ಮೊಬೈಲ್ ಆ್ಯಪ್‌ನಲ್ಲಿ ರೈಲು ಟಿಕೆಟ್: ಜಾಗೃತಿ ಅಭಿಯಾನ
Team Udayavani, Dec 16, 2018, 10:34 AM IST
ಮಂಗಳೂರು: ಮೊಬೈಲ್ ಆ್ಯಪ್ ಮೂಲಕ ಅನ್ ರಿಸರ್ವ್‌ಡ್ ಟಿಕೆಟ್ ಸಿಸ್ಟಮ್ (ಯುಟಿಎಸ್) ಬಗ್ಗೆ
ರೈಲ್ವೇ ಪ್ರಯಾಣಕರಿಗೆ ಮಾಹಿತಿ ನೀಡುವ ಯುಟಿಎಸ್ ಅರಿವು ಆಂದೋಲನಕ್ಕೆ ಪಾಲಕ್ಕಾಡ್ ರೈಲ್ವೇ ವಿಭಾಗೀಯ ಪ್ರಬಂಧಕ ಪ್ರತಾಪ ಸಿಂಗ್ ಶಮಿ ಶನಿವಾರ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಒಂದು ವಾರ ನಡೆಯುವ ಈ ಆಂದೋಲನದಲ್ಲಿ ಪ್ರಯಾಣಿಕರು ಟಿಕೆಟ್ ಕೌಂಟರ್‌ನಲ್ಲಿ ಸರದಿಯಲ್ಲಿ ನಿಂತು ಟಿಕೆಟ್ ಖರೀದಿಸುವ ಬದಲು ಯುಟಿಎಸ್ ಆ್ಯಪ್ ಡೌನ್‌ಲೋಡ್
ಮಾಡಿ ಆ ಮೂಲಕ ಕಾದಿರಿಸದ ಟಿಕೆಟ್ ಪಡೆಯುವ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಮಂಗಳೂರಿನಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದ್ದು ಅರಿವಿನ ಕೊರತೆಯಿಂದಾಗಿ ಹೆಚ್ಚು ಬಳಕೆಯಾಗುತ್ತಿಲ್ಲ. ಮಂಗಳೂರಿನಿಂದ ಪ್ರತಿದಿನ ಸರಾಸರಿ 7,000 ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಯುಟಿಎಸ್ ಆ್ಯಪ್ ಮೂಲಕ ಟಿಕೆಟ್ ಖರೀದಿ ಅಲ್ಪ ಪ್ರಮಾಣದಲ್ಲಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದರು.
ಮಂಗಳೂರು ಸೆಂಟ್ರಲ್‌ನಲ್ಲಿ ರೈಲು ಹಳಿಗಳ ಹಾಗೂ ಪ್ಲಾಟ್‌ಫಾರಂನ ಉದ್ದ ಹೆಚ್ಚಿಸಲು ಯೋಜಿಸಲಾಗಿದ್ದು ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ. ಪ್ರಸ್ತುತ 24 ಎಲ್‌ಎಚ್ ಬೋಗಿಗಳು ಬಂದರೆ ಪ್ಲಾಟ್‌ಫಾರಂನ ಉದ್ದ ಸಾಕಾಗುವುದಿಲ್ಲ. 4 ಹಾಗೂ 5ನೇ ಪ್ಲಾಟ್‌ಫಾರಂ ನಿರ್ಮಾಣಕ್ಕೆ ಪ್ರಕ್ರಿಯೆ ನಡೆಯತ್ತಿದೆ. ಮಂಗಳೂರಿನ 2ನೇ ಪ್ರವೇಶ ದ್ವಾರದ ಬಳಿಯೂ ಕಟ್ಟಡಗಳು ನಿರ್ಮಾಣವಾಗಲಿವೆ ಎಂದರು.
ಟಿಕೇಟು ಖರೀದಿ ಹೇಗೆ?
ಪ್ರಯಾಣಿಕರು ಮೊಬೈಲ್‌ನಲ್ಲಿ ಯುಟಿಎಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳ ಬೇಕು. ಅನಂತರ ಮೊಬೈಲ್ ನಂಬರ್, ಹೆಸರು, ನಗರ, ಎಲ್ಲಿಂದ ಎಲ್ಲಿಗೆ ಪ್ರಯಾಣ, ಟಿಕೆಟ್ ಸ್ವರೂಪ, ಪ್ರಯಾಣಿಕರ ಸಂಖ್ಯೆಯನ್ನು ನೋಂದಾಯಿಸಬೇಕು. ನೋಂದಣಿ ಯಶಸ್ವಿಯಾದ ಬಳಿಕ ರೈಲ್ವೇ ವ್ಯಾಲೆಟ್ ಶೂನ್ಯ ಬ್ಯಾಲೆನ್ಸ್‌ನೊಂದಿಗೆ ಸ್ವಯಂ ತೆರೆಯುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ರೈಲ್ವೇ ವ್ಯಾಲೆಟನ್ನು ರೈಲು ನಿಲ್ದಾಣಗಳಲ್ಲಿರುವ ಯುಟಿಎಸ್ ಕೌಂಟರ್ ಅಥವಾ www.utsonmobile.indianrail.gov.in ಮೂಲಕ ರಿಚಾರ್ಚ್ ಮಾಡಬಹುದಾಗಿದೆ. ಟಕೆಟ್ ದರ ವ್ಯಾಲೆಟ್‌ನಲ್ಲಿರುವ ನಗದಿನಿಂದ ಕಡಿತಗೊಳ್ಳುತ್ತದೆ. ಈ ಬಗ್ಗೆ ಮೊಬೈಲ್‌ಗೆ ಸಂದೇಶ ಬರುತ್ತದೆ. ಇದೇ ಟಿಕೆಟ್ ಆಗಿ ಪರಿಗಣಿಸಲ್ಪಡುತ್ತದೆ. ಮುದ್ರಿತ ಟಿಕೇಟು ಇರುವುದಿಲ್ಲ. ಟಿಕೆಟ್ ತಪಾಸಕರಿಗೆ ಈ ಸಂದೇಶವನ್ನು ತೋರಿಸಿದರೆ ಸಾಕಾಗುತ್ತದೆ. ರೈಲು ನಿಲ್ದಾಣದಿಂದ 25 ಮೀ. ದೂರದ ಬಳಿಕ ಆ್ಯಪ್ ಮೂಲಕ ಟಿಕೆಟು ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.