Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯ

ಮುಂದೆ ಗೂಗಲ್‌ ಟ್ರಾನ್ಸ್‌ಲೇಟ್‌ ಆ್ಯಪ್‌ನಲ್ಲೂ ಸೇರುವ ನಿರೀಕ್ಷೆ

Team Udayavani, Jun 29, 2024, 7:25 AM IST

Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯ

ಮಂಗಳೂರು: ಜಗತ್ತಿನ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಗೂಗಲ್‌ ತನ್ನ ಭಾಷಾಂತರ ಸೇವೆಗಳಲ್ಲಿ ತುಳುವನ್ನೂ ಸೇರಿಸಿದೆ.

ಒಟ್ಟು 110 ಭಾಷೆಗಳನ್ನು ಗೂಗಲ್‌ ಟ್ರಾನ್ಸ್‌ ಲೇಟ್‌ ಸೇವಾ ಪಟ್ಟಿಗೆ ಸೇರಿಸಿರುವುದಾಗಿ ಗೂಗಲ್‌ ಜೂ.27ರಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಮುಂದೆ ತುಳು ಭಾಷೆಯಲ್ಲಿ ಯಾವುದೇ ಪದವನ್ನು ಅರಿತುಕೊಳ್ಳಬೇಕಾದವರು ಗೂಗಲ್‌ ಟ್ರಾನ್ಸ್‌ಲೇಟ್‌ಗೆ ಹೋಗಿ ಯಾವುದೇ ಭಾಷೆಯಿಂದಲೂ ತುಳು ಪದಗಳ ಅರ್ಥ ತಿಳಿದುಕೊಳ್ಳಬಹುದು.

ಒಂದೆಡೆ ಸರಕಾರಗಳು ಇನ್ನೂ ತುಳುವನ್ನು ಅಧಿಕೃತ ರಾಜ್ಯಭಾಷೆಯನ್ನಾಗಿ ಮಾಡಲು ಹಾಗೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಆಗದಿರುವ ನಡುವೆಯೇ ಬಹುರಾಷ್ಟ್ರೀಯ ಐಟಿ ಕಂಪೆನಿಯೊಂದು ತುಳುವನ್ನು ತಮ್ಮ ಟ್ರಾನ್ಸ್‌ಲೇಟ್‌ ಪಟ್ಟಿಯಲ್ಲಿ ಸೇರಿಸಿರುವುದು ಲಕ್ಷಾಂತರ ತುಳುವರಿಗೆ ಸಂದ ಗೌರವ ಎಂದು ತುಳುವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದರ ಹಿಂದೆ ಬಹಳ ದಿನಗಳ ಕೆಲಸ ಇದೆ. ತುಳುವಿನ ದೊಡ್ಡ ಪ್ರಮಾಣದ ಶಬ್ದಗಳು, ವಾಕ್ಯ ಗಳನ್ನು ಮೆಷಿನ್‌ ಲರ್ನಿಂಗ್‌ ವ್ಯವಸ್ಥೆಗೆ ಸೇರಿಸಬೇಕಾ ಗುತ್ತದೆ. 25 ಲಕ್ಷಕ್ಕೂ ಅಧಿಕ ಮಂದಿ ಮಾತನಾಡುವ ತುಳುವಿನ ಮಹತ್ವವನ್ನು ಅರಿತುಕೊಂಡು ಈ ಸೇರ್ಪಡೆ ಮಾಡಿದೆ. ಇದು ದೊಡ್ಡ ಸಂಗತಿ ಎನ್ನುತ್ತಾರೆ ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ.ಪವನಜ.

