗುಟ್ಟು
Team Udayavani, Oct 15, 2018, 10:24 AM IST
ಸ್ವಚ್ಛ ಜೀವನ ಶೈಲಿ ಆರೋಗ್ಯಕರ ಜೀವನದ ಗುಟ್ಟು ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ನಿರ್ಲಕ್ಷ್ಯ ಮತ್ತು ಆಲಸ್ಯದಿಂದಾಗಿ ನಾವು ಸ್ವಚ್ಛತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಎಂಬುದು ಸಂಶೋಧನೆಯಿಂದಲೂ ದೃಢಪಟ್ಟ ವಿಚಾರ. ಇಂದು ವಿಶ್ವ ಕೈ ತೊಳೆಯುವ ದಿನ. ಆರೋಗ್ಯ ಮತ್ತು ಸ್ವಚ್ಛತೆ ಕುರಿತಾಗಿ ಜಾಗೃತಿ ಮೂಡಿಸಲು ವಿಶ್ವಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಕ್ಲೀನ್ ಹ್ಯಾಂಡ್ಸ್ – ಎ ರೆಸಿಪಿ ಫಾರ್ ಹೆಲ್ತ್’ ಈ ಬಾರಿಯ ಧ್ಯೇಯ. ದೈನಂದಿನ ಬದುಕಿನಲ್ಲಿ ನಾವು ಇದನ್ನು ರೂಢಿಸಿಕೊಂಡರೆ ಆರೋಗ್ಯಕರ ಜೀವನದತ್ತ ಒಂದು ಪ್ರಮುಖ ಹೆಜ್ಜೆಯಾಗಬಲ್ಲದು.
ಆರೋಗ್ಯದ ವಿಚಾರದಲ್ಲಿ ಸಣ್ಣ ಪುಟ್ಟ ವಿಷಯಗಳೂ ಮಹತ್ವ ಪಡೆಯುತ್ತದೆ. ಅಜಾಗರೂಕತೆ ಮತ್ತು ಆಲಸ್ಯತನದಿಂದಾಗಿ ಹಲವು ಬಾರಿ ರೋಗಗಳು ನಮ್ಮನ್ನು ಹೈರಾಣಾಗಿಸಿ ಬಿಡುತ್ತವೆ. ಇದಕ್ಕೆ ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಮುಖ್ಯ ಕಾರಣವಾಗಿರುತ್ತದೆ.
ನಿತ್ಯ ಜೀವನದಲ್ಲಿ ನಾವು ಮಾಡುವ ಈ ಒಂದು ತಪ್ಪು ಸಹ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಏನನ್ನಾದರೂ ತಿನ್ನುವ ಮುಂಚೆ, ಶೌಚಾಲಯಕ್ಕೆ ಹೋಗಿ ಬಂದ ಮೇಲೆ ಸರಿಯಾಗಿ ಕೈಗಳನ್ನು ಶುಚಿಗೊಳಿಸದೇ ಇದ್ದರೆ ನಾವು ತಿನ್ನುವ ಆಹಾರ ಅಥವಾ ಇನ್ನಿತರ ಮೂಲಗಳ ಮೂಲಕ ಕೀಟಾಣುಗಳು ಹೊಟ್ಟೆ ಸೇರಿ ಆರೋಗ್ಯ ಸಮಸ್ಯೆ ಉಂಟು ಮಾಡುತ್ತವೆ. ಈ ಕುರಿತು ಜಾಗೃತಿ ಮೂಡಿ ಸಲು ಅಕ್ಟೋಬರ್ 15 ಅನ್ನು ಪ್ರತಿ ವರ್ಷವೂ ‘ವಿಶ್ವ ಕೈ ತೊಳೆಯುವ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ಜಗತ್ತಿನ ಹಲವು ದೇಶಗಳಲ್ಲಿ ಅಭಿಯಾನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿ ಸಲಾ ಗು ತ್ತದೆ. ‘ಕ್ಲೀನ್ ಹ್ಯಾಂಡ್ಸ್ – ಎ ರೆಸಿಪಿ ಫಾರ್ ಹೆಲ್ತ್’ ಈ ಬಾರಿಯ ಧ್ಯೇಯ ವಾಕ್ಯವಾಗಿದೆ.
