ನಾಸಿಕ್‌ನಿಂದ ಬರಲಿದೆ ಟೊಮೇಟೊ; ಕರಾವಳಿಯಲ್ಲಿ ತರಕಾರಿ ಮತ್ತಷ್ಟು ತುಟ್ಟಿ
Team Udayavani, Nov 23, 2021, 5:16 AM IST
ಮಂಗಳೂರು/ಉಡುಪಿ: ಅಕಾಲಿಕ ಮಳೆಯಿಂದಾಗಿ ಟೊಮೇಟೊ ಸಹಿತ ತರಕಾರಿ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಗ್ರಾಹಕರು ಚಿಂತಾಕ್ರಾಂತ ರಾಗಿದ್ದಾರೆ.
ಈ ನಡುವೆ ಕರಾವಳಿಗೆ ಮಹಾರಾಷ್ಟ್ರದ ನಾಸಿಕ್‌ನಿಂದ ಟೊಮೇಟೊ ಪೂರೈಕೆ ಯಾಗಲಿದ್ದು, ಶತಕ ದಾಟಿದ್ದ ಅದರ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಉಡುಪಿ ನಗರದ ತರಕಾರಿ ವ್ಯಾಪಾರಿ ಶಫೀಕ್ ತಿಳಿಸಿದ್ದಾರೆ.
ಉಡುಪಿ, ಮಂಗಳೂರು ಮಾರುಕಟ್ಟೆ ಯಲ್ಲಿ ಟೊಮೇಟೊಗೆ 110 ರೂ. ನಿಗದಿ ಯಾಗಿದೆ. ರಾಜ್ಯದಲ್ಲಿ ಬಿಟ್ಟುಬಿಟ್ಟು ಮಳೆ ಯಾಗುತ್ತಿದ್ದು, ತೇವಾಂಶ ಅಧಿಕವಾಗಿ ರುವುದರಿಂದ ಟೊಮೇಟೊ ಸಹಿತ ತರಕಾರಿ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಪರಿಣಾಮ ಪೂರೈಕೆ ಕಡಿಮೆಯಾಗಿ ಕರಾವಳಿಯ ಜನ ಟೊಮೇಟೊ ಸಹಿತ ತರಕಾರಿ ಕೊಳ್ಳಲಾಗದೆ ಚಿಂತಿತರಾಗಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮಾರುಕಟ್ಟೆ ಗಳಲ್ಲಿ ನುಗ್ಗೆ ಧಾರಣೆ ಡಬಲ್ ಸೆಂಚುರಿ ದಾಟಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ತರಕಾರಿ ಫಸಲು ಬಹುತೇಕ ನಾಶ ವಾಗಿದೆ. ತರಕಾರಿ ಗಿಡಗಳು ಹೂವು ಬಿಡುವ ಸಂದರ್ಭದಲ್ಲಿ ಮಳೆ ಹನಿ ಬಿದ್ದಾಗ ಹೂವು ನಾಶವಾಗಿ ಫಲ ಬಿಡುವ ಸಾಧ್ಯತೆಯೇ ಇರುವುದಿಲ್ಲ. ಇನ್ನೂ ಕೆಲವು ಕಡೆ ಮಳೆ ನೀರು ನಿಂತು ತರಕಾರಿ ಗಿಡಗಳು ಹಾಗೂ ಇನ್ನೂ ಕೆಲವು ಭಾಗಗಳಲ್ಲಿ ಬಿಟ್ಟ ಫಲಗಳು ಕೊಳೆತು ಹೋಗಿವೆ. ಇದು ತರಕಾರಿ ಕೊರತೆಗೆ ಕಾರಣ.
ಇದನ್ನೂ ಓದಿ:ವಿಜಯಪುರ: ಪಕ್ಷೇತರ ಸ್ಪರ್ಧೆಯ ಭೀತಿ; ಸುನಿಲ ಗೌಡಗೆ ಕಾಂಗ್ರೆಸ್ ಟಿಕೇಟ್
ಮಂಗಳೂರಿನ ಹಾಪ್‌ಕಾಮ್ಸ್ ವ್ಯವಸ್ಥಾಪಕ ರವಿರಾಜ್ ಶೆಟ್ಟಿ ಹೇಳುವ ಪ್ರಕಾರ ಈಗ ತರಕಾರಿಗಳ ಕೊರತೆ ಇದೆ; ಬೇಡಿಕೆ ಇರುವ ಪ್ರಮಾಣದಲ್ಲಿ ತರಕಾರಿ ಪೂರೈಕೆ ಆಗುತ್ತಿಲ್ಲ. ಸರಬರಾಜು ಆಗುವ ಅಲ್ಪ ಸ್ವಲ್ಪ ತರಕಾರಿಗಳ ಗುಣಮಟ್ಟವೂ ಚೆನ್ನಾಗಿಲ್ಲ. ಬೇಗನೆ ಕೊಳೆತು ಹೋಗುತ್ತಿವೆ.
ಮಂಗಳೂರು, ಉಡುಪಿಯಲ್ಲಿ ಸೋಮವಾರ ತರಕಾರಿ ಬೆಲೆ
ಟೊಮೇಟೊ 110 – 120 ರೂ., ಬೀನ್ಸ್ 75 ರೂ., ಅಲಸಂಡೆ 75 ರೂ., ಹಸಿ ಮೆಣಸು 60 ರೂ., ದೊಣ್ಣೆ ಮೆಣಸು 112 ರೂ., ಬದನೆ 56 ರೂ., ಹೀರೆ 75 ರೂ., ಕಾಲಿಫ್ಲವರ್ 80 ರೂ., ಕ್ಯಾಬೆಜ್ 40 ರೂ., ಮುಳ್ಳು ಸೌತೆ 25 ರೂ., ಸಾಂಬಾರು ಸೌತೆ 45 ರೂ., ಮೂಲಂಗಿ 56 ರೂ., ತೊಂಡೆ 75 ರೂ., ಬೆಂಡೆ 75 ರೂ., ಸೋರೆ 65 ರೂ., ಬಟಾಟೆ 32 ರೂ., ಈರುಳ್ಳಿ 38 ರೂ. , ಬೆಳ್ಳುಳ್ಳಿ 120 ರೂ., ನುಗ್ಗೆ 240 ರೂ., ಕ್ಯಾರೆಟ್ 100 ರೂ., ಬೀಟ್‌ರೂಟ್ 50 ರೂ., ಪಡುವಲ 56 ರೂ., ಸುವರ್ಣಗೆಡ್ಡೆ 33 ರೂ., ಕೊತ್ತಂಬರಿ ಸೊಪ್ಪು 125 ರೂ., ಪಾಲಕ್ ಸೊಪ್ಪು 75 ರೂ.
ಹಣ್ಣು ಹಂಪಲುಗಳ ಬೆಲೆಯೂ ಏರಿಕೆಯಾಗಿದೆ. ಕಿತ್ತಳೆ 175 ರೂ., ಸೇಬು 180- 215 ರೂ., ದಾಳಿಂಬೆ 165 ರೂ. ಮೂಸಂಬಿ 56 ರೂ. ಧಾರಣೆ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.