ಸಾರಿಗೆ ಸುಧಾರಣೆ; ಮಂಗಳೂರಿಗೆ ಕೇಂದ್ರದ ಅನುದಾನ ನಿರೀಕ್ಷೆ


Team Udayavani, Jun 11, 2021, 5:30 AM IST

ಸಾರಿಗೆ ಸುಧಾರಣೆ; ಮಂಗಳೂರಿಗೆ ಕೇಂದ್ರದ ಅನುದಾನ ನಿರೀಕ್ಷೆ

ಮಹಾನಗರ: ಅತ್ಯುತ್ತಮ ಸಾರಿಗೆ ವ್ಯವಸ್ಥೆಯ ಮೂಲಕ ದೇಶದಲ್ಲಿ ಗುರುತಿಸಿಕೊಂಡಿರುವ ಮಂಗಳೂರು ನಗರದಲ್ಲಿ ಮತ್ತಷ್ಟು ಸಾರಿಗೆ ಕ್ರಾಂತಿಗೆ ಪೂರಕ ಯೋಜನೆಗಳಿಗೆ ಇದೀಗ ಸಿದ್ಧತೆ ಶುರುವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು “ಟ್ರಾನ್ಸ್‌ಪೋರ್ಟ್‌ 4ಆಲ್‌’ ಎಂಬ ವಿಶೇಷ ಅಭಿಯಾನವನ್ನು ಆಯೋಜಿಸಿದ್ದು, ಮಂಗಳೂರು ನಗರಕ್ಕೆ ಹೆಚ್ಚುವರಿ ಅನುದಾನ ನಿರೀಕ್ಷೆ ಮೂಡಿದೆ.

ಕೇಂದ್ರ ಸರಕಾರದಿಂದ ದೇಶದ ಎಲ್ಲ ಸ್ಮಾರ್ಟ್‌ಸಿಟಿ ನಗರಗಳಿಗೆ ನಡೆಸುವ ಈ ಸಮೀಕ್ಷೆಯಲ್ಲಿ ಸ್ಮಾರ್ಟ್‌ಸಿಟಿಗೆ ಆಯ್ಕೆಯಾದ ಕೆಲವೊಂದು ನಗರಗಳು ಮಾತ್ರ ಸ್ಪರ್ಧಿಸುತ್ತವೆ. ಅದರಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಲಿ. ಕೂಡ ಸೇರಿದೆ. ಈ ಕುರಿತಂತೆ ಮಂಗಳೂರು ಸ್ಮಾರ್ಟ್‌ಸಿಟಿ ಲಿ.ನಲ್ಲಿ ಈಗಾಗಲೇ ತಯಾರಿ ನಡೆಸಲಾಗುತ್ತಿದೆ. ಅಧ್ಯಯನಕ್ಕೆ ಪ್ರಮುಖ ಎನ್‌ಜಿಒಗಳನ್ನೂ ಬಳಸಲಾಗುತ್ತಿದ್ದು, ಇಲ್ಲಿನ ಸದಸ್ಯರು ನಗರದ ಜನ ಸಾಮಾನ್ಯರು, ಸಾರಿಗೆ ನಿರ್ವಾಹಕರು ಸಹಿತ ಪ್ರಮುಖ ವಲಯ ಒಳಗೊಂಡಂತೆ ಸಮೀಕ್ಷೆ ನಡೆಸುತ್ತಾರೆ. ಇದರಲ್ಲಿ ಬಂದ ಕುಂದು ಕೊರತೆಯನ್ನು ಆಧರಿಸಿ ಸ್ಟಾರ್ಟ್‌ಅಪ್‌ಗ್ಳಿಂದ ಪರಿಹಾರ ಕಂಡುಕೊಳ್ಳಲಾಗುತ್ತದೆ.

ರಾಜ್ಯಕ್ಕೆ ಮಾದರಿ :

ಮಂಗಳೂರು ನಗರ ಸಾರಿಗೆ ವ್ಯವಸ್ಥೆ ಈಗಾಗಲೇ ರಾಜ್ಯಕ್ಕೆ ಮಾದರಿಯಾಗಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸುವ ನಗರ ಎಂಬ ಪಟ್ಟಿಯಲ್ಲಿ ಮಂಗಳೂರಿಗೆ ಅಗ್ರಸ್ಥಾನ. ಇಲ್ಲಿ ಸುಮಾರು 2,000ಕ್ಕೂ ಹೆಚ್ಚಿನ ಬಸ್‌ಗಳು ಪ್ರತೀ ದಿನ ಅತ್ತಿದಿತ್ತ ಸಂಚರಿಸುತ್ತವೆ. ಅದೇರೀತಿ, ಆಟೋ ರಿಕ್ಷಾ, ಕಾರುಗಳು, ಎಲೆಕ್ಟ್ರಿಕ್‌ ವಾಹನಗಳು ಸಹಿತ ಸಾರಿಗೆ ವ್ಯವಸ್ಥೆಯಲ್ಲಿ ಗುರುತಿಸಿಕೊಂಡಿವೆ. ರಾಜ್ಯದಲ್ಲಿ ಅತೀ ಹೆಚ್ಚು ಕಾರು ಹೊಂದಿರುವ ಜಿಲ್ಲೆಯಲ್ಲಿ ಕರಾವಳಿಗೆ ಅಗ್ರ ಪಾಲು. ಹೀಗಿದ್ದಾಗ ಭವಿಷ್ಯದಲ್ಲಿ ನಗರ ಸಾರಿಗೆ ವ್ಯವಸ್ಥೆ ಮತ್ತಷ್ಟು ಸುಧಾರಿಸಲು ಈ ಅಭಿಯಾನ ಮತ್ತಷ್ಟು ಸಹಕಾರಿಯಾಗುವ ಸಾಧ್ಯತೆ ಇದೆ.

