Thiruvananthapuram ವಿಭಾಗದಲ್ಲಿ ಹಳಿ ನಿರ್ವಹಣೆ: ರೈಲು ಸೇವೆಯಲ್ಲಿ ವ್ಯತ್ಯಯ
Team Udayavani, Jan 7, 2024, 12:19 AM IST
ಮಂಗಳೂರು: ತಿರುವನಂತಪುರ ವಿಭಾಗದ ವಿವಿಧ ಪ್ರದೇಶಗಳಲ್ಲಿ ರೈಲ್ವೇ ಹಳಿ ನಿರ್ವಹಣ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸಂಚಾರದ ಸಮಯದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.
ನಂ. 16348 ಮಂಗಳೂರು ಸೆಂಟ್ರಲ್ – ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ಪ್ರಯಾಣವನ್ನು ಜ. 9, 10, 12, 13, 17, 19, 20, 21, 22, 28 ಮತ್ತು 31ರಂದು 1 ಗಂಟೆ ಮತ್ತು ಜ.15, 16 ಮತ್ತು 25ರಂದು 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ನಂ. 22654 ಹಜ್ರತ್ ನಿಜಾಮು ದ್ದೀನ್ ಜಂಕ್ಷನ್ – ತಿರುವನಂತಪುರ ಸೆಂಟ್ರಲ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಜ. 8ರಂದು 30 ನಿಮಿಷ ಮತ್ತು 15ರಂದು ಒಂದು ಗಂಟೆ ನಿಯಂತ್ರಿಸಲಾಗುತ್ತದೆ. ನಂ.22653 ತಿರುವನಂತಪುರ ಸೆಂಟ್ರಲ್ – ಹಜ್ರತ್ ನಿಜಾಮುದ್ದೀನ್ ಜಂಕ್ಷನ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಜ. 27ರಂದು 30 ನಿಮಿಷ ತಡೆಹಿಡಿಯಲಾಗುತ್ತದೆ.
ನಂ. 22656 ಹಜ್ರತ್ ನಿಜಾಮುದ್ದೀನ್ ಜಂಕ್ಷನ್- ಎರ್ನಾ ಕುಲಂ ಜಂಕ್ಷನ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಜ. 5, 12 ಮತ್ತು 19ರಂದು 50 ನಿಮಿಷ ತಡೆಹಿಡಿಯಲಾಗುತ್ತದೆ.
ನಂ. 19260 ಭಾವ್‌ನಗರ್ ಟರ್ಮಿನಸ್ – ಕೊಚ್ಚುವೇಲಿ ಸಾಪ್ತಾಹಿಕ ರೈಲು ಜ. 9,16 ಮತ್ತು 30ರಂದು 1 ಗಂ.10 ನಿಮಿಷ ತಡೆಹಿಡಿಯಲಾಗುತ್ತದೆ. ನಂ.16333 ವೇರವಲ್ -ತಿರುವನಂತಪುರ ಸೆಂಟ್ರಲ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಜ.11 ಮತ್ತು 18ರಂದು 1 ಗಂ.10 ನಿಮಿಷ ತಡೆಹಿಡಿಯಲಾಗುತ್ತದೆ.
ನಂ. 16335 ಗಾಂಧಿಧಾಮ್ – ನಾಗರ್ ಕೋವಿಲ್ ಜಂಕ್ಷನ್ ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು ಜ.12 ಮತ್ತು 19ರಂದು 1 ಗಂ.10 ನಿಮಿಷ ತಡೆ ಹಿಡಿಯಲಾಗುತ್ತದೆ. ನಂ. 16337 ಓಖಾ – ಎರ್ನಾಕುಲಂ ಜಂಕ್ಷನ್ ಬೈ ವೀಕ್ಲಿ ರೈಲನ್ನು ಜ. 15, 20 ಮತ್ತು 27ರಂದು 1 ಗಂಟೆ ತಡೆಹಿಡಿಯಲಾಗುತ್ತದೆ.
