ಪುರಭವನ ಬಾಡಿಗೆ ಇಳಿಕೆ: ಕಲಾವಿದರ ಅಭಿಮತ


Team Udayavani, Jul 1, 2017, 3:45 AM IST

Town-Hall-Mangalore-600.jpg

ಮೇಯರ್‌ ದಿಟ್ಟ ನಿರ್ಧಾರ

ಮೇಯರ್‌ ದಿಟ್ಟ ನಿರ್ಧಾರ ಕೈಗೊಂಡಿದ್ದು, ಆ ಹುದ್ದೆಯಲ್ಲಿದ್ದು ಏನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಲಾವಿದರ ಪ್ರತಿದಿನದ ಕೂಗನ್ನು ಇದುವರೆಗೆ ಯಾರೂ ಕೇಳಲಿಲ್ಲ ಎಂಬ ಬೇಸರ ನಮ್ಮಲ್ಲಿತ್ತು. ಇದಕ್ಕೆ ಈಗಿನ ಮೇಯರ್‌ ಸಂಪೂರ್ಣ ಸ್ಪಂದಿಸಿದ್ದಾರೆ. ಅವರ ಈ ಕಾರ್ಯಕ್ಕೆ ನಾವು ಸದಾ ಚಿರಋಣಿ.
– ದೇವದಾಸ್‌ ಕಾಪಿಕಾಡ್‌,ಚಾಪರ್ಕ ನಾಟಕ ತಂಡದ ಮುಖ್ಯಸ್ಥರು.

ಮಹಾನ್‌ ಕಾರ್ಯ

ಬಾಡಿಗೆ ಇಳಿಕೆಯಾಗಿರುವ ಸುದ್ದಿ ಕೇಳಿ ತುಂಬಾ ಖುಷಿಯಾಗುತ್ತಿದೆ. ಮೇಯರ್‌ ಕವಿತಾ ಸನಿಲ್‌ ಅವರು ಕಲಾವಿದರ ಹಿತಚಿಂತನೆಯಿಂದ ಬಹಳ ದೊಡ್ಡ ಕೆಲಸ ಮಾಡಿದ್ದಾರೆ. ಸ್ಥಾಯೀ ಸಮಿತಿ ಹೋಗಿ ಇದೆಲ್ಲ ಆಗುವುದಿದ್ದರೆ, ಅಲ್ಲಿಯವರೆಗೆ ನಮ್ಮ ಕಲಾವಿದರು ಮತ್ತಷ್ಟು ದಿನ ಕಾಯಬೇಕಾಗಿತ್ತು. ಆದರೆ ಜು.1ರಿಂದಲೇ ಇದನ್ನು ಅನುಷ್ಠಾನಗೊಳಿಸಿರುವುದು ಶ್ಲಾಘನೀಯ ಕಾರ್ಯ.
– ಕಿಶೋರ್‌ ಡಿ.ಶೆಟ್ಟಿ, ಅಧ್ಯಕ್ಷರು, ತುಳು ನಾಟಕ ಕಲಾವಿದರ ಒಕ್ಕೂಟ.

ಲೈಟಿಂಗ್‌ ವ್ಯವಸ್ಥೆ ಸುಧಾರಣೆಯಾಗಲಿ

ಭರತನಾಟ್ಯ ಸಹಿತ ಸರ್ವ ಕಲಾಪ್ರಕಾರಗಳಿಗೆ ಅತ್ಯಂತ ಪ್ರಮುಖ ವೇದಿಕೆಯಾಗಿದ್ದ ಪುರಭವನ ಇಲ್ಲಿಯವರೆಗೆ ದುಬಾರಿ ಎಂಬ ಹಣೆಪಟ್ಟಿಯಲ್ಲಿತ್ತು. ಈಗ ಮೇಯರ್‌ ಅವರು ದುಬಾರಿ ದರ ಇಳಿಕೆ ಮಾಡಿ ಸರ್ವರಿಗೂ ಖುಷಿ ನೀಡಿದ್ದಾರೆ. ಮುಂದೆ ಪುರಭವನದ ಒಳಗೆ ಲೈಟಿಂಗ್‌ ವ್ಯವಸ್ಥೆ ಒಂದಷ್ಟು ಬದಲಾವಣೆ ಆದರೆ ಇನ್ನಷ್ಟು ಉಪಕಾರವಾದೀತು.
- ಚಂದ್ರಶೇಖರ ಶೆಟ್ಟಿ,ನಿರ್ದೇಶಕರು, ಸನಾತನ ನಾಟ್ಯಾಲಯ

