ಹಳೆಯಂಗಡಿ-ಪಕ್ಷಿಕೆರೆ ರಸ್ತೆಯ ರೈಲ್ವೇಗೇಟ್ ಬಳಿ ಸಂಚಾರ ದುಸ್ತರ
ನಿತ್ಯ ಈ ರಸ್ತೆಯನ್ನೇ ಅವಲಂಬಿಸಿರುವ ನಮಗೆ ಇಲ್ಲಿ ಸಂಚರಿಸುವುದೇ ಕಷ್ಟವಾಗಿದೆ
Team Udayavani, Dec 31, 2022, 12:11 PM IST
ಹಳೆಯಂಗಡಿ: ಹಳೆಯಂಗಡಿಯ ಹೆದ್ದಾರಿಯಿಂದ ಪಕ್ಷಿಕೆರೆಯಾಗಿ ಪುನರೂರು ಎಸ್‌ಕೋಡಿ ವರೆಗಿನ ರಸ್ತೆಯ ಅಭಿವೃದ್ಧಿ ಕಾಮಗಾರಿಯೂ ನಿಧಾನಗತಿಯಿಂದ ನಡೆಯುತ್ತಿರುವ ಕಾರಣ ಹಳೆಯಂಗಡಿ ರೈಲ್ವೇ ಗೇಟ್ ನ ಬಳಿಯಲ್ಲಿ ಜನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಸುಮಾರು ಮೂರು ಕಿಲೋ ಮೀಟರ್ ಉದ್ದದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕಳೆದ ನಾಲ್ಕು ತಿಂಗಳಿಗಳಿಂದ ಕಾಮಗಾರಿ ನಡೆಯುತ್ತಿದೆ. ಈ ನಡುವೆ ಕಳೆದ ಹತ್ತು ಹದಿನೈದು ದಿನಗಳ ಹಿಂದೆ ಲೈಟ್‌ಹೌಸ್‌ನ ಇಂದಿರಾನಗರದ ತಿರುವಿನಿಂದ ಹಳೆಯಂಗಡಿ ರೈಲ್ವೇ ಗೇಟ್‌ನವರೆಗೆ ಇದ್ದ ಸುಮಾರು 300 ಮೀ. ರಸ್ತೆಯ ಡಾಮರನ್ನು ತೆಗೆದು ಜಲ್ಲಿ ಹಾಕಿರುವುದರಿಂದ ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಜಲ್ಲಿಕಲ್ಲು ಎದ್ದು ಬಂದು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.
ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳಿಗೆ ಹೆಚ್ಚು ತೊಂದರೆ ಆಗುತ್ತಿದೆ ಎಂದು ವಾಹನಗಳ ಸವಾರರು ಆರೋಪಿಸುತ್ತಿದ್ದಾರೆ. ಈ ರಸ್ತೆಯ ಬೇರೆ ಬೇರೆ ಪ್ರದೇಶಗಳಲ್ಲಿ ವಿಸ್ತರಣೆ ಕಾಮಗಾರಿ ನಡೆಯು ತ್ತಿರುವಾಗಲೇ ರೈಲ್ವೇ ಗೇಟ್ ರಸ್ತೆಯನ್ನು ಅಗೆದು ಹಾಕಿರುವುದರಿಂದ ಟಯರ್ ಪಂಕ್ಚರ್ ಆಗುತ್ತಿದೆ. ಜತೆಗೆ ದೊಡ್ಡ ದೊಡ್ಡ ಜಲ್ಲಿ ಕಲ್ಲುಗಳು ಟಯರ್ ನಿಂದ ಸಿಡಿದು ಪಾದಚಾರಿಗಳಿಗೆ ಬೀಳುತ್ತಿದೆ ಇದರಿಂದ ವಾಹನಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಜಲ್ಲಿ ಹುಡಿಯ ರಸ್ತೆ ಧೂಳೆದ್ದು ಉಸಿ ರಾಡಲು ತೊಂದರೆಯಾಗುತ್ತಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯನ್ನು ಕೂಡಲೇ ಡಾಮರು ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಉದಯವಾಣಿ ಪ್ರತಿನಿಧಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರನ್ನು ಸಂಪರ್ಕಿಸಲು ದೂರವಾಣಿ ಕರೆ ಮಾಡಿದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ.
ಸಂಚರಿಸಲು ಕಷ್ಟವಾಗುತ್ತಿದೆ
ನಿತ್ಯ ಈ ರಸ್ತೆಯನ್ನೇ ಅವಲಂಬಿಸಿರುವ ನಮಗೆ ಇಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ವಾಹನಕ್ಕೂ ತೊಂದರೆಯಾಗುತ್ತದೆ. ಜಲ್ಲಿ ಕಲ್ಲುಗಳ ರಸ್ತೆಯನ್ನು ನಿರ್ಮಿಸಿ ಹದಿನೈದು ದಿನಗಳದರೂ ಸರಿಪಡಿಸಿಲ್ಲ, ಒಂದೆರಡು ದಿನವಾದರೇ ಹೇಗೂ ಸಂಚರಿಸಬಹುದು ಆದರೆ ಇಷ್ಟು ದಿನಗಳಿಂದ ಡಾಮರು ಹಾಕದೇ, ಕಾಮಗಾರಿಯನ್ನು ನಡೆಸದೇ ಯಾರೂ ಸ್ಪಂದಿಸದೇ ಇರುವುದರಿಂದ ಬಹಳ ಕಷ್ಟವಾಗಿದೆ.
-ದಿನೇಶ್, ರಿಕ್ಷಾ ಚಾಲಕ ಹಳೆಯಂಗಡಿ
ಇಲಾಖೆಗೆ ಪತ್ರ ಬರೆಯಲಾಗುವುದು ಸಾರ್ವಜನಿಕರು ಈ ಗಂಭೀರ ಸಮಸ್ಯೆಯ ಬಗ್ಗೆ ಗಮನ ತಂದಿದ್ದಾರೆ. ನಾನು ಸಹ ಸ್ವತಃ ನೋಡಿದ್ದೇನೆ, ಈ ಬಗ್ಗೆ ಒಂದೆರಡು ದಿನದಲ್ಲಿ ಡಾಮರು ಹಾಕಬಹುದೆಂದು ನಿರೀಕ್ಷಿಸಿದ್ದೇ, ಇದೀಗ ತತ್‌ಕ್ಷಣ ಸಂಬಂಧಿಸಿದ ಇಲಾಖೆಗೆ ಪತ್ರವನ್ನು ಬರೆದು ಇಲ್ಲಿನ ವಾಸ್ತವ ಸ್ಥಿತಿಗತಿಯ ಬಗ್ಗೆ ಗಮನ ಸೆಳೆಯಲಾಗುವುದು.
-ಮುತ್ತಪ್ಪ ಡವಲಗಿ,
ಪಿಡಿಒ, ಹಳೆಯಂಗಡಿ ಗ್ರಾಮ ಪಂಚಾಯತ್
*ನರೇಂದ್ರ ಕೆರೆಕಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ
U. T. Khader: ಹೆಬ್ಟಾಳ್ಕರ್-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Cyber fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.