ಲಾರಿ-ಬಸ್ಸು ಚಾಲನೆಗೆ ಸರಕಾರದಿಂದಲೇ ತರಬೇತಿ


Team Udayavani, Dec 8, 2017, 12:08 PM IST

8-Dec-7.jpg

ಮಹಾನಗರ: ಲಾರಿ, ಬಸ್ಸು ಸಹಿತ ಘನ ವಾಹನಗಳ ತರಬೇತಿಯನ್ನು ಇಲ್ಲಿಯವರೆಗೆ ಖಾಸಗಿಯವರೇ ನೀಡುತ್ತಿದ್ದರು. ಇಲ್ಲಿ ಪಾರದರ್ಶಕತೆಯ ಕೊರತೆ ಕಾಣಿಸುತ್ತಿದ್ದು, ಅಪಘಾತ ಹೆಚ್ಚುತ್ತಿದೆ ಎಂಬುದನ್ನು ಮನಗಂಡ ಸರಕಾರ ತನ್ನ ಸುಪರ್ದಿಯ ಸಾರಿಗೆ ಇಲಾಖೆಯ ಮೂಲಕವೇ ಘನ ವಾಹನಗಳ ಚಾಲಕರಿಗೆ ‘ಚಾಲನಾ ಪರವಾನಿಗೆ ನವೀಕರಣ’ ಸಂದರ್ಭ ತರಬೇತಿ ನೀಡಲು ನಿರ್ಧರಿಸಿದೆ.

ಕೊಣಾಜೆಯ ಪಜೀರು ಗ್ರಾಮದ ಕಂಬ್ಳಪದವು ಸಮೀಪದ ಕೆ.ಐ.ಎ.ಡಿ.ಬಿ.ಯ ಸುಮಾರು 10 ಎಕ್ರೆ ಪ್ರದೇಶದಲ್ಲಿ ನೂತನ ತರಬೇತಿ ಕೇಂದ್ರ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯ ಸರಕಾರ 15 ಕೋಟಿ ರೂ. ಮೀಸಲಿಟ್ಟಿದೆ. ಕೆಲವು ವರ್ಷಗಳಿಂದ ಘೋಷಣೆಯಲ್ಲೇ ಉಳಿದಿದ್ದ ಯೋಜನೆ ಈಗ ಮರುಜೀವ ಪಡೆದುಕೊಂಡಿದ್ದು, ಶೀಘ್ರದಲ್ಲಿ ಇದರ ಶಿಲಾನ್ಯಾಸ ನೆರವೇರಲಿದೆ.

ಕೇಂದ್ರದಲ್ಲಿ ಏನೆಲ್ಲ ಬೇಕು? ಯಾವೆಲ್ಲ ಅಂಶಗಳು ಇರಬೇಕು ಎಂಬ ವಿಚಾರದ ಬಗ್ಗೆ ನೀಲನಕಾಶೆ ಸಿದ್ಧಪಡಿಸುವಂತೆ ಸಾರಿಗೆ ಇಲಾಖೆ ಕೆಎಸ್‌ಆರ್‌ಟಿಸಿಗೆ ಜವಾಬ್ದಾರಿ ನೀಡಿತ್ತು. ಇದರಂತೆ ಕೇಂದ್ರದಲ್ಲಿ ಟ್ರಾಫಿಕ್‌ ಸಹಿತ ಅಗತ್ಯ ವಿಚಾರಗಳನ್ನು ಸಿದ್ಧಪಡಿಸಿ ಕೆಎಸ್‌ಆರ್‌ಟಿಸಿಯು ಸಾರಿಗೆ ಇಲಾಖೆಗೆ ನೀಡಿದ್ದು, ಇದರ ಪ್ರಕಾರ ಪಜೀರು ಕೇಂದ್ರ ನಿರ್ಮಾಣವಾಗಲಿದೆ.

