ಮಾಲಾಧಾರಿಗಳಿಗೆ ಕಠಿನ “ಯಾತ್ರೆ’!
ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಕೋವಿಡ್ ನಿಯಮಾವಳಿ ಬಿಗು
Team Udayavani, Dec 12, 2020, 6:02 AM IST
ಮಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಶಬರಿಮಲೆ ಪ್ರವೇಶಕ್ಕೆ ಕಠಿನ ನಿಯಮಾವಳಿ ರೂಪಿಸಿರುವ ಕಾರಣ ಅಯ್ಯಪ್ಪ ಮಾಲಾಧಾರಿಗಳ ಈ ಬಾರಿಯ ಯಾತ್ರೆ ಹಲವಾರು ಸಂಕಟಗಳನ್ನು ಸೃಷ್ಟಿಸಿದೆ.
ದ.ಕ. ಮತ್ತು ಉಡುಪಿ ಭಾಗದಿಂದ ಪ್ರತೀ ವರ್ಷ ಲಕ್ಷಾಂತರ ಅಯ್ಯಪ್ಪ ಮಾಲಾಧಾರಿಗಳು 48 ದಿನಗಳ ಕಠಿನ ವೃತಾಚರಣೆ ಪಾಲಿಸಿಕೊಂಡು ತೆರಳುತ್ತಾರೆ. ಆದರೆ ಈ ಬಾರಿ ಕೊರೊನಾ ಮತ್ತು ಕಠಿನ ನಿಯಮಾವಳಿಯ ಪರಿಣಾಮ ಶೇ. 90ರಷ್ಟು ಮಾಲಾಧಾರಿಗಳ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ. ಈಗ ರೈಲು ಸೇವೆ ಕೂಡ ಪೂರ್ಣಮಟ್ಟದಲ್ಲಿ ಇಲ್ಲದೆ ಯಾತ್ರೆಗೆ ಮತ್ತಷ್ಟು ಸಮಸ್ಯೆ ಉಂಟಾಗಿದೆ.
ಬಿಗಿ ನಿಯಮಾವಳಿ
ಕೇರಳ ಬಿಗಿ ನಿಯಮಾವಳಿ ರೂಪಿಸಿದೆ. ದಿನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವಲ್ಲಿ ಸದ್ಯ 2,000 ಮಂದಿ ಮಾತ್ರ ತೆರಳುವಂತೆ ನಿರ್ಬಂಧಿಸಿದೆ. ಜತೆಗೆ ಆನ್‌ಲೈನ್ ಮೂಲಕ ಟಿಕೆಟ್ ಪಡೆದು ಆಗಮಿಸುವಂತೆ ಸೂಚಿಸಿದೆ. ಈ ನಿಯಮ ಅಯ್ಯಪ್ಪ ಮಾಲಾಧಾರಿಗಳಿಗೆ ಸಮಸ್ಯೆಯಾಗಿದೆ. ಭಕ್ತರಿಗೆ ಬೇಕಾದ ದಿನ ಸಿಗುವುದಿಲ್ಲ ಜತೆಗೆ ಪ್ರತೀ ದಿನವೂ ಬುಕ್ಕಿಂಗ್ ಮಾಡಲು ಬಯಸಿದಾಗ “ಫುಲ್’ ಎಂಬ ಒಕ್ಕಣೆ ಬರುತ್ತಿದೆ. ಈ ಮಧ್ಯೆ ಕರಾವಳಿಯಿಂದ ಅರ್ಜಿ ಸಲ್ಲಿಸಿದ ಶೇ.50ಕ್ಕೂ ಅಧಿಕ ಮಂದಿಗೆ ಇನ್ನೂ ದಿನಾಂಕ ಸಿಕ್ಕಿಲ್ಲ!. ಟಿಕೆಟ್ ಸಿಗದಿದ್ದರೆ ಮನೆಯಲ್ಲಿಯೇ ಅಥವಾ ಸ್ಥಳೀಯ ಅಯ್ಯಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅನ್ನದಾನ ಸೇವೆ ನೀಡುವ ಬಗ್ಗೆ ಹಲವು ಭಕ್ತರು ಚಿಂತನೆ ನಡೆಸಿದ್ದಾರೆ.
ಪಂಪಾ ಸ್ನಾನವಿಲ್ಲ!
ಯಾತ್ರೆಯ ಸಂಪ್ರದಾಯದ ಪ್ರಕಾರ ಪಂಪಾ ನದಿಯಲ್ಲಿ ಸ್ನಾನ ಮಾಡಿ ಹರಕೆ ರೂಪದಲ್ಲಿ ಅಭಿಷೇಕ ಸಲ್ಲಿಸಬೇಕು. ಆದರೆ ಈಗ ಇದಕ್ಕೆ ನಿಷೇಧವಿದೆ. ಇರುಮುಡಿಯನ್ನು ಕೌಂಟರ್‌ನಲ್ಲಿ ತೆಗೆದುಕೊಂಡು ರಶೀದಿ ನೀಡಲಾಗುತ್ತಿದೆ.
