200 ಶಾಲೆಗಳಿಗೆ ತುಳು ಪಠ್ಯ ವಿಸ್ತರಣೆ ಗುರಿ: ಎ.ಸಿ. ಭಂಡಾರಿ
Team Udayavani, Oct 23, 2017, 10:46 AM IST
ಮಂಗಳೂರು: ರಾಜ್ಯ ಸರಕಾರ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯಕ್ಕೆ ಅವಕಾಶ ನೀಡಿದ್ದು, ಪ್ರಸ್ತುತ 35 ಶಾಲೆಗಳಲ್ಲಿ 1647 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮುಂದಿನ ಶೈಕ್ಷಣಿಕ ಸಾಲಿನಿಂದ ತುಳುವನ್ನು 200 ಶಾಲೆಗಳಿಗೆ ವಿಸ್ತರಿಸುವ ಗುರಿ ಇದೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದರು.
ಶನಿವಾರ ನಗರದ ತುಳು ಭವನ ದಲ್ಲಿ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯ ಅನುಷ್ಠಾನ ಕುರಿತು ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಂವಾದ ಕಾರ್ಯ ಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ 8 ಉಪ ಸಮಿತಿಗಳನ್ನು ರಚಿಸಲಾಗಿದೆ. ಶಾಲೆ ಗಳಲ್ಲಿ ತುಳು ಪಠ್ಯದ ಆರಂಭಕ್ಕೆ ಮುಖ್ಯ ಶಿಕ್ಷಕರ ಮನವೊಲಿಸುವ ಕಾರ್ಯದಲ್ಲಿ ತುಳುಪರ ಸಂಘಟನೆ ಗಳು ಸಹಕಾರ ನೀಡಬೇಕಿದೆ ಎಂದರು.
ಅಭಿಯಾನ ನಡೆಸೋಣ
ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಅವರು, ಶಾಲೆಗಳಲ್ಲಿ ವಿದ್ಯಾರ್ಥಿ ಗಳಿಗೆ ತುಳು ಕಲಿಯಲು ಆಸಕ್ತಿ ಇದ್ದರೂ, ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ನಿರ್ಲಕ್ಷé ವಹಿಸುತ್ತಿದೆ. ಹೀಗಾಗಿ ತುಳು ಸಂಘಟನೆಗಳ ಸಹಕಾರದಿಂದ ಅಕಾ ಡೆಮಿಯು ಶಾಲೆಗಳನ್ನು ಸಂಪರ್ಕಿಸಿ ಮನವೊಲಿಸುವ ಅಭಿಯಾನ ನಡೆಸಬೇಕಿದೆ ಎಂದು ಸಲಹೆ ನೀಡಿದರು. ಹೀಗೆ ವಿವಿಧ ಸಂಘಟನೆಗಳ ಪ್ರಮುಖರು ಅಭಿ ಪ್ರಾಯ ವ್ಯಕ್ತಪಡಿಸಿದರು.
ಪ್ರಸ್ತಾವನೆಗೈದ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸರಕಾರವು 2010ರಲ್ಲಿ ತುಳು ಪಠ್ಯಕ್ಕೆ ಅವಕಾಶ ನೀಡಿದ್ದು, ಪ್ರಸ್ತುತ ಉಭಯ ಜಿಲ್ಲೆಗಳ 35 ಶಾಲೆಗಳಲ್ಲಿ ತುಳು ಕಲಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕೇವಲ 2 ಶಾಲೆಗಳಲ್ಲಿ ಮಾತ್ರ ತುಳು ಪಠ್ಯವಿದೆ. ಒಟ್ಟು 3 ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ತುಳು ಕಲಿಸಲಾಗುತ್ತಿದೆ. ಕಳೆದ ಸಾಲಿನ ಎಸೆಸೆಲ್ಸಿ ತುