ದಂಡ ವಿಧಿಸುವ ಟೋಯಿಂಗ್‌ಗೆ ದಂಡ ಹಾಕುವವರು ಯಾರು?
1 ವರ್ಷದಿಂದ ವಿಮೆ, ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದೆ ಓಡಾಡಿದ ಟೋಯಿಂಗ್ ವಾಹನ
Team Udayavani, Dec 14, 2020, 12:33 PM IST
ಮಹಾನಗರ, ಡಿ. 13: ರಸ್ತೆ ಬದಿ ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸಿ ನಿಲುಗಡೆ ಮಾಡುವ ಹತ್ತಾರು ವಾಹನ ಗಳನ್ನು ಏಕ ಕಾಲದಲ್ಲಿ ಹೊತ್ತೂಯ್ದು ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡುವ ಟೋಯಿಂಗ್ ವಾಹನ ವಿಮೆ ಇಲ್ಲದೆ, ಫಿಟ್‌ನೆಸ್ ಸರ್ಟಿಫಿಕೆಟ್ ನವೀ ಕರಿಸದೆ ನಿಯಮಗಳನ್ನು ಗಾಳಿಗೆ ತೂರಿ 1 ವರ್ಷದಿಂದ ಕಾರ್ಯಾಚರಿಸಿದೆ!
ಹೌದು, ಇದು ಮಂಗಳೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ಒಂದು ಟೋಯಿಂಗ್ ವಾಹನದ ಕಥೆ. 2 ದಿನಗಳ ಹಿಂದೆ ಈ ವಿಚಾರ ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದಿದ್ದು, ಇದೀಗ 2 ದಿನಗಳಿಂದ ಈ ಟೋಯಿಂಗ್ ವಾಹನದಲ್ಲಿ ಟೋಯಿಂಗ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ನಗರದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಟೋಯಿಂಗ್ ವ್ಯವಸ್ಥೆಯ ಬಗ್ಗೆ ಬೇಸತ್ತ ದ್ವಿಚಕ್ರ ವಾಹನ ಮಾಲಕರೊಬ್ಬರು ಟೋ ಯಿಂಗ್ ವಾಹನದ ದಾಖಲೆಗಳನ್ನು ಸಾರಿಗೆ ಇಲಾಖೆಯ ಕಚೇರಿಯಲ್ಲಿ ಪರಿಶೀಲನೆಗೆ ಒಳ ಪಡಿಸಿದಾಗ ಈ ಟೋಯಿಂಗ್ ವಾಹನದ ಜಾತಕ ಬಯಲಾಗಿದೆ.
ಈ ವಾಹನದ ಇನ್ಶೂರೆನ್ಸ್ 2019 ನವೆಂಬರ್‌ನಲ್ಲಿಯೇ ಲ್ಯಾಪ್ಸ್ ಆಗಿದ್ದು, ನವೀಕರಣ ಮಾಡಿರಲಿಲ್ಲ. ಫಿಟೆ°ಸ್ ಸರ್ಟಿಫಿಕೆಟ್ ನವೀಕರಿಸದೆ ಇರುವುದು ಬೆಳಕಿಗೆ ಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ಅದು ವೈರಲ್ ಆಗಿತ್ತು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಈ ವಾಹನದಲ್ಲಿ ಟೋಯಿಂಗ್ ಮಾಡುವುದನ್ನು ಸದ್ಯದ ಮಟ್ಟಿಗೆ ತಡೆ ಹಿಡಿದಿದ್ದಾರೆ.
ನಿಯಮ ಉಲ್ಲಂಘಿಸಿದ ವಾಹನಗಳನ್ನು ಎತ್ತಂಗಡಿ ಮಾಡುವ ಟೋಯಿಂಗ್ ವಾಹನವೇ ನಿಯಮ ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಟೋಯಿಂಗ್ ವ್ಯವಸ್ಥೆಯನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಗುತ್ತಿಗೆಗೆ ಪಡೆದು ಎರಡು ವರ್ಷಗಳಿಂದ ನಿರ್ವಹಣೆ ಮಾಡುತ್ತಿದ್ದಾರೆ. ನಾಲ್ಕು ಟೋಯಿಂಗ್ ವಾಹನಗಳಲ್ಲಿ ಒಂದು ವಾಹನ ಕೋವಿಡ್ ಸಂದರ್ಭದಲ್ಲಿ ಫಿಟೆ°ಸ್ ತಪಾಸಣೆಗಾಗಿ ಬೆಂಗಳೂರಿಗೆ ಕೊಂಡು ಹೋಗಿದ್ದು, ಅದು ಇನ್ನೂ ಬಂದಿಲ್ಲ. ಉಳಿದ 3 ವಾಹನಗಳಲ್ಲಿ ಒಂದು ವಾಹನದ ವಿಮೆ ಮತ್ತು ಫಿಟೆ°ಸ್ ಅವಧಿ 2019 ನವೆಂಬರ್‌ನಲ್ಲಿ ಮುಗಿದಿದ್ದರೂ ಅನಧಿಕೃತವಾಗಿ ಕಾರ್ಯಾಚರಣೆಗೆ ಇಳಿಸಲಾಗಿತ್ತು.
