ತೊಕ್ಕೊಟ್ಟು ಜಂಕ್ಷನ್: ಕಟ್ಟಡಗಳ ತೆರವು
Team Udayavani, Jul 11, 2017, 2:30 AM IST
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ಕೆ ಕಟ್ಟಡಗಳ ತೆರವು ಕಾರ್ಯಾಚರಣೆಯು ಸೋಮವಾರ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಡೆಯಿತು. ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಕೆಲವೊಂದು ಕಟ್ಟಡಗಳನ್ನು ಭಾಗಶಃ ತೆರವುಗೊಳಿಸಿ ತೆರವು ಕಾರ್ಯವನ್ನು ಕಟ್ಟಡದ ಮಾಲಕರು ನಿಲ್ಲಿಸಿದ್ದು, ಕೆಲವು ಅಂಗಡಿಗಳಿಗೆ ಮುಂಗಡ ಹಣ ನೀಡದ ಕಾರಣ ತೆರವುಗೊಂಡಿದ್ದ ಕಟ್ಟಡದಲ್ಲಿ ಎರಡು ಅಂಗಡಿಗಳು ಕಾರ್ಯನಿರ್ವನಿಹಿಸುತ್ತಿತ್ತು. ಇನ್ನೊಂದು ಕಟ್ಟಡದಲ್ಲಿ ಖಾಸಗಿಯಾಗಿ ತೆರವು ಕಾರ್ಯ ನಡೆಯುತ್ತಿವೆ. ಕೆಳ ಅಂತಸ್ತಿನ ಕಟ್ಟಡದ ಎದುರು ಭಾಗದ ಶೀಟ್‌ಗಳನ್ನು ಹೆದ್ದಾರಿ ಪ್ರಾಧಿಕಾರದಿಂದ ತೆರವುಗೊಳಿಸಲಾಯಿತು.
ಅತಂತ್ರದಲ್ಲಿ ಉಳಿದ ಅಂಗಡಿಗಳು
ತೊಕ್ಕೊಟ್ಟಿನಲ್ಲಿ ಸೋಮವಾರ ಕಟ್ಟಡ ತೆರವಿಗೆ ಆಗಮಿಸಿದ್ದ ಅಧಿಕಾರಿಗಳು ಎರಡೂ ಕಟ್ಟಡದ ವಿದ್ಯುತ್ ನಿಲುಗಡೆ ಮಾಡಿದ್ದು, ಇದರಿಂದ ಕಟ್ಟಡದ ಒಳಭಾಗದ ಅಂಗಡಿ ವ್ಯಾಪಾರಸ್ಥರಿಗೆ ತೊಂದರೆಯಾಯಿತು. ವಿದ್ಯುತ್ ನಿಲುಗಡೆಯಿಂದ ಖಾಸಗಿಯಾಗಿ ತೆರವು ಮಾಡುತ್ತಿದ್ದ ಕಾಮಗಾರಿಗೆ ಸಮಸ್ಯೆಯಾದ್ದರಿಂದ ಕಾರ್ಮಿಕರು ವಿದ್ಯುತ್ ಇಲ್ಲದೆ ಕಾಮಗಾರಿಯನ್ನು ಅರ್ಧದಲ್ಲೇ ನಿಲ್ಲಿಸಿ ತೆರಳಿದರು. ಹೆದ್ದಾರಿಗೆ ತಾಗಿರುವ ಎದುರು ಭಾಗದ ಅಂಗಡಿಗಳಿಗೆ ಮೊದಲೇ ಮಾಹಿತಿ ನೀಡಿದ್ದರು. ಆದರೆ ಹಿಂಬದಿಯ ಅಂಗಡಿಗಳಿಗೆ ಮಾಹಿತಿ ನೀಡದೆ ವಿದ್ಯುತ್ ಸ್ಥಗಿತಗೊಳಿಸಿದ್ದರಿಂದ ಅಂಗಡಿಗಳ ವ್ಯಾಪಾರಸ್ಥರು ಆಕ್ರೋಶಗೊಂಡರು. ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಮೇಲ್ಸೇತುವೆ ಕಾಮಗಾರಿಯೂ ಮಂದಗತಿಯಲ್ಲಿ ನಡೆಯುತ್ತಿದ್ದು, ಡಿಸೆಂಬರ್ ಒಳಗೆ ಜಂಕ್ಷನ್ ಕಾಮಗಾರಿ ನಡೆಸುವ ಹಿನ್ನಲೆಯಲ್ಲಿ ಅಂಗಡಿ ಕಟ್ಟಡಗಳನ್ನು ತೆರವುಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.