ಬಹುದೊಡ್ಡ ಕೊಡುಗೆ

ಪುರಭವನ ಕಲಾವಿದರಿಗೆ ದುಬಾರಿಯಾಗುತ್ತಿದೆ ಎಂದು ಪಾಲಿಕೆಯ ಗಮನಕ್ಕೆ ತಂದಿತ್ತು. ಉದಯವಾಣಿ ಸಹಿತ ಮಾಧ್ಯಮಗಳು ಕೂಡ ಈ ಬಗ್ಗೆ ಕಲಾವಿದರ ನೋವನ್ನು ಆಡಳಿತದಾರರಿಗೆ ತಿಳಿಸಿದ್ದರು. ಈ ಮೂಲಕವಾಗಿ ಇಂದು ಕಲಾವಿದರಿಗೆ ಒಂದು ದೊಡ್ಡ ಕೊಡುಗೆ ಪಾಲಿಕೆ ವತಿಯಿಂದ ದೊರಕಿದೆ. ಇದಕ್ಕೆ ಸ್ಪಂದಿಸಿದ ಮೇಯರ್‌, ಸ್ಥಾಯೀ ಸಮಿತಿ, ಕಾರ್ಪೊರೇಟರ್‌ಗಳು, ವಿಪಕ್ಷ ಸಹಿತ ಸರ್ವರಿಗೂ ಕೃತಜ್ಞತೆಗಳು.
- ವಿ.ಜಿ.ಪಾಲ್‌, ನಾಟಕ ರಚನೆಕಾರ, ನಿರ್ದೇಶಕ

ಟಿಕೆಟ್‌ ಕಾರ್ಯಕ್ರಮದ ಬಾಡಿಗೆ ಕಡಿಮೆಯಾಗಲಿ

ಅತ್ಯಂತ ಉತ್ತಮ ಕಾರ್ಯವನ್ನು ಪಾಲಿಕೆ ಮಾಡಿದೆ. ಕಲಾವಿದರು ಚೇತರಿಸುವಂತಹ ಕೆಲಸವನ್ನು ಮಾಡಲಾಗಿದೆ. ಮುಂದಿನ ದಿನದಲ್ಲಿ ಕಲಾವಿದರಿಗೆ ಅತ್ಯಂತ ಉಪಯೋಗವಾಗಲಿದೆ. ಉಚಿತ ಕಾರ್ಯಕ್ರಮ ಹಾಗೂ ಟಿಕೆಟ್‌ ಕಾರ್ಯಕ್ರಮದ ಮಧ್ಯೆ ಬಾಡಿಗೆಯಲ್ಲಿನ ಮೊತ್ತದಲ್ಲಿ ಇನ್ನೂ ಸ್ವಲ್ಪ ಕಡಿಮೆ ಮಾಡಿದರೆ ಮತ್ತಷ್ಟು ಉಪಯೋಗವಾಗಬಹುದು. ಈ ಬಗ್ಗೆಯೂ ಮುಂದೆ ಹೆಜ್ಜೆ ಇಟ್ಟರೆ ಉತ್ತಮ.
– ತೋನ್ಸೆ ಪುಷ್ಕಳ್‌ ಕುಮಾರ್‌, ನಿರ್ದೇಶಕರು, ಕರಾವಳಿ ಸಂಗೀತ ಕಲಾವಿದರ ಒಕ್ಕೂಟ

