ಸ್ಥಳೀಯ ವಾಹನಕ್ಕೂ ಟೋಲ್: ಇಂದಿನ ಪ್ರತಿಭಟನೆಗೆ ಪಕ್ಷಾತೀತ ಬೆಂಬಲ
Team Udayavani, Jul 16, 2019, 5:24 AM IST
ಸುರತ್ಕಲ್,: ರಾಷ್ಟ್ರೀಯ ಹೆದ್ದಾರಿ ಎನ್‌ಐಟಿಕೆ ಬಳಿಯ ಟೋಲ್‌ಗೇಟ್‌ನಲ್ಲಿ ಜು.16 ರಿಂದ ಕೆಎ 19 ನೋಂದಣಿ ವಾಹನಗಳಿಗೂ ಸುಂಕ ಸಂಗ್ರಹ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಜನರ ಆಗ್ರಹವನ್ನು ಮನ್ನಿಸದೆ ಶುಲ್ಕ ಸಂಗ್ರಹಿಸಿದರೆ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ನಿರ್ಧರಿಸಿವೆ.
ಸುರತ್ಕಲ್ ಟೋಲ್‌ಗೇಟ್ ಆರಂಭ ವಾದಾಗಿನಿಂದ ಅಲ್ಲಿನ ಅವ್ಯವಸ್ಥೆ, ಬೇಕಾಬಿಟ್ಟಿ ಟೋಲ್ ಸಂಗ್ರಹವನ್ನು ವಿರೋಧಿಸುತ್ತ ಬಂದಿರುವ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ಸೋಮವಾರ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ, ಟೋಲ್ ಗೇಟನ್ನು ಶಾಶ್ವತವಾಗಿ ಮುಚ್ಚಬೇಕು, ಜು. 16 ರಿಂದ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಟೋಲ್ ಸಂಗ್ರಹಕ್ಕೆ ಮುಂದಾದಲ್ಲಿ ಮಂಗಳವಾರ ಪಕ್ಷಾತೀತ ಪ್ರತಿಭಟನೆ ನಡೆಸಲು ಸಮಿತಿ ನಿರ್ಧರಿಸಿದೆ. ಬಿಜೆಪಿ ಬೆಂಬಲ ಸೂಚಿಸಿದೆ.
ಟೋಲ್ ಸಂಗ್ರಹಣೆ ಗುತ್ತಿಗೆದಾರ ಕೇಶವ ಅಗರ್‌ವಾಲ್ ಸಂಸ್ಥೆ ತನಗೆ ದಿನವೊಂದಕ್ಕೆ 2 ಲಕ್ಷ ರೂ.ಗಳಷ್ಟು ನಷ್ಟವಾಗುತ್ತಿದೆ ಎಂದು ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದು, ಜು. 16ರಿಂದ ಸ್ಥಳೀಯ ನೋಂದಣಿಯ ವಾಹನಗಳಿಂದಲೂ ಶುಲ್ಕ ಸಂಗ್ರಹಿಸಲು ಸಂಸ್ಥೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಈ ಬಗ್ಗೆ ಪೊಲೀಸ್ ಭದ್ರತೆ ಒದಗಿಸುವಂತೆ ಸೂಚಿಸಿದ್ದರು.
ಇಂದು ಬೆಳಗ್ಗೆ ಪ್ರತಿಭಟನೆ
ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ಆರಂಭವಾಗಲಿರುವ ಜು.16ರಂದು ಬೆಳಗ್ಗೆ 7.30ಕ್ಕೆ ಪಕ್ಷಾತೀತವಾಗಿ ಪ್ರಮುಖರು, ನಾಗರಿಕರ ಬೆಂಬಲದೊಂದಿಗೆ ಟೋಲ್ ಗೇಟ್ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಟೋಲ್ ಸಂಗ್ರಹಕ್ಕೆ ಮುಂದಾದರೆ ಸಾಮೂಹಿಕವಾಗಿ ತಡೆಯಲು ತೀರ್ಮಾನಿಸಲಾಗಿದೆ.
