ಮರ ಉರುಳಿ ತಹಶೀಲ್ದಾರ್ ಮನೆಗೆ ಹಾನಿ
Team Udayavani, Jun 29, 2017, 3:45 AM IST
ಸುಳ್ಯ: ಸುಳ್ಯದಲ್ಲಿ ಬುಧವಾರ ಬೀಸಿದ ಭಾರೀ ಗಾಳಿಗೆ ತಹಶೀಲ್ದಾರ್ ಎಂ.ಎಂ. ಗಣೇಶ್ ಅವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಕಾಂಪೌಂಡ್ ಹೊರಗೆ ಇದ್ದ ಮರ ಉರುಳಿದ್ದು, ಮನೆಗೆ ಭಾಗಶಃ ಹಾನಿಯಾಗಿದೆ. ಕಾಂಪೌಂಡ್ ಜರಿದು ಬಿದ್ದಿದೆ. ತಹಶೀಲ್ದಾರ್ ಅವರ ಪತ್ನಿ, ಪುತ್ರ ಮನೆಯೊಳಗೆ ಇದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಗೃಹರಕ್ಷಕ ದಳ, ಅರಣ್ಯ ಇಲಾಖೆ ಮತ್ತು ನಗರ ಪಂಚಾಯತ್, ಕಂದಾಯ ಇಲಾಖಾಧಿಕಾರಿಗಳು ಮರವನ್ನು ತೆರವುಗೊಳಿಸಿದರು.
ಮರದ ಸುತ್ತ ಇದ್ದ ಮಣ್ಣನ್ನು ಸಾರ್ವಜನಿಕ ಶೌಚಾಲಯ ನಿರ್ಮಿಸುವಾಗ ತೆಗೆಯಲಾಗಿತ್ತು. ಮರ ಬಿದ್ದು ಹಾನಿಯಾಗಬಹುದೆಂದು ತಹಶೀಲ್ದಾರ್ ಅವರು ಅದನ್ನು ತೆಗೆಸುವಂತೆ ಇಲಾಖೆಗೆ ಮೊದಲೇ ಸೂಚಿಸಿದ್ದರೆನ್ನಲಾಗಿದೆ. ಮರಗಳ ಬುಡದಲ್ಲಿ ಮಣ್ಣು ಇಲ್ಲದ ಕಾರಣದಿಂದ ಎರಡು ಮರಗಳು ಗಾಳಿಗೆ ಉರುಳಿವೆ. ತಾಲೂಕಿನಾದ್ಯಂತ ಮರಗಳು, ವಿದ್ಯುತ್ ಕಂಬಗಳು ಉರುಳಿದ್ದು, ಮಂಗಳವಾರ ಮತ್ತು ಬುಧವಾರ ವಿದ್ಯುತ್ ವ್ಯತ್ಯಯಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್ಗಾಗಿ ಅಡಿಲೇಡ್ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.