ಕಡಿಯಬೇಕಾಗಿದ್ದ ಮರ ಬುಡ ಸಮೇತ ಸ್ಥಳಾಂತರ
Team Udayavani, Aug 7, 2018, 2:44 PM IST
ಮಂಗಳೂರು: ನಗರದ ಲೇಡಿಹಿಲ್‌ನ ರಸ್ತೆ ತಿರುವಿನಲ್ಲಿದ್ದ ಮರವೊಂದನ್ನು ಬುಡಸಮೇತ ಬೇರೆಡೆಗೆ ಸ್ಥಳಾಂತರಗೊಳಿಸಿ ಪರಿಸರ ಪ್ರೀತಿ ಮೆರೆಯಲಾಗಿದೆ. ಲೇಡಿಹಿಲ್ ಬಳಿ ಚಿಲಿಂಬಿಗೆ ತಿರುಗುವ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದ “ಪೆಲ್ಟೋಫೋರಂ’ ಜಾತಿಗೆ ಸೇರಿದ ಮರವನ್ನು ಕಡಿಯಲು ಮಹಾನಗರ ಪಾಲಿಕೆ ನಿರ್ಧರಿಸಿತ್ತು.
ಆದರೆ ಇದಕ್ಕೆ ಸ್ಥಳೀಯರಿಂದ ಹಾಗೂ ಎನ್‌ಇಸಿಎಫ್ ಪರಿಸರ ಪರ ಸಂಘಟನೆ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ಮರ ಕಡಿಯುವ ನಿರ್ಧಾರವನ್ನು ಕೈಬಿಟ್ಟು ಅದನ್ನು ಬುಡಸಮೇತ ಜೀವಂತವಾಗಿ ಇನ್ನೊಂದಡೆಗೆ ಸ್ಥಳಾಂತರಿಸಲು ನಿರ್ಧರಿಸಿತು.
ಸೋಮವಾರ ಪಾಲಿಕೆ ಸಿಬಂದಿ ಕಾರ್ಯಾಚರಣೆ ನಡೆಸಿ ಕ್ರೇನ್ ಮೂಲಕ ಮರವನ್ನು ಪಕ್ಕದ ಖಾಲಿ ಜಾಗಕ್ಕೆ ಸ್ಥಳಾಂತರಿಸಿ ನೆಡಲಾಯಿತು. ಪಾಲಿಕೆಯ ಅಧಿಕಾರಿಗಳು, ಎನ್‌ಇಸಿಎಫ್‌ನ ಕಾರ್ಯಕರ್ತರಾದ ಶಶಿಧರ ಶೆಟ್ಟಿ , ಜೀತ್ ಮಿಲನ್, ರೋಹನ್ ಸಿರಿ ಮತ್ತಿತರರು ಈ ವೇಳೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.