ನಾಡದೋಣಿ ಮೀನುಗಾರರು: ಅಲ್ಲೂ ಇಲ್ಲ , ಇಲ್ಲೂ ಇಲ್ಲ , ಬದುಕೂ ಇಲ್ಲ!
ಸೀಮೆಎಣ್ಣೆ ಸಿಗದೆ ನಾಡದೋಣಿ ಮೀನುಗಾರರು ಅತಂತ್ರ
Team Udayavani, Dec 30, 2022, 7:10 AM IST
ಮಂಗಳೂರು: ನಾಡದೋಣಿ ಮೀನುಗಾರಿಕೆಗೆ ಮೂಲ ಇಂಧನವಾದ ಸೀಮೆಎಣ್ಣೆ ಇತ್ತ ಮುಕ್ತ ಮಾರುಕಟ್ಟೆ , ಅತ್ತ ಸರಕಾರದ ಸಬ್ಸಿಡಿ ರೂಪದಲ್ಲೂ ಸಿಗದ ಕಾರಣ ನೂರಾರು ಮಂದಿ ಮೀನುಗಾರರು ಅತಂತ್ರರಾಗಿದ್ದಾರೆ.
ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ಮಾರಾಟವನ್ನು ನಿಷೇಧಿಸಲಾಗಿದೆ. ಸರಕಾರದ ಸಬ್ಸಿಡಿ ರೂಪದ ಸೀಮೆಎಣ್ಣೆಗೆ ಕಾಯಬೇಕಿದೆ. ಆದರೆ ಇದೂ ನಾಲ್ಕೈದು ತಿಂಗಳುಗಳಿಂದ ಪೂರೈಕೆಯಾಗಿಲ್ಲ.
ಮೀನುಗಾರಿಕೆ ಋತು (ಸೆಪ್ಟಂಬರ್-ಮೇ)ವಿನ ವೇಳೆ ಹಿಂದೆ ಪ್ರತೀ ವರ್ಷ ಮಾಸಿಕ ತಲಾ ಗರಿಷ್ಠ 200 ಲೀ.ಗಳಂತೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ನೀಡಲಾಗುತ್ತಿತ್ತು. ಆ ಬಳಿಕ ಗರಿಷ್ಠ ತಲಾ 300 ಲೀ.ಗಳಿಗೆ ಏರಿಕೆ ಮಾಡಲು ಪ್ರಸ್ತಾವಿಸಲಾಗಿತ್ತು.
ಒಂದು ದಿನದ ಮೀನುಗಾರಿಕೆಗೆ ಕನಿಷ್ಠ 30 ಲೀಟರ್ ಸೀಮೆಎಣ್ಣೆ ಬೇಕೆಂಬುದು ಮೀನುಗಾರರ ಬೇಡಿಕೆ. ಆದರೆ ಈ ಮಧ್ಯೆ ಪ್ರಸಕ್ತ ಸಾಲಿನ ಸೆಪ್ಟಂಬರ್‌ನಿಂದ ನವೆಂಬರ್‌ವರೆಗೆ ತಲಾ 290 ಲೀಟರ್ ಸೀಮೆಎಣ್ಣೆ ಪೂರೈಕೆಯಾಗಿದೆ. ಇದು ದಿನಕ್ಕೆ 5 ಲೀಟರ್‌ಗಳಿಗಿಂತಲೂ ಕಡಿಮೆ. ಸಬ್ಸಿಡಿ ದರದಲ್ಲಿ ಲೀಟರ್‌ಗೆ 35 ರೂ. ನೀಡಬೇಕು. ಮುಕ್ತ ಮಾರುಕಟ್ಟೆಯಲ್ಲಿ 130 ರೂ. ನೀಡಬೇಕಿದೆ. ಆದರೆ ಈಗ ಎಲ್ಲೂ ಸಿಗದಿರುವುದು ಮೀನುಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಮಂಗಳೂರು, ಉಡುಪಿ, ಕಾರವಾರ ಸೇರಿ ಕರಾವಳಿಯುದ್ದಕ್ಕೆ 8,030 ಪರವಾನಿಗೆ ಪಡೆದ ನಾಡದೋಣಿ ಮೀನುಗಾರರಿದ್ದು, ಸೀಮೆಎಣ್ಣೆ ಪೂರೈಕೆ ವಿಳಂಬದಿಂದ ಬೇರೆ ಉದ್ಯೋಗದತ್ತ ಮುಖ ಮಾಡುವಂಥ ಅನಿವಾರ್ಯ ಎದುರಾಗಿದೆ. ಇವರೊಂದಿಗೆ ಮೀನು ಅಲಭ್ಯತೆಯಿಂದ ವ್ಯಾಪಾರಿಗಳೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ನಮ್ಮ ಸಂಕಷ್ಟಗಳನ್ನು ತಾಳಲಾರದೆ ಸ್ವಲ್ಪ ಸಮಯದ ಹಿಂದೆ ಬೈಂದೂರಿನಿಂದ ಮಂಜೇಶ್ವರದ ವರೆಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದೆವು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಡುಪಿ ಭೇಟಿ ವೇಳೆ ನೀಡಲಾದ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿತ್ತು ಎನ್ನುತ್ತಾರೆ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ, ನವಮಂಗಳೂರು ವಲಯ ಅಧ್ಯಕ್ಷ ವಾಸುದೇವ ಕರ್ಕೇರ.
ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳಿಗೆ ನಮ್ಮ ಸಮಸ್ಯೆ ವಿವರಿಸಿದ್ದೇವೆ. ಭರವಸೆಯಷ್ಟೆ ಸಿಕ್ಕಿದೆ. ನಾಡದೋಣಿ ಮೀನುಗಾರರನ್ನು ಅವಗಣಿಸಲಾಗುತ್ತಿದೆ ಎಂಬ ಶಂಕೆ ವ್ಯಕ್ತಪಡಿಸುತ್ತಾರೆ ದ.ಕ. ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷ ಅಶ್ವತ್ಥ ಕಾಂಚನ್.
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಮೂರು ಜಿಲ್ಲೆಗಳಲ್ಲಿ ನಾಡದೋಣಿಗಳ ಸಂಖ್ಯೆಗೆ ಪೂರಕವಾಗಿ 4,514 ನಾಡದೋಣಿಗಳಿಗೆ ಸೀಮೆಎಣ್ಣೆ ವಿತರಿಸಲಾಗುತ್ತಿದೆ. ಈ ಸಾಲಿನಲ್ಲಿ ಕೇಂದ್ರ ಸರಕಾರದಿಂದ 5,472 ಕಿ.ಲೀ. ಸೀಮೆಎಣ್ಣೆ ಬಿಡುಗಡೆಯಾಗಿದೆ. ಇನ್ನೂ 18,618 ಕಿ.ಲೀ. ಬಿಡುಗಡೆಯಾಗಬೇಕಿದೆ. ಹಾಗಾಗಿ ಕೈಗಾರಿಕಾ ಸೀಮೆಎಣ್ಣೆ ಖರೀದಿಸಿ ಪೂರೈಸಲು ಮುಖ್ಯಮಂತ್ರಿಯವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.– ಎಸ್. ಅಂಗಾರ, ಮೀನುಗಾರಿಕೆ ಸಚಿವರು
-ಸತ್ಯಾ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.