ಖಾದರ್ ಪತ್ರ
ಇದೇವೇಳೆ ಸುರತ್ಕಲ್ ಟೋಲ್ ಕೇಂದ್ರದಲ್ಲಿ ಜು. 16ರಿಂದ ಸ್ಥಳೀಯರಿಂದ ಟೋಲ್ ಸಂಗ್ರಹಿಸುವ ಹೆದ್ದಾರಿ ಪ್ರಾ ಧಿಕಾರದ ಕ್ರಮವನ್ನು ತಡೆಯುವಂತೆ ಜಿಲ್ಲಾಧಿಕಾರಿಗೆ ಸೂಚಿಸಲು ಉಸ್ತುವಾರಿ ಸಚಿವ ಯು.ಟಿ. ಖಾದರ್ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಮತ್ತು ತಾತ್ಕಾಲಿಕ ನೆಲೆಯಲ್ಲಿರುವ ಅಕ್ರಮ ಟೋಲ್ ಗೇಟ್ ಮುಚ್ಚುವ ನಿಟ್ಟಿನಲ್ಲಿ ಮುಂದುವರಿಯಲು ಸೂಚಿಸಿದ್ದಾರೆ. ಟೋಲ್ ಗೇಟ್ ವಿರೋ ಧಿ ಹೋರಾಟ ಸಮಿತಿ, ಸುರತ್ಕಲ್ ಇವರ ಮನವಿಗೆ ಸ್ಪಂದಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇಲ್ಲಿರುವುದು ಹೆದ್ದಾರಿಯಲ್ಲ; ಬರೇ ಹೊಂಡಗುಂಡಿ
ಎನ್‌ಐಟಿಕೆಯಿಂದ ಆಚೆಗಿನ ರಾಷ್ಟ್ರೀಯ ಹೆದ್ದಾರಿ ಭಾಗ ಭಾರೀ ಹೊಂಡ ಗುಂಡಿಗಳಿಂದ ಕೂಡಿದೆ. ಕೊಟ್ಟಾರ ಚೌಕಿ ವರೆಗಿನ ಹೆದ್ದಾರಿಯ ಹಲವೆಡೆ ಹೊಂಡ ಗುಂಡಿ, ಸರ್ವಿಸ್ ರಸ್ತೆ ಇಲ್ಲ ಗಳಿಂದ ಸಂಚಾರ ತ್ರಾಸದಾಯಕವಾಗಿದೆ. ಪ್ರತೀ ವರ್ಷ ಮಾರ್ಚ್ -ಎಪ್ರಿಲ್‌ನಲ್ಲಿ ಮರು ಡಾಮರೀಕರಣ ಮಾಡಿದ ಬಳಿಕ ಒಂದೇ ಮಳೆಗೆ ಸಂಚಾರ ಅಸಾಧ್ಯ ಸ್ಥಿತಿಗೆ ಮರಳುವುದು ಈ ರಸ್ತೆಯ ಸ್ಥಿತಿ. ಇದು ಮಳೆಗಾಲದ ಸ್ಥಿತಿಯಾದರೆ ಬೇಸಗೆಯಲ್ಲೂ ಸುಸ್ಥಿತಿಯಲ್ಲಿರುತ್ತದೆ ಎಂದೇನಿಲ್ಲ. ಆಗ ನೀರಿಲ್ಲದ ಗುಂಡಿ ಗಳಲ್ಲಿ ಇಳಿದೇಳಬೇಕು, ಧೂಳಿಗೆ ಮೈಯೊಡ್ಡಬೇಕು.
ಇಲ್ಲಗಳಿಗೆ ಟೋಲ್
ಸರ್ವಿಸ್ ರಸ್ತೆಯಿಲ್ಲ, ರಸ್ತೆ ಬದಿ ಚರಂಡಿ, ಫುಟ್‌ಪಾತ್- ಹೀಗೆ ಇಲ್ಲಗಳೇ. ಮಿಗಿಲಾಗಿ ಸುರತ್ಕಲ್ ಟೋಲ್ ಕೇಂದ್ರದಲ್ಲೇ ಹೆದ್ದಾರಿ ಟೋಲ್ ಗೇಟ್‌ಗಳಲ್ಲಿ ಇರಲೇ ಬೇಕಾದ ಸೌಲಭ್ಯಗಳಿಲ್ಲ. ಕೇಂದ್ರವೇ ತಗಡು ಶೀಟಿನಡಿ ಕಾರ್ಯಾ ಚರಿಸುತ್ತಿರುವುದು ಇಲ್ಲಿನ ದುಃಸ್ಥಿತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.