ಹೇಗೆ ಸೇರ್ಪಡೆ?
ನ್ಯಾಚುರಲ್‌ ಲ್ಯಾಂಗೇÌಜ್‌ ಪ್ರಾಸೆಸಿಂಗ್‌ ಆಧಾರದಲ್ಲಿ ಗೂಗಲ್‌ನಲ್ಲಿ ಭಾಷೆಗಳನ್ನು ಸೇರಿಸಲಾಗುತ್ತದೆ. ಇದರಲ್ಲಿ ಎರಡು ವಿಧಗಳಿವೆ- ರೂಲ್‌ ಬೇಸ್ಡ್ ಹಾಗೂ ಸ್ಟಾಟಿಸ್ಟಿಕಲ್‌ ಬೇಸ್ಡ್. ಸ್ಟಾಟಿಸ್ಟಿಕಲ್‌ ಬೇಸ್‌ ಆಗಿದ್ದರೆ ಅದಕ್ಕೆ ಅಗಾಧವಾದ ಸಾಮಗ್ರಿ(ಕಾರ್ಪಸ್‌) ಬೇಕಾಗುತ್ತದೆ. ನಾಮಪದ, ಕ್ರಿಯಾಪದ ಇತ್ಯಾದಿ ಸೇರಿಕೊಂಡು ಸುಮಾರು 20 ಲಕ್ಷದಷ್ಟು ವಾಕ್ಯಗಳ ಅನುವಾದವನ್ನು ಮೆಷಿನ್‌ ಲರ್ನಿಂಗ್‌ಗೆ ಪೂರಕವಾಗಿ ಫೀಡ್‌ ಮಾಡಲಾಗುತ್ತದೆ. ಬಳಿಕ ಇದನ್ನು ಮೆಷಿನ್‌ ಅರಿತುಕೊಂಡು ಭಾಷಾಂತರ ಮಾಡುತ್ತದೆ. ಇದನ್ನು ಬಳಕೆ ಮಾಡಿಕೊಂಡಷ್ಟೂ ಸುಧಾರಣೆಯಾಗುತ್ತಾ ಹೋಗುತ್ತದೆ.

ತುಳು ಸೇರ್ಪಡೆಯಿಂದ ಮುಂದೆ ವಿಕಿಪೀಡಿಯಾ ಟ್ರಾನ್ಸ್‌ಲೇಷನ್‌ಗೆ ಬೇಕಾದ ಟೂಲ್‌ಗ‌ಳಿಗೂ ತುಳು ಬರಬಹುದು. ಸದ್ಯ ಕನ್ನಡದ್ದು ಮಾತ್ರವಿದೆ. ಇದರಿಂದ ತುಳು ಭಾಷಾಂತರ ಇನ್ನಷ್ಟು ಸಮೃದ್ಧಗೊಳ್ಳಲಿದೆ ಎನ್ನುತ್ತಾರೆ ಪವನಜ.

ಪ್ರಸ್ತುತ ತುಳು ಭಾಷಾಂತರ ತುಸು ಕಚ್ಚಾ ರೂಪದಲ್ಲೇ ಇದೆ. ಕೆಲವು ತಪ್ಪುಗಳಿದ್ದು, ಇವು ಸುಧಾರಣೆಯಾಗಬೇಕಾದರೆ ನಾವು ಫೀಡ್‌ಬ್ಯಾಕ್‌ ವಿಭಾಗದಲ್ಲಿ ಸರಿಯಾದ ಆಯ್ಕೆಗಳನ್ನು ತೋರಿಸಬೇಕು. ಬದಲು ಅದನ್ನು ಸ್ಕ್ರೀನ್‌ಶಾಟ್‌ ತೆಗೆದು ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಿ ಪ್ರಯೋಜನವಿಲ್ಲ. ಪ್ರಸ್ತುತ ಟ್ರಾನ್ಸ್‌ಲೇಟ್‌ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯವಿದೆ. ಗೂಗಲ್‌ ಟ್ರಾನ್ಸ್‌ ಲೇಟ್‌ ಆ್ಯಪ್‌ಗೆ ಬಂದಿಲ್ಲ. ಆದರೆ ಮುಂದೆ ಇದೂ ಬರಬಹುದು.
-ಯು.ಬಿ.ಪವನಜ,
ಮಾಹಿತಿ ತಂತ್ರಜ್ಞಾನ ತಜ್ಞರು

ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ತುಳು ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವವಾಗಿದ್ದು, ತುಳುವರು ಸಂಭ್ರಮಪಡುವ ಸಂಗತಿ. ಗೂಗಲ್‌ ಟ್ರಾನ್ಸ್‌ ಲೇಟರ್‌ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್‌ ಬ್ಯಾಕ್‌ ಕಾಲಂನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖೀಸಿ ಪ್ರತಿಕ್ರಿಯಿಸಿದರೆ ಗೂಗಲ್‌ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುವುದು. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ.
-ತಾರಾನಾಥ್‌ ಗಟ್ಟಿ ಕಾಪಿಕಾಡ್‌,
ಅಧ್ಯಕ್ಷ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.