ಸುಧಾರಣ ಕಾಮಗಾರಿ: ನ. 8ರಿಂದ ಡಿ.12ರ ವರೆಗೆ ರೈಲುಗಳ ಸೇವೆಯಲ್ಲಿ ವ್ಯತ್ಯಯ
Team Udayavani, Nov 10, 2022, 8:38 AM IST
ಮಂಗಳೂರು : ಮುಂಬಯಿ ಲೋಕಮಾನ್ಯ ತಿಲಕ್ ಟರ್ಮಿನಸ್‌ನಲ್ಲಿ ಪಿಟ್‌ಲೈನ್ ನಂ.6ರಲ್ಲಿನ ಸುಧಾರಣ ಕಾಮಗಾರಿ ಹಿನ್ನೆಲೆಯಲ್ಲಿ ನ. 8ರಿಂದ ಡಿ.12ರ ವರೆಗೆ ಕೆಲವೊಂದು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ನಂ.16346 ತಿರುವನಂತಪುರ ಲೋಕಮಾನ್ಯ ತಿಲಕ್ ನೇತ್ರಾವತಿ ಎಕ್ಸ್ ಪ್ರಸ್ ರೈಲು ನ.9ರಿಂದ ಡಿ.11ರ ವರೆಗೆ ಪನ್ವೆಲ್ ವರೆಗೆ ಮಾತ್ರ ಸಂಚರಿಸಲಿದೆ.
ನಂ.12620 ಮಂಗಳೂರು ಸೆಂಟ್ರಲ್ ಮುಂಬಯಿ ಲೋಕಮಾನ್ಯ ತಿಲಕ್ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ನ. 9ರಿಂದ ಡಿ. 11ರ ವರೆಗೆ ಪನ್ವೆಲ್ ಜಂಕ್ಷನ್ ವರೆಗೆ ಸಂಚರಿಸಲಿದೆ. ನಂ.12619 ಮುಂಬಯಿ ಲೋಕಮಾನ್ಯ ತಿಲಕ್ ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಎಕ್ಸ್‌ಪ್ರೆಸ್ ನ. 9ರಿಂದ ಡಿ. 12ರ ವರೆಗೆ ಲೋಕಮಾನ್ಯ ತಿಲಕ್ ಬದಲಿಗೆ ಪನ್ವೆಲ್ ನಿಲ್ದಾಣದಿಂದ ಹೊರಡಲಿದೆ.
ನಂ.16345 ಲೋಕಮಾನ್ಯ ತಿಲಕ್ ತಿರುವನಂತಪುರ ಸೆಂಟ್ರಲ್ ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ನ.10ರಿಂದ ಡಿಸೆಂಬರ್ 13ರ ವರೆಗೆ ಲೋಕಮಾನ್ಯ ತಿಲಕ್ ಬದಲಿಗೆ ಪನ್ವೆಲ್‌ನಿಂದ ಹೊರಡಲಿರುವುದಾಗಿ ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ : ಅಮೆರಿಕ ಸಂಸತ್ ಚುನಾವಣೆ: ಬೆಳಗಾವಿಯ ಶ್ರೀ ಸೇರಿ ನಾಲ್ವರು ಎನ್ನಾರೈಗಳ ಆಯ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.