ಘನ ವಾಹನಗಳ ಚಾಲನಾ ಪರವಾನಿಗೆ ನವೀಕರಣ ಸಂದರ್ಭದಲ್ಲಿ ಚಾಲಕ ಪರಿಪೂರ್ಣನಾಗಿರಬೇಕು ಎಂಬ ನೆಲೆಯಲ್ಲಿ ಆತನನ್ನು ತರಬೇತು ಗೊಳಿಸುವ ಇರಾದೆಯಿಂದ ಸಂಸ್ಥೆ ಸ್ಥಾಪಿಸಲಾಗುತ್ತದೆ. ದ.ಕ., ಉಡುಪಿ ಸಹಿತ 5 ಜಿಲ್ಲೆಗಳನ್ನು ಒಳಗೊಂಡ ಶಿವಮೊಗ್ಗ ವಿಭಾಗದವರಿಗೆ ಈ ಕೇಂದ್ರವು ಉಪಯೋಗವಾಗಲಿದೆ. ಇಲ್ಲಿಯವರೆಗೆ ಚಾಲನಾ ಪರವಾನಿಗೆ ಮರುನವೀಕರಣಕ್ಕೆ ಪೂರ್ಣ ರೀತಿಯಲ್ಲಿ ಪರೀಕ್ಷೆ ಇರಲಿಲ್ಲ. ಆದರೆ, ಕೊಣಾಜೆ ಕೇಂದ್ರ ಆರಂಭವಾದ ಬಳಿಕ ಇದು ಕಡ್ಡಾಯವಾಗಲಿದೆ. ಈ ಮೂಲಕ ವಾಹನ ಚಾಲನೆ ಮಾಡುವಾಗ ಕೈಗೊಳ್ಳಬೇಕಾದ ಎಲ್ಲ ಎಚ್ಚರಿಕೆ ಸೂತ್ರ ಗಳನ್ನು ಇಲ್ಲಿ ನೀಡುವುದು ಸರಕಾರದ ಉದ್ದೇಶ.

ತರಬೇತಿ ಸಂಸ್ಥೆಯ ವಿಶೇಷತೆ
ಅರ್ಹ ಮತ್ತು ನಿಪುಣತೆ ಇರುವ ಚಾಲಕರಿಗೆ ನವೀಕೃತ ಚಾಲನಾ ಪರವಾನಿಗೆ ನೀಡುವುದು ಈ ಸಂಸ್ಥೆಯ ಉದ್ದೇಶ. ಘನ ವಾಹನಗಳನ್ನು ರಸ್ತೆಗೆ ಇಳಿಸುವ ಮುನ್ನ ಚಾಲಕನನ್ನು ಸಂಪೂರ್ಣವಾಗಿ ಸಿದ್ಧಗೊಳಿಸುವ ಹಾಗೂ ಪರೀಕ್ಷೆ ನಡೆಸುವ ಸಂಸ್ಥೆಯಿದು. ಭಾರೀ ವಾಹನಗಳ ಚಾಲನೆಯ ಕುರಿತಂತೆ ಒಂದು/ಎರಡು ಅಥವಾ ಮೂರು ತಿಂಗಳ ತರಬೇತಿ ನೀಡುವ ಯೋಚನೆಯೂ ಇದೆ. ತರಬೇತಿ ಸಂದರ್ಭದಲ್ಲಿ ಊಟ/ ವಸತಿ ವ್ಯವಸ್ಥೆ ಮಾಡಲಾಗುತ್ತದೆ, ಪ್ರತ್ಯೇಕ ಪಠ್ಯಪುಸ್ತಕವೂ ಬರಲಿದೆ. ಚಾಲನೆಯ ನಿಯಮ, ಕಾನೂನು, ವಹಿಸಬೇಕಾದ ಎಚ್ಚರಿಕೆ, ಮೆಕ್ಯಾನಿಕಲ್‌ ಮಾಹಿತಿ, ವಾಹನಗಳ ನಿರ್ವಹಣೆ ಸಹಿತ ಎಲ್ಲ ಅಂಶಗಳ ಬಗ್ಗೆಯೂ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಮಂಗಳೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್‌. ಹೆಗಡೆ.

