ಟೋಯಿಂಗ್‌ ವ್ಯವಸ್ಥೆ : ಪರಿಹಾರಕ್ಕಿಂತ ಸಮಸ್ಯೆಗಳೇ ಹೆಚ್ಚು

Team Udayavani, Jan 12, 2021, 2:30 AM IST

ಟೋಯಿಂಗ್‌ ವ್ಯವಸ್ಥೆ : ಪರಿಹಾರಕ್ಕಿಂತ ಸಮಸ್ಯೆಗಳೇ ಹೆಚ್ಚು

ಮಹಾನಗರ: ನಗರದಲ್ಲಿ ಸರಿಯಾದ ಪಾರ್ಕಿಂಗ್‌ ಸೂಕ್ತ ಸೌಲಭ್ಯಗಳನ್ನು ಕಲ್ಪಿ ಸಿಲ್ಲ. ಆದರೂ ಸಂಚಾರ ಪೊಲೀಸರು ನೋ-ಪಾರ್ಕಿಂಗ್‌ ಹೆಸರಿನಲ್ಲಿ ದುಬಾರಿ ದಂಡ ವಿಧಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಇದೀಗ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ರಸ್ತೆ ಬದಿಯಲ್ಲಿ ಅದರಲ್ಲಿಯೂ ವಾಹನಗಳ ದಟ್ಟನೆ ಜಾಸ್ತಿಯಿರುವ ಕಡೆ ಅಥವಾ ನೋ ಪಾರ್ಕಿಂಗ್‌ ಬೋರ್ಡ್‌ ಹಾಕಿರುವ ಕಡೆ ವಾಹನ ನಿಲುಗಡೆ ಮಾಡಿರುವುದರ ವಿರುದ್ಧ ಕ್ರಮ ಜರುಗಿಸುವುದಕ್ಕೆ ಸಾರ್ವಜನಿಕರ ಆಕ್ಷೇ ಪಣೆಯೂ ಇಲ್ಲ. ಆದರೆ, ನಗರ ವ್ಯಾಪ್ತಿಯಲ್ಲಿ ಶೇ.70 ರಷ್ಟು ಕಡೆ ಸಾರ್ವ ಜನಿಕರಿಗೆ ಅನುಕೂಲವಾಗುವಂತೆ ವಾಹನ ನಿಲುಗಡೆ ಮಾಡಲು ಅವಕಾಶವಿಲ್ಲ. ನಗರದೆಲ್ಲೆಡೆ ಕೆಲವೇ ಸ್ಥಳಗಳಲ್ಲಿ ಮಾತ್ರ ನೋ-ಪಾರ್ಕಿಂಗ್‌ ನಾಮಫಲಕ ಹಾಕಲಾಗಿದೆ. ಉಳಿದೆಡೆ ಅಂಥ ಯಾವುದೇ ಸೂಚನಾ ಫ‌ಲಕಗಳಿಲ್ಲ.

ಆದರೆ‌ ಪ್ರತಿದಿನ ಬೆಳಗ್ಗಿನಿಂದ ಸಂಜೆವರೆಗೆ ನಗರದಲ್ಲಿ ಸಂಚಾರ ಪೊಲೀಸರು ಎರಡು ಟೋಯಿಂಗ್‌ ವಾಹನಗಳಲ್ಲಿ ಸುತ್ತಾಡಿ ನೋ-ಪಾರ್ಕಿಂಗ್‌ ಹೆಸರಿನಲ್ಲಿ ತಮ್ಮ ಕಣ್ಣಿಗೆ ಬೀಳುವ ವಾಹನಗಳನ್ನು ಕೊಂಡೊಯ್ದು ಪ್ರತಿ ವಾಹನಕ್ಕೆ 1,650 ರೂ. ದಂಡ ಹಾಕುತ್ತಿದ್ದಾರೆ. ಕೊರೊನಾ ನಂತರದಲ್ಲಿ ಜನರು ತೀವ್ರವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ನಗರ ಪ್ರದೇಶದಲ್ಲಿಯೂ ವ್ಯಾಪಾರಸ್ಥರಿಗೆ ಸರಿಯಾದ ವ್ಯಾಪಾರವಿಲ್ಲ. ಹಲವರಿಗೆ ಉದ್ಯೋಗ ನಷ್ಟವಾಗಿ ಜೀವನ ನಿರ್ವಹಣೆಗೆ ಅಲೆದಾಡುವ ಸ್ಥಿತಿಯಿದೆ. ಇಂಥಹ ತೀವ್ರ ಆರ್ಥಿಕ ಮುಗ್ಗಟ್ಟು ನಡುವೆ, ನೋ-ಪಾರ್ಕಿಂಗ್‌ ಕಾರಣ ನೀಡಿ ದ್ವಿಚಕ್ರವೊಂದನ್ನು ಟೋಯಿಂಗ್‌ ಮಾಡಿ ದುಬಾರಿ ದಂಡ ಹಾಕಿದರೆ ಕಟ್ಟುವುದಾದರೂ ಹೇಗೆ ಎನ್ನುವ ಪ್ರಶ್ನೆ ಜನರದ್ದು.

