ಸಿಟಿ ಬಸ್‌ನಲ್ಲಿ ತುಳು ಲಿಪಿ !
ತುಳು ಭಾಷೆ 8ನೇ ಪರಿಚ್ಛೇದಕ್ಕೆ ಬೆಂಬಲ
Team Udayavani, Jan 9, 2020, 7:38 AM IST
ಸಿಟಿ ಬಸ್‌ನಲ್ಲಿ ತುಳು ಸೇರ್ಪಡೆಗೆ ಬಗ್ಗೆ ಬೆಂಬಲ ವ್ಯಕ್ತವಾಗಿರುವುದು.
ಮಹಾನಗರ: ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎಂದು ತುಳುನಾಡಿಗರದ್ದು, ಹಲವು ವರ್ಷಗಳ ಬೇಡಿಕೆ. ಈ ನಿಟ್ಟಿನಲ್ಲಿ ಇದೀಗ ನಗರದಲ್ಲಿ ಓಡುವ ಸಿಟಿ ಬಸ್ಸೊಂದರಲ್ಲಿಯೂ ಬೆಂಬಲ ವ್ಯಕ್ತವಾಗಿದ್ದು, ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಕೇಳಿಬರುತ್ತಿದೆ. ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಅವರ ಮಾಲಕತ್ವದ ಗಣೇಶ್ ಪ್ರಸಾದ್ (ರೂಟ್ ನಂ: 27 ) ಎಂಬ ಬಸ್ ಇದೀಗ ಫೇಮಸ್ ಆಗಿದೆ.
ತುಳು ಲಿಪಿ
ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಿಂದ ಅತ್ತಾವರ ಮುಖೇನ ಮಂಗಳಾದೇವಿಗೆ ತೆರಳುವ ಈ ಬಸ್‌ಗೆ ಪೈಂಟಿಂಗ್ ಮಾಡುವ ಸಮಯದಲ್ಲಿ ಬಸ್‌ನ ಎರಡೂ ಬದಿಗಳಲ್ಲಿ ಬಸ್‌ನ ಹೆಸರು ಅಥವಾ ರೂಟ್ ಬರೆಯುವ ಬದಲಿಗೆ ಅ ದಿಂದ ಅಃ ವರೆಗಿನ ತುಳು ಲಿಪಿ ಬರೆದು, ಪಕ್ಕದಲ್ಲಿಯೇ ಹ್ಯಾಶ್ ಟ್ಯಾಗ್ ಮುಖೇನ #TuluTo8thSchedule #TuluofficiallnKA_KL ಎಂದು ಬರೆಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೆಲವು ದಿನಗಳಿಂದ ಈ ಪೈಂಟಿಂಗ್ ಮಾಡಲಾಗಿದ್ದು, ಸದ್ಯ ಪೂರ್ಣಗೊಂಡಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಬಸ್ ಖ್ಯಾತಿ ಪಡೆಯುತ್ತಿದೆ. ಮಂಗಳೂರಿನ ಈ ಬಸ್‌ನ ಬಗ್ಗೆ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ದಿಲ್‌ರಾಜ್ ಆಳ್ವ ಅವರ ಬಳಿ ಸದ್ಯ ಐದು ಸಿಟಿ ಬಸ್ ಇದ್ದು, ತಮ್ಮ ಮಾಲಕತ್ವದ ಬಸ್‌ಗಳಿಗೆ ಈ ಹಿಂದೆಯೂ ವಿಶೇಷ ಪರಿಕಲ್ಪನೆಯಲ್ಲಿ ಪೈಂಟಿಂಗ್ ಮಾಡಿದ್ದರು.
“ಸ್ವಚ್ಛ ಭಾರತ’, “ಸೇವ್ ವಾಟರ್’ ಸಹಿತ ವಿವಿಧ ಪರಿಕಲ್ಪನೆಯಡಿಯಲ್ಲಿ ಈ ಹಿಂದೆಯೂ ಬಸ್‌ಗಳಲ್ಲಿ ಪೈಂಟಿಂಗ್ ಮೂಡಿ ಬಂದಿತ್ತು. ಇದೀಗ ತುಳು ಭಾಷೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಈ ರೀತಿ ಬರೆಸಲಾಗಿದೆ. ಇದರೊಂದಿಗೆ ತುಳು ಭಾಷೆಗೆ ಅಧಿಕೃತ ಸ್ಥಾನಮಾನಕ್ಕೆ ಬೆಂಬಲ ನೀಡಿದಂತಾಗಿದೆ.
ತುಳು ಭಾಷೆಗೆ ಬೆಂಬಲ
ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು. ಜತೆಗೆ ಜನತೆಗೆ ತುಳು ಲಿಪಿಯ ಪರಿಚಯವಾಗಬೇಕು. ಅದೇ ಕಾರಣಕ್ಕೆ ಬಸ್‌ನಲ್ಲಿ ಈ ರೀತಿ ಬರೆಸಲಾಗಿದೆ. ಈ ಹಿಂದೆ ನೀರಿನ ಮಹತ್ವ ಸಾರುವ ಬರಹ, ಸ್ವಚ್ಛ ಭಾರತ ಬರಹಗಳನ್ನು ಬರೆಸಲಾಗಿತ್ತು. ಬುಧವಾರದಿಂದ ಈ ಬಸ್ ಸ್ಟೇಟ್‌ಬ್ಯಾಂಕ್‌ನಿಂದ ಮಂಗಳಾದೇವಿ ಮಾರ್ಗದಲ್ಲಿ ಸಂಚಾರ ಆರಂಭಿಸಿದೆ.
- ದಿಲ್‌ರಾಜ್ ಆಳ್ವ, ಬಸ್ ಮಾಲಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.