ಮುಂದಿನ ದಿನಗಳಲ್ಲಿ ಭಾರೀ ವಾಹನ ಚಾಲನಾ ತರಬೇತಿ ಕಡ್ಡಾಯ ಎಂಬುದು ಮಾಡಬೇಕಿದೆ. ಭಾರೀ ವಾಹನಗಳ ಚಾಲನೆ ಮಾಡುವವರ ಚಾಲನಾ ಪರವಾನಿಗೆ ನವೀಕರಣ ಸಂದರ್ಭ ಇದನ್ನು ಪರಿಗಣಿಸಿಯೇ ನವೀಕರಣಕ್ಕೆ ಅವಕಾಶ ಕೊಡುವ ಮೂಲಕ ನೂತನ ಕೇಂದ್ರವನ್ನು ಗಟ್ಟಿಗೊಳಿಸಲಾಗುವುದು’ ಎಂದರು.

ಶಿಲಾನ್ಯಾಸ ಮುಂದೂಡಿಕೆ
ಭಾರೀ ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಡಿ. 8ರಂದು ಬೆಳಗ್ಗೆ 11 ಗಂಟೆಗೆ ಸಾರಿಗೆ ಸಚಿವ ಎಚ್‌. ಎಂ. ರೇವಣ್ಣ ಅವರು ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಆದರೆ ತುರ್ತು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಂಕು ಸ್ಥಾಪನೆಯನ್ನು ಮುಂದೂಡಲಾಗಿದೆ. ಮುಂದಿನ ದಿನವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಜಿ.ಎಸ್‌. ಹೆಗಡೆ ‘ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ. 

ತರಬೇತಿ ಕೇಂದ್ರದಲ್ಲಿ ಏನೆಲ್ಲ ಇರಲಿದೆ?
ಕಂಬ್ಳಪದವು ಸಮೀಪದ ಕೆ.ಐ.ಎ.ಡಿ.ಬಿ.ಯ ಸರ್ವೆ ನಂ.330, 331 ಹಾಗೂ 415ರ ಸುಮಾರು 10 ಎಕ್ರೆ ಪ್ರದೇಶದಲ್ಲಿ ಎರಡು ಅಂತಸ್ತುಗಳ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರ ನಿರ್ಮಾಣವಾಗಲಿದೆ. ಆಡಳಿತಾತ್ಮಕ ಕಟ್ಟಡ, ವಿಶ್ರಾಂತಿ ಗೃಹ, ಕಾರ್ಯಾಗಾರ ಕಟ್ಟಡ, ಉಪಾಹಾರ ಗೃಹ ಇಲ್ಲಿರಲಿದೆ. ಪರೀಕ್ಷಾ ಪಥದಲ್ಲಿ ‘ಎಸ್‌’ ಮಾದರಿಯ ಚಾಲನಾ ಪಥ (ಟ್ರಾಫಿಕ್‌), ರಿವರ್ಸ್‌ ಟ್ರಾಫಿಕ್‌, ‘8’ ಆಕಾರದ ಟ್ರಾಫಿಕ್‌, ಗ್ರಾಡಿಯೆಂಟ್‌ ಟ್ರಾಫಿಕ್‌ ನಿರ್ಮಾಣವಾಗಲಿದೆ. 

 ದಿನೇಶ್‌ ಇರಾ

ಟಾಪ್ ನ್ಯೂಸ್

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌

Supreme Court

Supreme Court; ಮೀಸಲಿಂದ ಹೊರಗಿಡುವ ಬಗ್ಗೆ ಶಾಸಕಾಂಗ, ಕಾರ್‍ಯಾಂಗ ನಿರ್ಧರಿಸಲಿ

BJP Symbol

Delhi BJP;ಮಹಾರಾಷ್ಟ್ರ ಮಾದರಿ ಯೋಜನೆ: ವರದಿ

rajnath 2

Aero India 2025:ಇಂದು ರಾಯಭಾರಿಗಳ ಜತೆಗೆ ರಾಜನಾಥ್‌ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌

Supreme Court

Supreme Court; ಮೀಸಲಿಂದ ಹೊರಗಿಡುವ ಬಗ್ಗೆ ಶಾಸಕಾಂಗ, ಕಾರ್‍ಯಾಂಗ ನಿರ್ಧರಿಸಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.