ತುರ್ತು ಕಾರಣಕ್ಕೆ ನಿಲ್ಲಿಸಿದರೂ ದಂಡ :

ಕೂಲಿ-ಕೆಲಸ ಮಾಡುವವರು, ದ್ವಿಚಕ್ರ ವಾಹನ ಇಟ್ಟುಕೊಂಡು ಸಣ್ಣ ವ್ಯಾಪಾರ ನಡೆಸುವವರು ತುರ್ತು ಕಾರಣಕ್ಕೆ ಒಂದೆಡೆ ವಾಹನ ನಿಲ್ಲಿಸಿ ಹೋಗಿ ಬರುವಷ್ಟರಲ್ಲಿ ಅದನ್ನು ಟೋಯಿಂಗ್‌ ಮಾಡಿ, ದುಬಾರಿ ದಂಡ ಕೊಟ್ಟು ವಾಹನ ಬಿಡಿಸಿಕೊಳ್ಳಬೇಕಿರುತ್ತದೆ. ನಗರದ ದುಡಿಮೆಯಲ್ಲಿ ದಿನಕ್ಕೆ 200-300 ರೂ. ಸಂಪಾದಿಸುವ ವ್ಯಕ್ತಿಯೊಬ್ಬ ಒಂದು ತಿಂಗಳಲ್ಲಿ ನಾಲ್ಕೈದು ಬಾರಿ ಟೋಯಿಂಗ್‌ ಪೊಲೀಸರ ಕಣ್ಣಿಗೆ ಸಿಕ್ಕಿಬಿದ್ದರೆ ಆ ವ್ಯಕ್ತಿ

ನಿಯಮ ಪಾಲಿಸದ ಟೋಯಿಂಗ್‌ ವಾಹನ! :

ರಸ್ತೆ/ ಚರಂಡಿ/ ಒಳಚರಂಡಿ ಅಭಿವೃದ್ಧಿ ಕಾಮಗಾರಿ ನಡೆಸುವ ವೇಳೆ ನಗರದ ಹಲವು ರಸ್ತೆಗಳಲ್ಲಿದ್ದ ಪಾರ್ಕಿಂಗ್‌ ತಾಣಗಳು ತೆರವಾಗಿವೆ. ಇದರಿಂದಾಗಿ ಜನರು ರಸ್ತೆ ಬದಿ ಅವಕಾಶ ಸಿಕ್ಕಿದಲ್ಲಿ ವಾಹನ ನಿಲ್ಲಿಸುತ್ತಾರೆ. ಹಾಲು, ಪತ್ರಿಕೆ, ತರಕಾರಿ ಇತ್ಯಾದಿಗಳ ಖರೀದಿಗೆ, ಎಟಿಎಂ ನಿಂದ ಹಣ ಪಡೆಯಲು ಮತ್ತಿತರ ಉದ್ದೇಶಗಳಿಗೆ ಜನರು ರಸ್ತೆ ಬದಿ ವಾಹನ ನಿಲ್ಲಿಸಿ ತಮ್ಮ ವ್ಯವಹಾರ ಮುಗಿಸಿ ಬರುವಷ್ಟರಲ್ಲಿ ವಾಹನ ಟೋಯಿಂಗ್‌ನವರ ಪಾಲಾಗಿರುತ್ತದೆ.

ವಾಹನವನ್ನು ಟೋಯಿಂಗ್‌ ಮಾಡುವ ಮುಂಚಿತವಾಗಿ ರಸ್ತೆ ಬದಿ ನಿಯಮ ಉಲ್ಲಂಘಿಸಿ ನಿಲ್ಲಿಸಲಾದ ವಾಹನದ ಬಗ್ಗೆ ಉದ್ಘೋಷಣೆ ಮಾಡಬೇಕು ಹಾಗೂ ಸಂಬಂಧಪಟ್ಟ ವಾಹನದ ಮಾಲಕ/ ಚಾಲಕರಿಗೆ ಆ ವಾಹನವನ್ನು ತೆರವು ಮಾಡಲು 5 ನಿಮಿಷ ಕಾಲಾವಕಾಶ ನೀಡಬೇಕೆಂಬ ನಿಯಮವಿದೆ. ಆದರೆ ಇದ್ಯಾವುದನ್ನೂ ಪಾಲಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು. ಇದೇ ಕಾರಣಕ್ಕೆ ಇತ್ತೀಚೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಸದ್ಯಕ್ಕೆ ಟೋಯಿಂಗ್‌ ವಾಹನ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯ ಕೇಳಿಬಂದಿತ್ತು.

