ಸ್ಥಳೀಯರಿಗೆ ಟೋಲ್: ಮುಂದೂಡಿಕೆ ಸಾಧ್ಯತೆ
ಎನ್‌ಎಚ್ಎಐನಿಂದ ಬಾರದ ಸ್ಪಷ್ಟ ನಿರ್ದೇಶನ, ಡಿಸಿ ಕಾರ್ಯವ್ಯಸ್ತ
Team Udayavani, Jul 23, 2019, 5:47 AM IST
ಸುರತ್ಕಲ್: ಸುರತ್ಕಲ್ ಟೋಲ್ ಕೇಂದ್ರದಲ್ಲಿ ಜು.16ರಿಂದ ಕೆಎ 19 ನೋಂದಾಯಿತ ಖಾಸಗಿ ಕಾರುಗಳು ಒಂದು ಬಾರಿ ಓಡಾಟಕ್ಕೆ ಕನಿಷ್ಠ ದರ ರೂ.25 ಶುಲ್ಕ ಪಾವತಿ ಮಾಡುವುದು ಸದ್ಯದ ಮಟ್ಟಿಗೆ ಮುಂದೂಡಿಕೆಯಾಗುವ ಲಕ್ಷಣಗಳು ಗೋಚರಿಸಿವೆ.
ಭಾರೀ ಮಳೆ ನಿಭಾವಣೆ ಮತ್ತು ಡೆಂಗ್ಯೂ ನಿರ್ಮೂಲನ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಇಲಾಖೆಗಳು ತೊಡಗಿಕೊಂಡಿರುವುದು ಒಂದು ಕಾರಣವಾದರೆ, ಇನ್ನೊಂದೆಡೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಎನ್‌ಎಚ್ಎಐ ಚೆಯರ್‌ಮನ್ ಅವರಿಗೆ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಮತ್ತು ಟೋಲ್ನ್ನು ವಿಲೀನಗೊಳಿಸುವ ಕಾರ್ಯ ಚುರುಕುಗೊಳಿಸುವಂತೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಹೆದ್ದಾರಿ ಪ್ರಾಧಿಕಾರದ ನಿರ್ಧಾರ ಸ್ಪಷ್ಟವಾಗಲಿದೆ.
ಜು.16ರಂದು ಸ್ಥಳೀಯ ಖಾಸಗಿ ಕಾರುಗಳಿಗೆ ಸುಂಕ ಪಡೆಯಲು ಪೊಲೀಸ್ ಭದ್ರತೆ ನೀಡುವಂತೆ ಎನ್‌ಎಚ್ಎಐ ದ.ಕ. ಜಿಲ್ಲಾಧಿಕಾರಿಯವರಿಗೆ ಮುಖ್ಯ ಕಾರ್ಯದರ್ಶಿಯವರ ಮೂಲಕ ಸೂಚಿಸಿತ್ತು. ಏಕಮುಖ ಸಂಚಾರಕ್ಕೆ ರೂ.25, ಪಾಸ್ ದರ 265 ರೂ. ನಿಗದಿ ಮಾಡಲಾಗಿತ್ತು. ಸ್ಥಳೀಯ 20 ಕಿ.ಮೀ. ವ್ಯಾಪ್ತಿಯ ಖಾಸಗಿ ಕಾರು ಮಾಲಕರಿಗೆ ಈ ರಿಯಾಯಿತಿ ದರ ಅನ್ವಯವಾಗುತ್ತದೆ.
ಇದರ ವಿರುದ್ಧ ಸ್ಥಳೀಯರ ಹೋರಾಟದ ಫಲವಾಗಿ ಜಿಲ್ಲಾಡಳಿತ ಸ್ಥಳೀಯರಿಗೆ ಜು.23ರ ವರೆಗೆ ವಿನಾಯಿತಿ ನೀಡುವಂತೆ ಸೂಚಿಸಿತ್ತು. ಇದುವರೆಗೆ ಯಾವುದೇ ಸ್ಪಷ್ಟ ಸೂಚನೆ ಬಾರದಿರುವ ಹಿನ್ನೆಲೆಯಲ್ಲಿ ಸುಂಕ ನೀಡುವುದು ಸ್ಥಳೀಯರಿಗೆ ಅನಿವಾರ್ಯವಾಗಲಿದೆಯೋ ಅಥವಾ ರದ್ದಾಗಲಿದೆಯೋ ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Mangaluru: ಕರಾವಳಿಯಲ್ಲಿ ಈ ಬಾರಿ ವಾಡಿಕೆಯಂತೆ ಚಳಿ
Fraud Case: ಎಪಿಕೆ ಫೈಲ್ ಕಳುಹಿಸಿ 1.31 ಲ.ರೂ. ವಂಚನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.