ತುರ್ತು ಸ್ಪಂದನೆ

ಕಲಾವಿದರ ಬೇಡಿಕೆಗೆ ಅತ್ಯಲ್ಪ ಕಾಲದಲ್ಲಿಯೇ ಮಹತ್ವದ ನಿರ್ಧಾರ ಕೈಗೊಂಡು, ಪುರಭವನ ಅತ್ಯಂತ ಅಗ್ಗದಲ್ಲಿ ಕಲಾವಿದರಿಗೆ ದೊರಕಿಸಿಕೊಟ್ಟ ಮೇಯರ್‌ಗೆ ಅಭಿನಂದನೆಗಳು. ಈ ಕಡತ ಸ್ಥಾಯೀ ಸಮಿತಿಗೆ ಹೋಗಿ ಇತ್ಯರ್ಥವಾಗುವುದಕ್ಕೆ ಕೆಲವು ತಿಂಗಳು ಬೇಕಾಗುತ್ತಿತ್ತು. ಆದರೆ ಕಲಾವಿದರ ಹಿತದೃಷ್ಟಿಯಿಂದ ಅತ್ಯಂತ ತುರ್ತಾಗಿ ಸ್ಪಂದಿಸಿರುವುದಕ್ಕೆ ಅಭಿನಂದನೆಗಳು. ಪುರಭವನದ ಕೆಲವು ತಾಂತ್ರಿಕ ಸಮಸ್ಯೆಗಳು ಕೂಡ ಇದೇ ರೀತಿ ಇತ್ಯರ್ಥವಾದರೆ ಒಳಿತು.
- ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌, ಹಿರಿಯ ರಂಗಕರ್ಮಿ

ಕಲಾಲೋಕಕ್ಕೆ ಸಂದ ಗೌರವ

ಎಲ್ಲ ಕಲೆಗಳ ಕಲಾವಿದರ ಬೇಡಿಕೆಗೆ ತತ್‌ಕ್ಷಣದಲ್ಲಿ ಸ್ಪಂದಿಸಿ, ಪುರಭವನದ ಬಾಡಿಗೆ ದರ ಕಡಿಮೆಗೊಳಿಸಿದ ಮೇಯರ್‌ ನಿರ್ಧಾರ ಶ್ಲಾಘನೀಯ. ಕಲಾವಿದರ ಸಾಮಾನ್ಯ ಬೇಡಿಕೆಗಳಿಗೆ ಸ್ಪಂದಿಸುವ ಇಂತಹ ಮೇಯರ್‌ ಆಡಳಿತ ನಡೆಸುವಂತಾಗಬೇಕು. ಈ ಮೂಲಕ ನಮ್ಮ ಬೇಡಿಕೆಗಳಿಗೆ ಸ್ಪಂದನೆ ದೊರೆಯುತ್ತದೆ. ಕೆಲವೇ ದಿನದ ಒಳಗೆ ಇಂತಹ ಮಹತ್ವದ ನಿರ್ಧಾರ ಪ್ರಕಟಿಸಿರುವುದು ಕಲಾಲೋಕಕ್ಕೆ ಸಂದ ಗೌರವ.
- ಪಟ್ಲ ಸತೀಶ್‌ ಶೆಟ್ಟಿ, ಸ್ಥಾಪಕ ಅಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್‌ 

ಕಲಾಲೋಕದ ಪ್ರಭೆಯಾಗಲಿ ಪುರಭವನ

ಕಲಾವಿದರ ಬೇಡಿಕೆಗೆ ತುರ್ತಾಗಿ ಸ್ಪಂದಿಸಿದ ಮೇಯರ್‌ ಅವರ ನಿರ್ಧಾರಕ್ಕೆ ಅಭಿನಂದನೆಗಳು. ಮುಂದೆ ಪುರಭವನದ ಒಳಗೆ ಟಿಕೆಟ್‌ ಕೌಂಟರ್‌, ವೇದಿಕೆ ಮುಂಭಾಗ ಲೈಟಿಂಗ್‌ ವ್ಯವಸ್ಥೆ ಹಾಗೂ ಆಸನ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣಗೊಳಿಸುವ ಕೆಲಸ ನಡೆದರೆ ಪುರಭವನ ಸಂಪೂರ್ಣವಾಗಿ ಕಲಾಲೋಕದ ಪ್ರಭೆಯಾಗಿ ಮೂಡಿಬರಲಿದೆ.
- ಸರಪಾಡಿ ಅಶೋಕ್‌ ಶೆಟ್ಟಿ, ಖ್ಯಾತ ಯಕ್ಷಗಾನ ಕಲಾವಿದರು