ಏರಿಕೆಯಾದ ದಂಡ ಶುಲ್ಕ  :

2020ರಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಬಳಿಕ ಟೋಯಿಂಗ್‌ ಶುಲ್ಕವೂ ಏರಿಕೆಯಾಗಿದೆ. ದ್ವಿಚಕ್ರ ವಾಹನಕ್ಕೆ ಈಗ 1,650 ರೂ. ಹಾಗೂ ಚತುಶ್ಚಕ್ರ ವಾಹನಕ್ಕೆ 2,000 ರೂ. ಶುಲ್ಕ ನೀಡಬೇಕು. ದ್ವಿಚಕ್ರ ವಾಹನದ 1,650 ರೂ.ಗಳಲ್ಲಿ 1,000 ರೂ. ಸಂಚಾರ ನಿಯಮ ಉಲ್ಲಂಘನೆಗಾಗಿ, ಉಳಿದ 650 ರೂ. ಗಳ ಪೈಕಿ ತಲಾ 325 ರೂ. ಟೋಯಿಂಗ್‌ ಗುತ್ತಿಗೆದಾರರಿಗೆ ಹಾಗೂ ಸರಕಾರದ ಬೊಕ್ಕಸಕ್ಕೆ ಹೋಗುತ್ತದೆ. ಚತುಶ್ಚಕ್ರ ವಾಹನದ 2,000 ರೂ. ಪೈಕಿ 1,000 ರೂ. ಸಂಚಾರ ನಿಯಮ ಉಲ್ಲಂಘನೆಗೆ, ಉಳಿದ 1,000 ರೂ. ಗಳಲ್ಲಿ ತಲಾ 500 ರೂ. ಟೋಯಿಂಗ್‌ ಗುತ್ತಿಗೆದಾರರಿಗೆ ಮತ್ತು ಸರಕಾರಕ್ಕೆ ಸೇರುತ್ತದೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಟೋಯಿಂಗ್‌ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. 2020ರ ಸೆ. 8ರಿಂದ ಪುನರಾರಂಭವಾಗಿದೆ.

3,575 ಪ್ರಕರಣ ದಾಖಲು :

ಮಂಗಳೂರಿನಲ್ಲಿ ಟೋಯಿಂಗ್‌ ವ್ಯವಸ್ಥೆ ಜಾರಿಗೆ ಬಂದದ್ದು 2019 ರ ಮಾರ್ಚ್‌ 2 ರಂದು. 2020 ನವೆಂಬರ್‌ ತನಕ ಒಟ್ಟು 3,575 ಪ್ರಕರಣ ದಾಖಲಿಸಿ 48,44,800 ರೂ. ಶುಲ್ಕ ವಸೂಲಾಗಿದೆ. ಪ್ರಾರಂಭದಲ್ಲಿ ದಂಡ ಶುಲ್ಕವನ್ನು ದ್ವಿಚಕ್ರ ವಾಹನಗಳಿಗೆ 750 ರೂ. ಹಾಗೂ ಕಾರುಗಳಿಗೆ 1,100 ರೂ. ಇತ್ತು. ಈ 750 ರೂ. ದಂಡ ಶುಲ್ಕದಲ್ಲಿ 325 ರೂ. ಗುತ್ತಿಗೆದಾರರಿಗೆ ಹಾಗೂ ಉಳಿದ 425 ರೂ. ಸರಕಾರಕ್ಕೆ ಹೋಗುತ್ತಿತ್ತು. ಕಾರುಗಳಿಗೆ ಸಂಬಂಧಿಸಿ 1,100 ರೂ. ಪೈಕಿ 500 ರೂ. ಗುತ್ತಿಗೆದಾರರಿಗೆ ಹಾಗೂ ಉಳಿದ 600 ರೂ. ಸರಕಾರಕ್ಕೆ ಸಂದಾಯವಾಗುತ್ತಿತ್ತು.

ಪೊಲೀಸರ ವಿರುದ್ಧವೇ ಅಸಮಾಧಾನ  :

ಟೋಯಿಂಗ್‌ ವ್ಯವಸ್ಥೆಯನ್ನು ಟೆಂಡರ್‌ನಲ್ಲಿ ಬಿಡ್‌ ಮಾಡಿ ಗುತ್ತಿಗೆ ವಹಿಸಿಕೊಳ್ಳಲಾಗುತ್ತದೆ. ಪ್ರಸ್ತುತ ಮೂರು ವರ್ಷಗಳ ಗುತ್ತಿಗೆ 2019ರ ಮಾರ್ಚ್‌ ನಲ್ಲಿ ಬೆಂಗಳೂರಿನವರು ವಹಿಸಿಕೊಂಡಿ ದ್ದಾರೆ. ಇವರು ತಮ್ಮ ಬಿಡ್‌ ಹಣ ಹೊಂದಿಸಿಕೊಳ್ಳಲು ಕಣ್ಣಿಗೆ ಕಾಣಿಸುವ ವಾಹನಗಳನ್ನು ಹೊತ್ತೂಯ್ಯುತ್ತಾರೆ. ಇದು ಸುಗಮ ಸಂಚಾರದ ಉದ್ದೇಶವಲ್ಲ. ಹೀಗಾಗಿ, ಟೋಯಿಂಗ್‌ ವ್ಯವಸ್ಥೆಯಲ್ಲಿನ ಲೋಪದ ಆರೋಪಗಳಿಗೆಲ್ಲ ಪೊಲೀಸರು ಗುರಿಯಾಗುತ್ತಿದ್ದಾರೆ ಎನ್ನುವುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಅಭಿಪ್ರಾಯ.

ಟಾಪ್ ನ್ಯೂಸ್

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.