ಪ್ರತ್ಯೇಕ ಟಾಸ್ಕ್ಫೋರ್ಸ್‌ ರಚನೆ :

ಟ್ರಾನ್ಸ್‌ಪೊàರ್ಟ್‌4ಆಲ್‌ ಎಂಬ ಸಮೀಕ್ಷೆಗೆ ಪ್ರತ್ಯೇಕ ಟಾಸ್ಕ್ಫೋರ್ಸ್‌ ರಚನೆ ಮಾಡಲಾಗುತ್ತಿದೆ. ಮಹಾನಗರ ಪಾಲಿಕೆ, ಪೊಲೀಸ್‌/ಟ್ರಾಫಿಕ್‌ ಪೊಲೀಸ್‌, ಜಿಲ್ಲಾ ಸಾರಿಗೆ ಇಲಾಖೆ, ಸಿಟಿ ಬಸ್‌ ಪ್ರಾಧಿಕಾರ, ಮೆಟ್ರೋ ರೈಲ್‌ ಪ್ರಾಧಿಕಾರ, ಉಪನಗರ ರೈಲ್ವೇ ಪ್ರಾಧಿಕಾರ, ರೋಡ್‌ ಓನಿಂಗ್‌ ಏಜೆನ್ಸಿ, ಜಿಲ್ಲಾಡಳಿತ, ಶೈಕ್ಷಣಿಕ, ಸಂಶೋಧನ ಸಂಸ್ಥೆಗಳು, ಎನ್‌ಜಿಒ/ಸಾಮಾಜಿಕ ಉದ್ಯಮಗಳು, ಆಟೋ/ಇ-ರಿಕ್ಷಾ ಯೂನಿ ಯನ್‌ ಸದಸ್ಯರು ಈ ಟಾಸ್ಕ್ಪೋರ್ಸ್‌ ನಲ್ಲಿ ಇರುತ್ತಾರೆ. ಇದರಲ್ಲಿರುವ ಸದಸ್ಯರು ನಗರದ ಸಾರಿಗೆ ವ್ಯವಸ್ಥೆ ಉತ್ತಮಗೊಳಿಸಲು ಸಮೀಕ್ಷೆ, ಸಮಾಲೋಚನೆ ನಡೆಸುತ್ತಾರೆ. ಸಮಸ್ಯೆಗಳ ಬಗ್ಗೆ ಸ್ಥೂಲ ಅಧ್ಯಯನ ನಡೆಸಿ, ಅಗತ್ಯಗಳನ್ನು ಪಟ್ಟಿ ಮಾಡಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಈ ಅಧ್ಯಯನ ಪರಿಶೀಲಿಸಿದ ಬಳಿಕ ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗುತ್ತದೆ.

ಏನಿದು ಟ್ರಾನ್ಸ್‌ಪೋರ್ಟ್‌ 4ಆಲ್‌? :

ನಗರದಲ್ಲಿರುವ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಮಾರ್ಟ್‌ಸಿಟಿ ನಗರಗಳಿಗೆ ಆಯೋಜಿಸಿರುವ ಅಭಿಯಾನವೇ “ಟ್ರಾನ್ಸ್‌ಪೋರ್ಟ್‌4ಆಲ್‌’. ಎನ್‌ಜಿಒ ಮುಖೇನ ಸರ್ವೇ ಮಾಡಿ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುತ್ತದೆ. ಆಗಸ್ಟ್‌ 21ಕ್ಕೆ ಈ ಸರ್ವೇ ಪೂರ್ಣಗೊಳ್ಳಲಿದ್ದು, ಸ್ಮಾರ್ಟ್‌ ಸಿಟಿ ವತಿಯಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಮೀಕ್ಷೆಯ ಸಾರಾಂಶವನ್ನು ಕಳುಹಿಸಲಾಗುತ್ತದೆ. ಯೋಜನಾ ವರದಿಯ ಆಧಾರದಲ್ಲಿ ಸ್ಮಾರ್ಟ್‌ ಸಿಟಿ ನಗರಕ್ಕೆ ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತದೆ.

ಸ್ಮಾರ್ಟ್‌ಸಿಟಿ ನಗರದಲ್ಲಿನ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು “ಟ್ರಾನ್ಸ್‌ಪೊàರ್ಟ್‌4ಆಲ್‌’ ಎಂಬ ಸಮೀಕ್ಷೆ ಹಮ್ಮಿಕೊಂಡಿದೆ. ಅದರಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಲಿ. ಕೂಡ ಭಾಗವಹಿಸುತ್ತಿದ್ದು, ಈ ಸರ್ವೇ ಕುರಿತಂತೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಪ್ರಶಾಂತ್‌ ಕುಮಾರ್‌ ಮಿಶ್ರಾ, ಸ್ಮಾರ್ಟ್‌ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ 

 

ನವೀನ್‌ ಭಟ್‌ ಇಳಂತಿಲ

 

ಟಾಪ್ ನ್ಯೂಸ್

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

sand 1

Padubidri: ಮರಳು ಅಕ್ರಮ ಸಾಗಾಟ; ವಶ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.