ಮಂಗಳೂರು: ಮತ ಎಣಿಕೆ ಹೆದ್ದಾರಿಯಲ್ಲಿ ಸಂಚಾರ ಬದಲಾವಣೆ
Team Udayavani, May 22, 2019, 10:56 AM IST
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 23ರಂದು ಸುರತ್ಕಲ್ NITK ಮತ ಎಣಿಕೆ ಕೇಂದ್ರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಘನ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲು ಮತ್ತು ಕೆಲವೆಡೆ ವಾಹನಗಳ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಮಂಗಳೂರು ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ವಾಹನಗಳನ್ನು ತಡಂಬೈಲ್ ಸಮೀಪ ತಪಾಸಣೆ ನಡೆಸಿ ಅಧಿಕೃತ ಪಾಸ್ ಹೊಂದಿದ್ದಲ್ಲಿ ಮಾತ್ರ ಮುಂದಕ್ಕೆ ಪ್ರವೇಶ ಕಲ್ಪಿಸಲಾಗುವುದು. ಉಡುಪಿ ಕಡೆಯಿಂದ ಆಗಮಿಸುವ ವಾಹನಗಳನ್ನು ಚೇಳ್ಯಾರು ಕ್ರಾಸ್ ಬಳಿ ತಪಾಸಣೆ ನಡೆಸಿ ಪಾಸ್ ಹೊಂದಿದ್ದಲ್ಲಿ ಮಾತ್ರ ಮುಂದಕ್ಕೆ ಪ್ರವೇಶ ಕಲ್ಪಿ ಸಲಾಗುವುದು.
ಉಡುಪಿಯಿಂದ ಮಂಗಳೂರಿಗೆ, ಮಂಗಳೂರಿನಿಂದ ಉಡುಪಿಗೆ ಬಸ್‌ಗಳ ಸಂಚಾರ ಎಂದಿನಂತೆ ಮುಂದುವರಿಯಲಿದ್ದು, NITKಯಲ್ಲಿ ನಿಲುಗಡೆ ಇಲ್ಲ.
ಘನ ಸರಕು ವಾಹನಕ್ಕೆ ಬದಲಿ ಮಾರ್ಗ
ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುವ ಎಲ್ಲಾ ತರಹದ ಘನ ಗೂಡ್ಸ್ ವಾಹನಗಳು ಕೆಪಿಟಿಯಿಂದ ಮಾರ್ಗ ಬದಲಾವಣೆ ಮಾಡಿ ಕಾವೂರು ಜಂಕ್ಷನ್ – ಬಜಪೆ – ಕಟೀಲು – ಮೂರುಕಾವೇರಿ – ಕಿನ್ನಿಗೋಳಿ – ಮೂಲ್ಕಿಯಾಗಿ ಉಡುಪಿ ಕಡೆಗೆ ಸಂಚರಿಸಬೇಕಿದೆ.
ಇನ್ನೊಂದು ಮಾರ್ಗವಾಗಿ ಕೂಳೂರಿನಿಂದ ತಿರುಗಿ ಕಾವೂರು ಜಂಕ್ಷನ್ ಮೂಲಕ ಬಜಪೆ – ಕಟೀಲು ಮಾರ್ಗವನ್ನು ಆಯ್ದುಕೊಳ್ಳಬೇಕು. ಸುರತ್ಕಲ್‌ನಿಂದ ಉಡುಪಿ ಕಡೆಗೆ ಸಂಚರಿಸುವ ಕಾರು ಇತ್ಯಾದಿ ಎಲ್ಲ ಲಘು ವಾಹನಗಳು ಎಂಆರ್‌ಪಿಎಲ್-ಕಾನ- ಬಜಪೆ- ಮೂರುಕಾವೇರಿ – ಕಿನ್ನಿಗೋಳಿ – ಮೂಲ್ಕಿಯಾಗಿ ಸಂಚರಿಸಬೇಕು.
ಲಘು ವಾಹನಗಳು
ಉಡುಪಿಯಿಂದ ಮಂಗಳೂರು ಕಡೆಗೆ ಬರುವ ಲಘು, ದ್ವಿಚಕ್ರ ವಾಹನಗಳು ಚೇಳ್ಯಾರು ಕ್ರಾಸ್‌ನಿಂದ ಎಡಕ್ಕೆ ಬಂದು ಮಧ್ಯ ವೃತ್ತದ ಮುಖೇನ ಮುಂಚೂರು ಕ್ರಾಸ್‌ನಲ್ಲಿ ಹೆದ್ದಾರಿ ಸೇರಬೇಕು. ಉಡುಪಿ ಕಡೆಗೆ ಸಂಚರಿಸುವವು ತಡಂಬೈಲ್ ಕ್ರಾಸ್ ಸದಾಶಿವ ದೇವಸ್ಥಾನ ದ್ವಾರದ ಮೂಲಕ ಎನ್‌ಐಟಿಕೆ ಲೈಟ್‌ಹೌಸ್- ರೆಡ್‌ರಾಕ್ ಕ್ರಾಸ್‌ನಲ್ಲಿ ಎಡಕ್ಕೆ ತಿರುಗಿ ಮುಕ್ಕ ಮುಖಾಂತರ ಸಂಚರಿಸಬೇಕು.
ಮೂಲ್ಕಿಯಿಂದ ಮಂಗಳೂರು ಕಡೆಗೆ ಸಂಚರಿಸುವ ದ್ವಿಚಕ್ರ, ಲಘು ವಾಹನಗಳು ಮೂಲ್ಕಿ ವಿಜಯ ಸನ್ನಿಧಿಯಿಂದ ಕಿನ್ನಿಗೋಳಿ – ಮೂರು ಕಾವೇರಿ – ಬಜಪೆ- ಕಾವೂರು ಜಂಕ್ಷನ್ – ಕೆಪಿಟಿ ಮೂಲಕ ಸಂಚರಿಸಬೇಕು.
ಹಳೆಯಂಗಡಿಯಿಂದ ಮಂಗಳೂರು ಕಡೆಗೆ ಸಂಚರಿಸುವ ದ್ವಿಚಕ್ರ, ಲಘು ವಾಹನಗಳು ಪಕ್ಷಿಕೆರೆ – ದಾಮಸ್‌ಕಟ್ಟೆ – ಕಿನ್ನಿಗೋಳಿ – ಮೂರುಕಾವೇರಿ – ಬಜಪೆ- ಕಾವೂರು ಜಂಕ್ಷನ್- ಕೆಪಿಟಿ ಮೂಲಕ ಸಂಚರಿಸಬೇಕು.
ಪೊಲೀಸ್, ಚುನಾವಣಾಧಿಕಾರಿಗಳು, ತುರ್ತು ಸೇವೆಗಳ ವಾಹನಗಳು, ಅಧಿಕೃತ ಪಾಸು ಹೊಂದಿರುವ ವಾಹನಗಳು, ಮಾಧ್ಯಮ, ಅಭ್ಯರ್ಥಿಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ.
ತಡಂಬೈಲ್ ಕ್ರಾಸ್‌ನಿಂದ ರೆಡ್‌ಕ್ರಾಸ್ ಕ್ರಾಸ್‌ವರೆಗೆ, ಮುಂಚೂರು ಕ್ರಾಸ್ ನಿಂದ NITKವರೆಗೆ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆಯಲ್ಲಿ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.