ಹಿನ್ನೆಲೆ
ಸಮಾಜದಲ್ಲಿ ಕೈ ತೊಳೆಯುವ ಪದ್ಧತಿಯನ್ನು ಹೆಚ್ಚಿಸುವಂತೆ ಮಾಡಲು ಮತ್ತು ಸಾಬೂನು ಬಳಸಿ ಕೈ ತೊಳೆಯುವ ಉಪಯೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು 2008ರಲ್ಲಿ ಈ ಅಭಿಯಾನ ರೂಪಿಸಿದವರು ಸ್ವೀಡನ್‌ನ ಗ್ಲೋಬಲ್ ಹ್ಯಾಂಡ್‌ವಾಷಿಂಗ್ ಪಾರ್ಟ್ನರ್ ಶಿಪ್ (ಜಿಎಚ್‌ಪಿ) ಎಂಬ ಸಂಸ್ಥೆ. ಈ ಸಂಸ್ಥೆಯನ್ನು ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್ ಆಫ್ಹ್ಯಾಂ ಡ್ ವಾಷಿಂಗ್ ಎಂದೂ ಕರೆಯುತ್ತಾರೆ. ಆರಂಭದಲ್ಲಿ ಸಾಬೂನು ಬಳಸಿ ಕೈ ತೊಳೆಯವ ಕುರಿತು ಜಾಗೃತಿ ಮೂಡಿಸಲು ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಳಿಕ ಈ ಸಂಸ್ಥೆಯ ಜತೆಗೆ ಹಲವು ಸಂಸ್ಥೆಗಳು ಕೈಜೋಡಿಸಿದವು. 2011ರಲ್ಲಿ ಸ್ವೆನ್ಸ್ಕಾ ಸೆಲ್ಯುಲೊಸಾ ಆ್ಯಕ್ಟಿಬಲಾಗೆಟ್ (ಎಸ್‌ಸಿಎ) ಎಂಬ ಸಂಸ್ಥೆ ಅಮೆರಿಕ ಮತ್ತು ಕೆನಡಾ ದೇಶಗಳಿಗೆ ಸಂಬಂಧಿಸಿ ಕೈ ತೊಳೆ ಯುವ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಸುಮಾರು ಶೇ. 50ಕ್ಕೂ ಅಧಿಕ ಮಂದಿ ಕೈ ತೊಳೆ ಯುವ ಸಂದ ರ್ಭ ಸೋಪ್ ಅಥವಾ ವೈರಾಣು ನಿರೋಧಕಗಳನ್ನು ಬಳಕೆ ಮಾಡುವುದಿಲ್ಲ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ.
ಪ್ರಯೋಜನಗಳು
ಆರೋಗ್ಯಕರ ಜೀವನ ಎಲ್ಲರಿಗೂ ಮುಖ್ಯ. ಹೀಗಾಗಿ ಕೈ ತೊಳೆಯುವ ಪ್ರಕ್ರಿಯೆ ದೈನಂದಿನ ಆಗುಹೋಗುಗಳಲ್ಲಿ ಪ್ರಮುಖ ವಿಷಯವಾಗಿ ಸೇರಿಕೊಳ್ಳಬೇಕು. ಸಾಬೂನು, ರೋಗ ನಿರೋಧಕ
ಶಕ್ತಿಯನ್ನು ಹೊಂದಿರುವ ಲಿಕ್ವಿಡ್ ಸಾಮಗ್ರಿಗಳನ್ನು ಬಳಕೆ ಮಾಡಿ ಆಗಾಗ್ಗೆ ಮುಖ್ಯವಾಗಿ ಆಹಾರ ಸೇವನೆಯ ಮುಂಚೆ ಕೈ ತೊಳೆಯುವ ಅಭ್ಯಾಸ ಮಾಡಿ ಕೊಂಡರೆ ಆರೋಗ್ಯ ಕರ ಜೀವನದತ್ತ ಒಂದು ಪ್ರಮುಖ ಹೆಜ್ಜೆಯಾಗಬಲ್ಲದು.
ಕೀಟಾಣುಗಳು ದೇಹ ಸೇರುವುದರಿಂದಾಗಿ ಪ್ರತಿ ವರ್ಷಕ್ಕೆ ಎರಡು ವರ್ಷಕ್ಕಿಂತ ಕೆಳಗಿನ ಸುಮಾರು 3.5 ಮಿಲಿ ಯನ್ ಮಕ್ಕಳು ಡೈರಿಯಾ ಮತ್ತು ನ್ಯುಮೋನಿಯಾಕ್ಕೆ ತುತ್ತಾಗುತ್ತಿದ್ದಾರೆ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಿದರೆ ಈ ರೀತಿಯ ದೈಹಿಕ ದುಷ್ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯ ವಿದೆ. ಅದ್ದರಿಂದ ಕೈ ತೊಳೆಯುವುದರಲ್ಲಿ ನಿರ್ಲಕ್ಷ್ಯವಹಿಸದೆ ಅದನ್ನೊಂದು ಸುರಕ್ಷಿತ ಅಭ್ಯಾಸ ಮತ್ತು ಹವ್ಯಾಸವಾಗಿ ರೂಢಿಸಿಕೊಂಡಾಗ ಆರೋಗ್ಯದ ಜತೆಗೆ ನಾವೂ ಸುರಕ್ಷಿತ ಜೀವನ ನಡೆಸಬಹುದು.
2008ರಿಂದ ಆಚರಣೆ
ಭಾರತದಲ್ಲಿ 2008ರಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆಗೆ ಚಾಲನೆ ನೀಡಿದವರು ಕ್ರಿಕೆಟ್ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡುಲ್ಕರ್. ದೇಶವ್ಯಾಪಿ ಸುಮಾರು 100 ದಶಲಕ್ಷ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಆರೋಗ್ಯ ಮತ್ತು ಸ್ವಚ್ಛತೆಯ ವಿಚಾರದಲ್ಲಿ ಕೈ ತೊಳೆಯುವ ಪ್ರಯೋಜನಗಳ ಬಗ್ಗೆ ತಿಳಿವಳಿಕೆ ಮೂಡಿಸಿದ್ದರು.
ಭುವನ ಬಾಬು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.