ಸಚಿವೆ ಜಯಮಾಲರಿಗೆ ತುಳು ಅಕಾಡೆಮಿ ಗೌರವಾರ್ಪಣೆ
Team Udayavani, Jun 15, 2018, 11:34 AM IST
ಮಹಾನಗರ : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೂತನ ಸಚಿವರಾಗಿ ನೇಮಕಗೊಂಡಿರುವ ಡಾ| ಜಯಮಾಲ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ಸಚಿವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಅಭಿನಂದಿಸಲಾಯಿತು.
ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ ಅವರು ಮಂಗಳೂರಿನಲ್ಲಿರುವ ಅಕಾಡೆಮಿ ಯ ಸಾಂಸ್ಕೃತಿಕ ಭವನ ತುಳುಭವನಕ್ಕೆ ಭೇಟಿ ನೀಡುವಂತೆ ಸಚಿವರನ್ನು ವಿನಂತಿಸಿದರು. ಈಗಾಗಲೇ ತುಳುಭವನಕ್ಕೆ ಕಟ್ಟಡದ ಕಾಮಗಾರಿಗೆ 4.80 ಕೋ.ರೂ. ಸರಕಾರದ ಅನುದಾನ ಬಿಡುಗಡೆಯಾಗಿದ್ದು 5 ಕೋಟಿಗೂ ಹೆಚ್ಚು ಮೊತ್ತ ಖರ್ಚಾಗಿದೆ. ತುಳುಭವನದ ನೆಲ ಅಂತಸ್ತಿನ ಕಾಮಗಾರಿ ಪೂರ್ತಿ ಆಗಿದ್ದು, ಮೊದಲ ಮತ್ತು ಎರಡನೇ ಅಂತಸ್ತಿನ ಕಾಮಗಾರಿ ಬಾಕಿ ಇದೆ. ಮೊದಲ ಮಹಡಿಯಲ್ಲಿ 1,000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಭವನ ಹಾಗೂ ಎರಡನೇ ಮಹಡಿಯಲ್ಲಿ ತುಳು ಬದುಕು ವಸ್ತು ಸಂಗ್ರಹಾಲಯ ಹಾಗೂ ಕಲಾಗ್ಯಾಲರಿ ಮಾಡಲು ಅವಕಾಶವಿದೆ. ಈ ಕಾಮಗಾರಿ ಪೂರ್ತಿಗೊಳ್ಳಲು 3.60 ಕೋ.ರೂ. ಅನುದಾನದ ಆವಶ್ಯಕತೆ ಇದ್ದು, ಈಗಾಗಲೇ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದವರು ಸಚಿವರ ಗಮನ ಸೆಳೆದರು.
ಶೀಘ್ರದಲ್ಲಿ ದ.ಕ. ಜಿಲ್ಲೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ ಡಾ| ಜಯಮಾಲ ಅವರು ತುಳು ಭಾಷೆ- ಸಂಸ್ಕೃತಿಯ ಬಗ್ಗೆ ಅಕಾಡೆಮಿ ವತಿಯಿಂದ ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿ ಕಾರ್ಯಕ್ರಮಗಳನ್ನು ನಡೆಸಬೇಕು. ಈ ಮೂಲಕ ಸಾವಿರಾರು ವರ್ಷಗಳ ಇತಿಹಾಸವಿರುವ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ತುಳು ಭಾಷೆಯನ್ನು ಬೆಳಗಿಸಬೇಕು ಎಂದು ಸಲಹೆ ನೀಡಿದರು.
ಅಕಾಡೆಮಿ ಸದಸ್ಯರಾದ ಎ. ಶಿವಾನಂದ ಕರ್ಕೇರ, ತಾರನಾಥ ಗಟ್ಟಿ, ಕಾಪಿಕಾಡ್ ಹಾಗೂ ಮಾಜಿ ಸದಸ್ಯ ಡಿ.ಎಂ. ಕುಲಾಲ್ ನಿಯೋಗದಲ್ಲಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.