ಪೊಲೀಸರ ಸೂಚನೆಯಂತೆ ಈ ವಾಹನದ ಇನ್ಸುರೆನ್ಸ್ ನ್ನು ಶನಿವಾರ ನವೀ ಕರಿಸಲಾಗಿದೆ. ಫಿಟೆ°ಸ್ ಸರ್ಟಿಫಿಕೆಟ್ (ಕ್ಷಮತಾ ಪ್ರಮಾಣ ಪತ್ರ) ಇನ್ನಷ್ಟೇ ಆಗ ಬೇಕಾಗಿದೆ. ಹಾಗಾಗಿ ಈ ವಾಹನದಲ್ಲಿ ಟೋಯಿಂಗ್ ಮಾಡುವುದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟೋಯಿಂಗ್ ವಾಹನದ ಮಾಲಕರು ಈಗ ಇನ್ಶೂರೆನ್ಸ್ ಪಾವತಿಸಿದ್ದಾರೆ. ಫಿಟೆ°ಸ್ ಸರ್ಟಿಫಿಕೆಟ್ ನವೀಕರಣ ಇನ್ನಷ್ಟೇ ಆಗ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಈ ವಾಹನದಲ್ಲಿ ಟೋಯಿಂಗ್ ಮಾಡುವುದನ್ನು ನಿಲ್ಲಿಸಲಾಗಿದೆ. –ನಟರಾಜ್, ಎಸಿಪಿ, ಟ್ರಾಫಿಕ್
ಟೋಯಿಂಗ್ ವಾಹನ ನಿಯಮ ಉಲ್ಲಂಘಿಸಿ ಓಡಾಡುತ್ತಿದೆ ಎಂದರೆ ಈ ವಾಹನದ ಟೋಯಿಂಗ್ ಕಾರ್ಯಾಚರಣೆಯೂ ಅಕ್ರಮ ವಲ್ಲವೇ? ನಿಯಮ ಉಲ್ಲಂಘಿಸಿದ ವಾಹನ ಮಾಲಕರಿಂದ ದಂಡ ವಸೂಲಿ ಮಾಡುವ ಇಂತಹ ಟೋಯಿಂಗ್ ವಾಹ ನಕ್ಕೆ ದಂಡ ವಿಧಿಸುವವರು ಯಾರು? 1ವರ್ಷದಲ್ಲಿ ವಸೂಲಿ ಮಾಡಿದ ದಂಡ ಮೊತ್ತವನ್ನು ಸಂಬಂಧಪಟ್ಟ ವಾಹನ ಮಾಲಕರಿಗೆ ಹಿಂದಿರುಗಿಸುವರೇ? –ಪ್ರಸನ್ನ ಕುಮಾರ್, ನಾಗರಿಕ
ನಿಯಮ ಉಲ್ಲಂಘಿಸಿದ ವಾಹನಗಳನ್ನು ಹೊತ್ತೂಯ್ಯುವ ಟೋಯಿಂಗ್ ವಾಹನದಲ್ಲಿ ಓರ್ವ ಪೊಲೀಸ್ ಅಧಿಕಾರಿ ಇರುತ್ತಾರೆ. ಟೋಯಿಂಗ್ ಮಾಡುವ ವಾಹನದ ವಿಮೆ, ಎಫ್‌ಸಿ ಇತ್ಯಾದಿ ದಾಖಲೆಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸುವುದು ಅವರ ಜವಾಬ್ದಾರಿ ಅಲ್ಲವೇ? ಈ ರೀತಿ ಕಾರ್ಯಾಚರಿಸುತ್ತಿರುವ ವಾಹನಗಳ ವಿರುದ್ಧ ಪೊಲೀಸ್ ಆಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು. –ರವಿ, ಮಂಗಳೂರು, ನಾಗರಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.