ಚಾರ್ಮಾಡಿ: 3 ತಾಸು ಟ್ರಾಫಿಕ್ ಜಾಮ್
Team Udayavani, Oct 22, 2018, 11:30 AM IST
ಬೆಳ್ತಂಗಡಿ/ಮೂಡಿಗೆರೆ: ಚಾರ್ಮಾಡಿ ಘಾಟಿ ರಸ್ತೆಯ 10ನೇ ತಿರುವಿನಲ್ಲಿ ರವಿವಾರ ತರಕಾರಿ ಸಾಗಿಸುವ ಲಾರಿ ಮಗುಚಿ ಬಿದ್ದು, ಸಂಚಾರಕ್ಕೆ ತೊಂದರೆಯಾಯಿತು.
ಚಿಕ್ಕಮಗಳೂರಿನಿಂದ ಮಂಗಳೂರಿಗೆ ತರಕಾರಿ ಹೊತ್ತು ಬರುತ್ತಿದ್ದ ಲಾರಿ ರವಿವಾರ ಮುಂಜಾನೆ 5.30ರ ವೇಳೆಗೆ 10ನೇ ತಿರುವಿನಲ್ಲಿ ಮಗುಚಿ ಬಿತ್ತು. ಈ ಸಂದರ್ಭ ಒಂದು ಬದಿಯ ವಾಹನ ಸಂಚಾರಕ್ಕೆ ತೊಂದರೆ ಇರಲಿಲ್ಲ. ಆದರೆ ಕೊಟ್ಟಿಗೆಹಾರದಿಂದ ಕ್ರೇನ್ ತರಿಸಿ ಲಾರಿಯನ್ನು ಸಹಜ ಸ್ಥಿತಿಗೆ ತರುವ ಸಂದರ್ಭ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಸುಮಾರು ಮೂರು ತಾಸು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪರಿಣಾಮ ರಸ್ತೆಯ ಎರಡೂ ಕಡೆ 10 ಕಿ.ಮೀ. ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಬಣಕಲ್ ಪೊಲೀಸರು, ಹಸನಬ್ಬ ಚಾರ್ಮಾಡಿ ಮತ್ತು ಸಾರ್ವಜನಿಕರು ಲಾರಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ನೆರವಾಗಿ ಸಂಚಾರ ಪುನರಾರಂಭಕ್ಕೆ ಅನುವು ಮಾಡಿಕೊಟ್ಟರು. ಬೆಳಗ್ಗೆ 10 ಗಂಟೆಯ ವೇಳೆಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು.
ಪ್ರಸ್ತುತ ಚಾರ್ಮಾಡಿ ಘಾಟಿ ರಸ್ತೆಯುದ್ದಕ್ಕೂ ಬೃಹತ್ ಹೊಂಡಗಳು ಸೃಷ್ಟಿಯಾಗಿದ್ದು, ವಾಹನ ಚಾಲಕರು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ತಿರುವುಗಳಲ್ಲಿ ಚರಂಡಿಗಳು ನಿರ್ಮಾಣವಾಗಿವೆ. ಹೊಂಡಗಳಿಂದಾಗಿಯೇ ಕಳೆದ ವಾರ ಮೂರು ಲಾರಿಗಳು ಪಲ್ಟಿಯಾಗಿವೆ. ಹೀಗಾಗಿ ತತ್‌ಕ್ಷಣ ಹೊಂಡಗಳಿಗೆ ಮುಕ್ತಿ ನೀಡುವ ಕಾರ್ಯವನ್ನು ರಾ.ಹೆ. ಇಲಾಖೆ ಮಾಡಬೇಕಿದೆ ಎಂದು ಆಗ್ರಹ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ
Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ
Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್ ಖಾದರ್
ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ
Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.