ಮೂರನೇ ಭಾಷೆಯಾಗಿ ತುಳು ಕಲಿಕೆ ಜನಪ್ರಿಯ: ಎ.ಸಿ.ಭಂಡಾರಿ
Team Udayavani, Jan 18, 2018, 11:24 AM IST
ಮೂಡಬಿದಿರೆ: ವಿಶ್ವಾದ್ಯಂತ ಒಂದೂವರೆ ಕೋಟಿ ಜನ ತುಳು ಭಾಷೆಯನ್ನಾಡುತ್ತಿದ್ದಾರೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆ ಸೇರ್ಪಡೆಯಾಗುವ ದಿನ ಹತ್ತಿರ ಬರುವ ನಿರೀಕ್ಷೆ ಇದೆ. ಕನ್ನಡ ಮಾಧ್ಯಮದಲ್ಲಿ ತುಳುವನ್ನು ಮೂರನೇ ಭಾಷೆಯಾಗಿ ಕಲಿಯುವ ಉತ್ಸಾಹ ಕಾಣಿಸುತ್ತಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದರು.
ಶ್ರೀ ಮಹಾವೀರ ಕಾಲೇಜಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಹಾವೀರ ಕಾಲೇಜು, ಹಳೆ ವಿದ್ಯಾರ್ಥಿ ಸಂಘ ಮತ್ತು ಮೂಡಬಿದಿರೆ ತುಳುಕೂಟ ಇವುಗಳ ಆಶ್ರಯದಲ್ಲಿ ಬುಧವಾರ ನಡೆದ, ‘ತುಳುನಾಡ ಸಿರಿ ಮದಿಪು’ ಮಂಗಳೂರು ವಿ.ವಿ. ಅಂತರ್ ಕಾಲೇಜು ಮಟ್ಟದ ತುಳು ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಈ ವರ್ಷ ತುಳು ಭಾಷೆಯನ್ನು ಕಲಿಯುವ 1,648 ಮಂದಿ ವಿದ್ಯಾರ್ಥಿಗಲು 8, 9ನೇ ತರಗತಿಯಲಿದ್ದಾರೆ. ಎಸೆಸೆಲ್ಸಿಯಲ್ಲಿ 400 ಮಂದಿ ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ ಎಂದರು.
ಯಾವುದೇ ಸ್ಥಳನಾಮದ ಹಿಂದೆ ಭೌಗೋಳಿಕ, ಚಾರಿತ್ರಿಕ, ಧಾರ್ಮಿಕ ಹಿನ್ನೆಲೆಯಿರುತ್ತದೆ. ಆಧುನೀಕರಣದ ಹುಚ್ಚಿನಲ್ಲಿ ಈ ಸ್ಥಳನಾಮಗಳನ್ನು ಬದಲಾಯಿಸುತ್ತಿದ್ದಾರೆ. ಇದು ಸಲ್ಲದು. ಇದರಿಂದಾಗಿ ಒಂದು ಊರಿನ ಅನನ್ಯತೆ, ಸಾಂಸ್ಕೃತಿಕ ಐತಿಹ್ಯ ಮಾಯವಾಗುವ ಅಪಾಯವಿದೆ ಎಂದು ಹೇಳಿದರು. 11 ವರ್ಷಗಳಿಂದ ನಿರಂತರವಾಗಿ ತುಳು ಸಾಂಸ್ಕೃತಿಕ ಸ್ಪರ್ಧೆಯನ್ನು ನಡೆಸುತ್ತ ಬಂದಿರುವ ಮಹಾವೀರ ಕಾಲೇಜು ತುಳುನಾಡಿನ ಇತರ ಕಾಲೇಜುಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಸಮ್ಮಾನ
ಚಿತ್ರದುರ್ಗದಲ್ಲಿ ಜನಿಸಿ, ಅಲ್ಲೇ ಶಿಕ್ಷಣ ಪಡೆದು ತುಳುನಾಡಿಗೆ ಆಗಮಿಸಿ, ಮೂಡಬಿದಿರೆ ಶ್ರೀ ಧವಳಾ ಕಾಲೇಜಿನಲ್ಲಿ ಗ್ರಂಥಾಲಯ ಸಹಾಯಕರಾಗಿದ್ದುಕೊಂಡು ತುಳು ಭಾಷೆಯನ್ನು ಕಲಿತು, ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆ
ಗಳಲ್ಲಿ ನಿಘಂಟುಗಳೊಂದಿಗೆ ಎರಡು ತುಳು ನಿಘಂಟುಗಳನ್ನು ರಚಿಸಿರುವ ಕೊಟ್ರಯ್ಯ ಐ.ಎಂ. ಅವರನ್ನು ಸಮ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಮಾತನಾಡಿದರು. ಸಮ್ಮಾನಿತ ಕೊಟ್ರಯ್ಯ ಅವರು ಮಾತನಾಡಿದರು. ಉದ್ಯಮಿ ಕೆ. ಶ್ರೀಪತಿ ಭಟ್, ಬೆದ್ರ ತುಳು ಕೂಟದ ಅಧ್ಯಕ್ಷ ಚಂದ್ರಹಾಸ ದೇವಾಡಿಗ ಮುಖ್ಯ ಅತಿಥಿಗಳಾಗಿದ್ದರು.
ಪ್ರಾಂಶುಪಾಲ ಪ್ರೊ| ಎಚ್. ಚಂದ್ರ ಶೇಖರ್ ದೀಕ್ಷಿತ್, ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ರಮೇಶ್ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ, ವಿದ್ಯಾರ್ಥಿ ಕ್ಷೇಮ ಪಾಲನಾ ಸಂಘದ ಅಧ್ಯಕ್ಷ ಅಶ್ವಿತ್ ಜೀವನ್ ರೊಡ್ರಿಗಸ್, ಮುಖ್ಯ ಕಾರ್ಯಕ್ರಮ ಸಂಯೋಜಕ ಡಾ| ರಾಧಾಕೃಷ್ಣ ಶೆಟ್ಟಿ, ನಳಿನಿ, ವಿಜಯ ಲಕ್ಷ್ಮೀ ಮಾರ್ಲ, ಸುಲೋಚನಾ ಪಚ್ಚಿನಡ್ಕ, ಪೂರ್ಣಿಮಾ, ತುಳು ಸಂಘದ ಕಾರ್ಯದರ್ಶಿ ರೇಷ್ಮಾ ಎಸ್., ವಿದ್ಯಾರ್ಥಿ ಸಂಯೋಜಕ ವಿನ್ಸ್ ಟನ್ ಬಿ. ಪಿಂಟೋ, ಸೂರ್ಯಕಾಂತ್ ಪೈ, ಪ್ರಜ್ವಲ್ ಆರ್. ಕುಲಾಲ್, ಶಶಿಕಾಂತ್ ಉಪಸ್ಥಿತರಿದ್ದರು. ಕ್ಯಾ| ಡಾ| ರಾಧಕೃಷ್ಣ ಸ್ವಾಗತಿಸಿ, ನಳಿನಿ ಸಮ್ಮಾನಪತ್ರ ವಾಚಿಸಿದರು. ವಸುಧಾ ಎನ್.ರಾವ್ ನಿರೂಪಿಸಿದರು. ಹರೀಶ್ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.