ಜ್ಯೂಡ್ದ್ ರಿದ್ ಅವರಿಂದ ಸಮರಕಲೆ ತರಬೇತಿ
Team Udayavani, Oct 22, 2017, 12:33 PM IST
ದೇರಳಕಟ್ಟೆ: ಸಮರ ಕಲೆಗಳಲ್ಲಿ ಖ್ಯಾತರಾದ ಆಸ್ಟ್ರೇಲಿಯಾದ ಜ್ಯೂಡ್ದ್ ರಿದ್ ತನ್ನ ವಿದ್ಯಾರ್ಥಿ ವಿನಾಯಕ ಶೆಟ್ಟಿ ಅವರೊಂದಿಗೆ ಭಾರತಕ್ಕೆ ತರಬೇತಿ ಕೊಡಲೆಂದು ಇತ್ತೀಚೆಗೆ ಭೇಟಿ ನೀಡಿ ನಗರದ ಕೆಲವು ಯುವಕರಿಗೆ ತರಬೇತಿ ನೀಡಿದರು.
ಜ್ಯೂಡ್ದ್ ತನ್ನ 12ನೇ ವಯಸ್ಸಿನಲ್ಲಿಯೇ ಕಿವ್ಕುಶಿಂ ಕರಾಟೆ ಸಂಸ್ಥಾಪಕ ಮಸುತುಟ್ಸಾ ಅವರ ಗರಡಿಯಲ್ಲಿ ಪಳಗಿದವರು. ಒಂದು ಸಾವಿರ ದಿನಗಳ ಲೈವ್ ಇನ್ ವಿದ್ಯಾರ್ಥಿ ತರಬೇತಿ ಪೂರ್ಣಗೊಂಡ ಇಬ್ಬರು ವಿದೇಶಿಯರ ಪೈಕಿ ಜ್ಯೂಡ್ದ್ ಮೊದಲಿಗರು. ಜ್ಯೂಡ್ದ್ ಅವರು ತಮ್ಮ ವಿದ್ಯಾರ್ಥಿ ವಿನಾಯಕ ಶೆಟ್ಟಿ ಅವರೊಂದಿಗೆ ಸಮರ ಕಲೆಗಳ ಸೆಮಿನಾರ್ ನಡೆಸಲು ಭಾರತಕ್ಕೆ ಬಂದಿದ್ದು, ತಣ್ಣೀರುಬಾವಿಯಲ್ಲಿ ಸುಮಾರು ನೂರು ಮಂದಿಗೆ ಎರಡು ದಿನ ಒಳಾಂಗಣ ಹಾಗೂ ಒಂದು ದಿನದ ಹೊರಾಂಗಣ ತರಬೇತಿ ಕೊಟ್ಟರು. ವಿಶ್ವ ಚಾಂಪಿಯನ್ ಆಗಿರುವ ಜ್ಯೂಡ್ದ್ ಫಿಟ್ನೆಸ್ ಕುರಿತಾಗಿ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು. ಜ್ಯೂಡ್ದ್ ಅವರು ಮಾತನಾಡಿ, ನಗರ ವಾತಾವರಣ ಫಿಟ್ನೆಸ್ ಗೆ ಹೇಳಿ ಮಾಡಿಸಿದಂತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.