ಇಂದು ನಡು ಕೆಡ್ಡಸ ಆಚರಣೆ: ಕೆಡ್ಡಸ ಬತ್ತ್ಂಡ್‌ಯೇ…ಭೂಮಿಗ್..
Team Udayavani, Feb 10, 2020, 5:10 AM IST
ಮಹಾನಗರ: ತುಳುನಾಡಿನ ಪ್ರಮುಖ ಆಚರಣೆಗಳಲ್ಲೊಂದಾದ ಕೆಡ್ಡಸವು ತುಳುನಾಡಿನಾದ್ಯಂತ ಫೆ. 9ರಿಂದ ಆರಂಭವಾಗಿದ್ದು, 11ರ ತನಕ ನಡೆಯುತ್ತಿದೆ. ಕೆಡ್ಡಸದ ಸಮಯದಲ್ಲಿ ಮನೆ ಮನೆಗಳಲ್ಲಿ ವಿಶೇಷ ಖಾದ್ಯ ತಯಾರಿಸಿ ಉಣಬಡಿಸುವುದು ವೈಶಿಷ್ಟ್ಯ.
ಸೃಷ್ಟಿಯ ಮೂಲ ಹೆಣ್ಣು. ಹೆಣ್ಣನ್ನು ಭೂಮಿ, ಪ್ರಕೃತಿಯಲ್ಲಿ ನಮ್ಮ ಪೂರ್ವಜರು ಕಂಡಿದ್ದಾರೆ. ಪ್ರತಿ ಸೃಷ್ಟಿಯ ಹಿಂದೆ ಹೆಣ್ಣು ಇರುತ್ತಾಳೆ. ಹಾಗಾಗಿ ಪ್ರಾಕೃತಿಕ ಸಂಪತ್ತು, ಬೆಳೆ, ಕೃಷಿಯ ಸೃಷ್ಟಿಯ ಹಿಂದೆಯೂ ಭೂಮಿ ತಾಯಿಯೆಂಬ ಹೆಣ್ಣು ಇದ್ದಾಳೆಂಬ ನಂಬಿಕೆ ತಲೆತಲಾಂತರದ್ದು. ಭೂಮಿ ಯನ್ನು ಹೆಣ್ಣೆಂಬ ಭಾವನೆಯಿಂದ ನೋಡುವು ದರಿಂದಲೇ ತುಳುನಾಡಿನಲ್ಲಿ ಕೆಡ್ಡಸ ಆಚ ರಣೆ ಮಹತ್ವ ಪಡೆದಿದ್ದು, ಇಂದಿಗೂ ನಡೆಸಿ ಕೊಂಡು ಬರಲಾಗುತ್ತಿದೆ.
ಕೆಡ್ಡಸ ಎಂದರೆ ಭೂಮಿ ತಾಯಿ ಋತುಮತಿಯಾಗುವುದು. ಆ ದಿನಗಳನ್ನು ಕೆಡ್ಡಸ ಎಂದು ಆಚರಣೆ ಮಾಡುವುದು ತುಳುನಾಡಿನ ಸಂಪ್ರದಾಯ. ಭೂಮಿ ತಾಯಿ ಋತುಮತಿಯಾದಳೆಂದರೆ ಸೃಷ್ಟಿಗೆ ಸಿದ್ಧಳಾಗಿದ್ದಾಳೆಂದೇ ಅರ್ಥ.
ಮುಂದಿನ ತಿಂಗಳಿನಿಂದ ಬೆಳೆ ಕಟಾವಿಗೆ ಸಿದ್ಧ ಗೊಳ್ಳು ತ್ತದೆ ಎಂಬುದು ಇದರ ಹಿಂದಿನ ತಾತ್ಪರ್ಯ.
ವಿಶಿಷ್ಟ ಆಹಾರ
ಫೆ. 9ರಿಂದ ತುಳುನಾಡಿನಾದ್ಯಂತ ಕೆಡ್ಡಸ ಆಚರಣೆ ಶುರುವಾಗಿದೆ. ಎರಡನೇ ದಿನ ವಾದ 10ರಂದು ನಡು ಕೆಡ್ಡಸವಾಗಿದ್ದು, ಅಂದು ತುಳುನಾಡಿನ ಹೆಚ್ಚಿನ ಮನೆಗಳಲ್ಲಿ ಅಕ್ಕಿ, ಹುರುಳಿ ಬೇಯಿಸಿ ತಿನ್ನುವ ಕ್ರಮವಿದೆ. ಗ್ರಾಮೀಣ ಭಾಗಗಳಲ್ಲಿ ಕುಚ್ಚಿಲಕ್ಕಿ ಹುಡಿ ಮಾಡಿ, ಅದಕ್ಕೆ ಬೆಲ್ಲ, ತೆಂಗಿನ ಕಾಯಿ ಹಾಕಿ ತಿನ್ನುವ ಕ್ರಮವಿದೆ. ಅಲ್ಲದೆ, ಕೆಲವು ಮನೆಗಳಲ್ಲಿ ಮಾಂಸಾಹಾರದ ಊಟ ಸೇವಿಸುವುದು ವಾಡಿಕೆ.
ಭೂಮಿಗೆ ಹಾನಿ ಮಾಡುವಂತಿಲ್ಲ
ಕೆಡ್ಡಸದ ಮೂರು ದಿನಗಳಂದು ಭೂಮಿಗೆ ಯಾವುದೇ ರೀತಿಯ ಪೆಟ್ಟು ಮಾಡುವಂತಿಲ್ಲ. ಕೊಡಲಿ ಏಟು, ಕೊಟ್ಟು, ಪಿಕ್ಕಾಸಿನಲ್ಲಿ ಅಗೆಯುವಂತಿಲ್ಲ. ಮನೆ ಆವರಣವನ್ನು ಸ್ವತ್ಛಗೊಳಿಸಿ 7 ಬಗೆಯ ಧಾನ್ಯಗಳನ್ನು ಬೆರೆಸಿ ಭೂತಾಯಿಗೆಂದು ಬಾಳೆಲೆಯಲ್ಲಿ ಇಡುವುದು ಕ್ರಮ. ಹೆಣ್ಣು ರಜಸ್ವಲೆಯಾದಾಗ ಅವಳಿಗೆ ಪೌಷ್ಟಿಕಾಂಶವುಳ್ಳ ಆಹಾರ ನೀಡಬೇಕೆಂಬ ಸಂಕೇತದೊಂದಿಗೆ ಈ ಕ್ರಮವನ್ನು ಅನುಸರಿಸಲಾಗುತ್ತದೆ. ಭೂದೇವಿಗೆ ವಸ್ತ್ರ, ಗೆಜ್ಜೆ, ಕತ್ತಿ, ಕಲಶ, ಅರಸಿನ, ಕುಂಕುಮ ಮುಂತಾದವುಗಳನ್ನು ಇಡುವುದೂ ವಾಡಿಕೆಯಾಗಿ ಬೆಳೆದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.