ಮರ ಅಕ್ರಮ ಸಾಗಾಟ :ಆರೋಪಿ ವಶ
Team Udayavani, Mar 17, 2017, 11:09 AM IST
ಸುಳ್ಯ: ಅಕ್ರಮವಾಗಿ ಮರದ ದಿಮ್ಮಿಯನ್ನು ಸಾಗಾಟ ಮಾಡುತ್ತಿದ್ದ ವೇಳೆ ಸುಳ್ಯ ಅರಣ್ಯ ಇಲಾಖೆ ಸಿಬಂದಿಗಳು ತಡೆದು ವಶ ಪಡಿಸಿಕೊಂಡ ಘಟನೆ ಸುಳ್ಯದಲ್ಲಿ ಬುಧವಾರ ಸಂಭವಿಸಿದೆ.
ಮಡಿಕೇರಿಯಿಂದ ಸುಳ್ಯಕಡೆಗೆ ಸುಮಾರು 1 ಲಕ್ಷ ರೂ. ಮೌಲ್ಯದ ಅಕೇಶಿಯಾ ಮರದ ದಿಮ್ಮಿಯನ್ನು ಸಾಗಾಟ ಮಾಡಲಾಗುತ್ತಿದ್ದು, ಆರೋಪಿ ಮಡಿಕೇರಿಯ ಕುಟ್ಟ ನಿವಾಸಿ ಪ್ರದೀಪನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಎಸಿಎಫ್ ಜಗನ್ನಾಥ, ಆರ್.ಎಫ್.ಒ. ಪ್ರಶಾಂತ ಪೈ, ಯೋಗೀಶ್, ಗಂಗಾಧರ , ಶಿವರಾಮ, ಸಂದೀಪ್ ಮೊದಲಾದವರು ಕಾರ್ಯಾಚರಣೆ ನಡೆಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.