ನಂ. 22114 ಕೊಚ್ಚುವೇಲಿ – ಲೋಕಮಾನ್ಯತಿಲಕ್ ಟರ್ಮಿನಸ್ ಬೈ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಜ. 8 ಮತ್ತು 18 ರಂದು 40 ನಿಮಿಷ ತಡವಾಗುತ್ತದೆ. ನಂ. 22149 ಎರ್ನಾಕುಲಂ ಪುಣೆ ಜಂಕ್ಷನ್ ಬೈ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಜ.12 ಮತ್ತು 26ರಂದು 40 ನಿಮಿಷ ತಡೆ ಹಿಡಿಯಲಾಗುತ್ತದೆ. ನಂ.22655 ಎರ್ನಾಕುಲಂ ಜಂಕ್ಷನ್- ಹಜ್ರತ್ ನಿಜಾಮುದ್ದೀನ್ ಜಂಕ್ಷನ್ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಜ.17ರಂದು 40 ನಿಮಿಷ ತಡೆಹಿಡಿಯಲಾಗುತ್ತದೆ.
ಸಂಚಾರ ಮಾರ್ಗ ಬದಲಾವಣೆ
ನಂ. 16345 ಲೋಕಮಾನ್ಯ ತಿಲಕ್ ಟರ್ಮಿನಸ್ – ತಿರುವನಂತಪುರ ಸೆಂಟ್ರಲ್ ನೇತ್ರಾವತಿ ಎಕ್ಸ್‌ಪ್ರೆಸ್ ರೈಲನ್ನು ಜ. 7-12ರ ವರೆಗೆ ಎರ್ನಾಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚಾರಕ್ಕೆ ಅವಕಾಶ ನೀಡಿ ಹೆಚ್ಚುವರಿ ನಿಲುಗಡೆಗೆ ಅವಕಾಶ ಮಾಡಲಾಗಿದೆ. ನಂ.16346 ತಿರುವನಂತಪುರ ಸೆಂಟ್ರಲ್ – ಲೋಕಮಾನ್ಯ ತಿಲಕ್ ಟರ್ಮಿನಸ್ ನೇತ್ರಾವತಿ ಎಕ್ಸ್‌ಪ್ರೆಸ್ ಜ. 7ರಿಂದ 13ರ ವರೆಗೆ ಹೆಚ್ಚುವರಿ ನಿಲುಗಡೆಯೊಂದಿಗೆ ಕಾಯಂಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚರಿಸಲಿದೆ.
ನಂ. 20909 ಕೊಚ್ಚುವೇಲಿ- ಪೋರ್‌ಬಂದರ್ ಸಾಪ್ತಾಹಿಕ ಸೂಪರ್‌ಫಾಸ್ಟ್ ರೈಲು ಜ. 7ರಂದು ಕಾಯಂಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚರಿಸಲಿದೆ. ನಂ.19577 ತಿರುನಲ್ವೇಲಿ ಜಂಕ್ಷನ್- ಜಾಮ್‌ನಗರ್ ಬೈ ವೀಕ್ಲಿ
ಎಕ್ಸ್‌ಪ್ರೆಸ್ ರೈಲು ಜ. 8 ಮತ್ತು 9ರಂದು ಕಾಯಂಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚರಿಸಲಿದೆ. ನಂ.20923 ತಿರುನನ್ವೇಲಿ ಜಂಕ್ಷನ್- ಗಾಂಧಿಧಾಮ ಸಾಪ್ತಾಹಿಕ ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲು ಜ. 11ರಂದು ಕಾಯಂಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚರಿಸಲಿದೆ. ನಂ.20931 ಕೊಚ್ಚುವೇಲಿ – ಇಂಧೋರ್ ಜಂಕ್ಷನ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಜ. 12ರಂದು ಕಾಯಂಕುಲಂನಿಂದ ವಯಾ ಕೊಟ್ಟಾಯಂ ಮೂಲಕ ಸಂಚರಿಸಲಿದೆ.
ನಂ.16348 ಮಂಗಳೂರು ಸೆಂಟ್ರಲ್-ತಿರುವನಂತಪುರ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಜ.22ರಂದು ಎರ್ನಾಕುಲಂನಿಂದ ವಯಾ ಆಲಪ್ಪುಳ ಮೂಲಕ ಸಂಚರಿಸಲಿದೆ. ನಂ.16350 ನಿಲಂಬೂರು ರೋಡ್-ಕೊಚ್ಚುವೇಲಿ ರಾಜಾರಾಣಿ ಎಕ್ಸ್‌ಪ್ರೆಸ್ ರೈಲು ಜ. 22ರಂದು ಎರ್ನಾಕುಲಂನಿಂದ ವಯಾ ಆಲಪ್ಪುಳ ಮೂಲಕ ಸಂಚರಿಸಲಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.