ಪ್ರವಾಸಿ ಬಸ್‌ಗಳೂ ಹೆಚ್ಚಿಸಲಿ ನಗರ ಸೌಂದರ್ಯ
Team Udayavani, Mar 18, 2018, 5:05 PM IST
ಮಂಗಳೂರಿನಲ್ಲಿ ಪ್ರವಾಸಿ ತಾಣಗಳು ಸಾಕಷ್ಟಿವೆ. ಆದರೆ, ಅಲ್ಲಿಗೆ ತೆರಳಲು ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ವರ್ಗ, ಸರಕಾರ ಕೊಂಚ ಗಮನಹರಿಸಬೇಕಿದೆ.
ಸರಕಾರದ ಮೂಲಕವೇ ಬಸ್, ಟ್ಯಾಕ್ಸಿ ವ್ಯವಸ್ಥೆಯಾದರೆ ಇದು ಪ್ರವಾಸಿಗರಿಗೆ ಸಾಕಷ್ಟು ಅನುಕೂಲಕರವಾಗುವುದು. ನಗರ ವ್ಯಾಪ್ತಿಯಲ್ಲೇ ಇರುವ ಹೆಚ್ಚಿನ ಪ್ರವಾಸಿ ತಾಣಗಳು ಕನಿಷ್ಠ 2- 3 ಕಿ.ಮೀ. ದೂರದಲ್ಲಿವೆ. ಇಂತಹ ಸಂದರ್ಭದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಬೇಕಾದರೆ ಆಟೋದಲ್ಲಿ ಕನಿಷ್ಠವೆಂದರೂ 150 ರೂ. ಖರ್ಚಾಗುತ್ತದೆ. ಅದೇ ಬಸ್ ಮೂಲಕ ತೆರಳಿದರೆ ಕೆಲವೊಂದು ಬಾರಿ ಸಾಕಷ್ಟು ದೂರ ನಡೆಯಬೇಕಾಗುತ್ತದೆ. ಇಲ್ಲಿ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ. ದಿನದಲ್ಲಿ 3- 4 ಸ್ಥಳಗಳಿಗೆ ಹೋಗಿ ಬರುವಷ್ಟರಲ್ಲಿ ಸುಸ್ತಾಗಿರುತ್ತೇವೆ.
ಅದೇ ಆಡಳಿತ ವ್ಯವಸ್ಥೆಯ ಮೂಲಕ ಇದಕ್ಕೊಂದು ವ್ಯವಸ್ಥೆ ಮಾಡಿದರೆ ರಾಜ್ಯ, ಹೊರರಾಜ್ಯ, ದೇಶ, ವಿದೇಶಗಳಿಂದ ಬರುವ ಸಾಕಷ್ಟು ಪ್ರವಾಸಿಗರಿಗೆ ಮಾತ್ರವಲ್ಲ ಸ್ಥಳೀಯ ಜನರಿಗೂ ಅನುಕೂಲವಾಗಲಿದೆ. ಮಾತ್ರವಲ್ಲದೇ ಇದರಿಂದ ಆಡಳಿತ ವ್ಯವಸ್ಥೆ ಆದಾಯವನ್ನೂ ಗಳಿಸಬಹುದು.
ಇನ್ನು ಈ ಪ್ರವಾಸಿ ಬಸ್ ಅಥವಾ ಟ್ಯಾಕ್ಸಿಗಳು ನೋಡಲು ಆಕರ್ಷಕವಾಗಿರಲಿ. ಅಂದರೆ ಧಾರ್ಮಿಕ ಕೇಂದ್ರಗಳಿಗೆ ತೆರಳುವ ವಾಹನಗಳನ್ನು ರಥದ ಮಾದರಿಯಲ್ಲಿ, ಬೀಚ್, ವಸ್ತು ಸಂಗ್ರಹಾಲಯ, ಉದ್ಯಾನವನಗಳಿಗೆ ತೆರಳುವ ವಾಹನಗಳನ್ನು ಕರಾವಳಿ ಜನರ ಸಂಸ್ಕೃತಿಯನ್ನು ಬಿಂಬಿ ಸುವ ಮಾದರಿಯಲ್ಲಿ ನಿರ್ಮಿಸಬಹುದು. ಇಲ್ಲವೇ ವಿವಿಧ ಬಣ್ಣ, ಪೈಟಿಂಗ್ ಗಳ ಮೂಲಕ ಈ ಬಸ್ ಅನ್ನು ಇತರೆ ಬಸ್ ಗಳಿಗಿಂತ ಭಿನ್ನವಾಗಿ ರೂಪಿಸಬಹುದು. ಈ ವಾಹ ನ ಗಳು 10 ರಿಂದ 20 ಮಂದಿ ಪ್ರವಾಸಿಗರನ್ನು ಒಯ್ದರೂ ಸಾಕು. ಇದರಿಂದ ಪ್ರವಾಸಿ ತಾಣಕ್ಕೆ ಹೋಗುವ ಜನರಿಗೆ ಈ ವಾಹನಗಳೇ ಹೆಚ್ಚಾಗಿ ಆಕರ್ಷಿಸಬಲ್ಲದು.
ಅಲ್ಲದೇ ಈ ಬಸ್ ಗಳಿಗೆ ಮುಖ್ಯ ರಸ್ತೆಯನ್ನು ಬಿಟ್ಟು ಒಳದಾರಿಗಳಲ್ಲಿ ಸಂಚರಿಸುವ ವ್ಯವಸ್ಥೆ ಮಾಡಿಕೊಡಬೇಕು. ಇದರಿಂದ ನಗರದ ಟ್ರಾಫಿಕ್ ಕಿರಿಕಿರಿಯಿಂದ ಪಾರಾಗಬಹುದು. ತಿರುಪತಿಗೆ ಹೋಗಿದ್ದರೆ ಅಲ್ಲಿ ಗಮನ ಸೆಳೆಯುವುದು ರಥದ ಮಾದರಿಯ ಬಸ್ ಗಳು. ತಿರುಪತಿಯಿಂದ ತಿರುಮಲೈಗೆ ಹೋಗುವ ಸಾಕಷ್ಟು ಬಸ್ ಗಳು ಇದೇ ರೀತಿಯಲ್ಲಿವೆ. ನೋಡಲು ಆಕರ್ಷಕವಾಗಿರುವ ಈ ಬಸ್ ಗಳಲ್ಲಿ ಒಂದು ಬಾರಿಯಾದರೂ ಸುತ್ತಾಡಬೇಕು ಎಂಬ ಮನಸ್ಸಾಗದೇ ಇರಲಾರದು. ಅಂತೆಯೇ ಇದೇ ಮಾದರಿ ಯನ್ನೂ ನಾವೂ ಅನುಸರಿಸಬಹುದಲ್ಲವೇ..?
ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.