ಪುರಭವನದಲ್ಲಿ ಗತ ಇತಿಹಾಸ ಮತ್ತೂಮ್ಮೆ ಪುನರಾವರ್ತನೆ

ಕಲಾವಿದರ ಮನವಿಗೆ ತುರ್ತಾಗಿ ಸ್ಪಂದಿಸಿದ ಪಾಲಿಕೆಯ ನಿರ್ಧಾರಕ್ಕೆ ಸಮಸ್ತ ಜಾದುಗಾರ ತಂಡದ ಪರವಾಗಿ ಅಭಿನಂದನೆಗಳು. ಒಂದು ಕಾಲದಲ್ಲಿ ನಿರಂತರ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದ ಪುರಭವನ ಇತ್ತೀಚೆಗೆ ದುಬಾರಿ ಬಾಡಿಗೆಯಿಂದಾಗಿ ಕಾರ್ಯಕ್ರಮಗಳೆ ವಿರಳವಾಗಿತ್ತು.  ಈಗ ಬಾಡಿಗೆ ಕಡಿಮೆಗೊಂಡಿರುವ ಪರಿಣಾಮ ಗತ ಇತಿಹಾಸ  ಪುನರಾವರ್ತನೆಯಾಗಲಿದೆ.
– ಕುದ್ರೋಳಿ ಗಣೇಶ್‌, ಅಂತಾರಾಷ್ಟ್ರೀಯ ಜಾದೂಗಾರರು

ಮಿನಿ ಹಾಲ್‌ ಸುಸಜ್ಜಿತವಾಗಲಿ

ಪುರಭವನದ ದರವನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ತುರ್ತಾಗಿ ಸ್ಪಂದಿಸಿರುವುದು ಜನರ ಪರ ಆಡಳಿತ ಇದೆ ಎಂಬುದಕ್ಕೆ ಸಾಕ್ಷಿ. ಹೀಗಾಗಿ ಸ್ವಾಗತಾರ್ಹ ನಿರ್ಧಾರ ಪ್ರಕಟಿಸಲಾಗಿದೆ. ಇದರ ಜತೆಗೆ ತರಾತುರಿಯಲ್ಲಿ ಉದ್ಘಾಟನೆ ಮಾಡಿದ ಮಿನಿಹಾಲ್‌ ಅನ್ನು ಕಾರ್ಯಕ್ರಮಕ್ಕೆ ಪೂರಕ ಮಾಡಿದರೆ ಉತ್ತಮ ಹಾಗೂ ಉಚಿತ ಕಾರ್ಯಕ್ರಮಗಳಿಗೆ ಹಿಂದಿನ ದರ ಇದ್ದರೂ ಇನ್ನಷ್ಟು ಉಪಯೋಗ ಆಗುತ್ತಿತ್ತು. ಸೀಟಿಂಗ್‌ ವ್ಯವಸ್ಥೆ ಇನ್ನಷ್ಟು ಸರಳೀಕರಣ ಮಾಡಿದರೆ ಉತ್ತಮ.
- ಭಾಸ್ಕರ್‌ ರೈ ಕುಕ್ಕುವಳ್ಳಿ, ಮಾಜಿ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ 

ಟಾಪ್ ನ್ಯೂಸ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Chhattisgarh: 20 coaches of goods train derail

Chhattisgarh: ಹಳಿ ತಪ್ಪಿದ  ಗೂಡ್ಸ್‌ ರೈಲಿನ 20 ಬೋಗಿಗಳು

accident

Bantwal: ಕೆಎಸ್‌ಆರ್‌ಟಿಸಿ ಬಸ್‌-ಬೈಕ್‌ ಢಿಕ್ಕಿ; ದಂಪತಿಗೆ ಗಾಯ

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.