ಕೊರೊನಾ ವರದಿ ಕಿರಿಕಿರಿ
ಯಾತ್ರೆ ಮುನ್ನ ಟೆಸ್ಟ್ ಮಾಡಿಸಿದರೂ ಅಲ್ಲಿ 650 ರೂ. ಪಾವತಿಸಿ ಮತ್ತೆ ರಿಪೋರ್ಟ್ ಮಾಡಿಸ ಬೇಕು. ಅನಂತರವಷ್ಟೇ ಕ್ಷೇತ್ರಕ್ಕೆ ತೆರಳಬೇಕು.
ಪ್ರತೀ ವರ್ಷ 1.50 ಲಕ್ಷ ಮಾಲಾಧಾರಿಗಳು!
ಅವರ ಪ್ರಕಾರ, ದ.ಕ. ಜಿಲ್ಲೆಯಲ್ಲಿ 2017ರಲ್ಲಿ 1ರಿಂದ 1.10 ಲಕ್ಷ ಮಂದಿ, 2018ರಲ್ಲಿ 90 ಸಾವಿರದಿಂದ 1 ಲಕ್ಷ ಮಂದಿ, 2019ರಲ್ಲಿ 1.20 ಲಕ್ಷದಿಂದ 1.30 ಲಕ್ಷ ಮಂದಿ ಮಾಲಾಧಾರಣೆ ಮಾಡಿ ಶಬರಿಮಲೆಗೆ ತೆರಳಿದ್ದಾರೆ. ಉಡುಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್ ಅವರ ಪ್ರಕಾರ, 2017ರಲ್ಲಿ 70 ಸಾವಿರ ಮಂದಿ, 2018ರಲ್ಲಿ 60 ಸಾವಿರ ಮಂದಿ, 2019ರಲ್ಲಿ 70 ಸಾವಿರ ಮಂದಿ ಶಬರಿಮಲೆಗೆ ತೆರಳಿದ್ದಾರೆ. ಆದರೆ ಈ ವರ್ಷ ಆನ್‌ಲೈನ್ ನಿಯಮವಿರುವ ಕಾರಣ ಈ ಸಂಖ್ಯೆ ಸದ್ಯ ಗೊತ್ತಾಗುತ್ತಿಲ್ಲ ಎಂದವರು ತಿಳಿಸಿದ್ದಾರೆ.
ಭವನಂ ಸನ್ನಿಧಾನಂ !
ಸರಕಾರ ಮೂಲ ಸೌಕರ್ಯ ಕಲ್ಪಿಸದ ಕಾರಣ ಭಕ್ತರು ಈ ಬಾರಿ ಯಾತ್ರೆ ಕೈಗೊಳ್ಳುವ ಬದಲು ವೃತಾಚರಣೆ ಮಾಡಿ ಮನೆಯಲ್ಲಿಯೇ (ಭವನಂ ಸನ್ನಿಧಾನಂ)ಅಯ್ಯಪ್ಪನ ಆರಾಧನೆ ಮಾಡಿಕೊಂಡು ಸ್ಥಳೀಯ ಅಯ್ಯಪ್ಪ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವಂತೆ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ದ.ಕ. ಜಿಲ್ಲಾಧ್ಯಕ್ಷ ಗಣೇಶ್ ಪೊದುವಾಳ್ ಅವರು ಮನವಿ ಮಾಡಿದ್ದಾರೆ.
ಶೇ.90ರಷ್ಟು ಕಡಿಮೆ
ಶಬರಿಮಲೆಗೆ ಈ ಬಾರಿ 2000 ಮಂದಿಗೆ ಮಾತ್ರ ಅವಕಾಶ ನೀಡಿದ ಕಾರಣ ಶೇ.90ರಷ್ಟು ಮಂದಿ ಮಾಲಾಧಾರಣೆ ಮಾಡಿಲ್ಲ. ಆನ್‌ಲೈನ್‌ನಲ್ಲೂ ಟಿಕೆಟ್ ಸಿಗುತ್ತಿಲ್ಲ. ಪಂಪೆಯಲ್ಲಿ ಸ್ನಾನಕ್ಕೂ ಅವಕಾಶ ಇಲ್ಲ. ಆದರೆ ವೃತ ಮಾಡಿದ್ದರೆ ಪಂದಳಕ್ಕೆ ಹೋಗಲು ಅವಕಾಶವಿದೆ.
ವಿಕ್ರಮ್ ಸ್ವಾಮೀಜಿ ಕದ್ರಿ, ಹಿರಿಯ ಗುರು ಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.