ಕೇರಳದಲ್ಲಿ ಟೊಮೇಟೊ ಜ್ವರ : ಆರೋಗ್ಯ ಇಲಾಖೆಯಿಂದ ಕರಾವಳಿಯಲ್ಲಿ ವಿಶೇಷ ನಿಗಾ
Team Udayavani, May 12, 2022, 10:55 PM IST
ಮಂಗಳೂರು : ಕೇರಳದಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬಂದ ಟೊಮೇಟೊ ಜ್ವರದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವಿಶೇಷ ನಿಗಾ ಇರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಈ ಕಾಯಿಲೆಯು ಸಾಮಾನ್ಯವಾಗಿ ಚರ್ಮದ ತುರಿಕೆ, ಮೈಯಲ್ಲಿ ಕೆಂಪಾಗುವುದು, ತೀವ್ರಜ್ವರ, ಮೈ-ಕೈ ನೋವು, ಕೀಲು ನೋವು, ಆಯಾಸ ಮೊದಲಾದ ಲಕ್ಷಣಗಳಿರುತ್ತದೆ. ಜಿಲ್ಲೆಯ ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಆಸ್ಪತ್ರೆ, ವೆನಾÉಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಈ ರೀತಿಯ ಲಕ್ಷಣಗಳಿರುವ ಮಕ್ಕಳು ಚಿಕಿತ್ಸೆ ಪಡೆದಿದ್ದರೆ ವಿವರಗಳನ್ನು ಪ್ರತೀ ದಿನ ಅಪ್ಡೇಟ್ ಮಾಡುವಂತೆ ಸೂಚಿಸಲಾಗಿದೆ’ ಎಂದಿದ್ದಾರೆ.
“ಕೋವಿಡ್ಗೂ ಈ ಕಾಯಿಲೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಮಕ್ಕಳ ಮೈಯಲ್ಲಿ ಯಾವುದೇ ರೀತಿಯ ಗುಳ್ಳೆಗಳು ಕಂಡುಬಂದಲ್ಲಿ ವೈದ್ಯರ ಭೇಟಿಯಾಗಬೇಕು. ಸದ್ಯಕ್ಕೆ ದ.ಕ. ಜಿಲ್ಲೆಯಲ್ಲಿ ಈ ರೀತಿಯ ಗುಣಲಕ್ಷಣ ಇರುವ ಮಕ್ಕಳ ಮಾಹಿತಿ ಆರೋಗ್ಯ ಇಲಾಖೆಗೆ ದೊರಕಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ : ಮಡಿಕೇರಿ: ಪುತ್ರಿಯ ವಿವಾಹ ಮುಗಿದ ಕೆಲವೇ ಹೊತ್ತಿನಲ್ಲಿ ಸಾವನ್ನಪ್ಪಿದ ಅಪ್ಪ
ಮಂಗಳೂರಿನಲ್ಲಿ ಕಂಡುಬಂದಿತ್ತೇ?
ಟೊಮೇಟೊ ಜ್ವರ ಮಂಗಳೂರಿನಲ್ಲಿ ಈ ಹಿಂದೆ ಕಂಡುಬಂದಿತ್ತೇ? ಎಂಬ ಅನುಮಾನ ವ್ಯಕ್ತವಾಗಿದೆ. ಕುತ್ತಾರು ಮೂಲದ ಸುಧಾಕರ್ ಅವರ ಎರಡೂವರೆ ವರ್ಷದ ಮಗುವಿಗೆ ಮೂರು ವಾರದ ಹಿಂದೆ ಜ್ವರ ಸಹಿತ ಕಾಲಿನಡಿ, ಮೊಣಕಾಲು, ಮುಖ, ಕೈಯಲ್ಲಿ ಟೊಮೇಟೊ ಬಣ್ಣದ ಗುಳ್ಳೆಗಳು ಮೂಡಿದ್ದವು. ತತ್ಕ್ಷಣ ವೈದ್ಯರನ್ನು ಭೇಟಿಯಾಗಿದ್ದರು. ಸೂಕ್ತ ಚಿಕಿತ್ಸೆಯ ಬಳಿಕ ಗುಣಮುಖವಾಗಿದೆ ಎನ್ನುತ್ತಾರೆ ಅವರು. ವೈದ್ಯ ಡಾ| ರವಿಕಿರಣ್ ಪ್ರತಿಕ್ರಿಯಿಸಿ, ಈ ಗುಣಲಕ್ಷಣ ಹೊಂದಿದ ಜ್ವರ ಹೊಸತಲ್ಲ. “ಹ್ಯಾಂಡ್ ಫುಟ್ ಮೌತ್’ ಎಂದು ಇದಕ್ಕೆ ಕರೆಯುವುದುಂಟು. ಈ ಗುಣಲಕ್ಷಣ ಹೊಂದಿದ ರೋಗಿಗಳು ಈ ಹಿಂದೆಯೂ ಚಿಕಿತ್ಸೆ ಪಡೆದಿದ್ದರು’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.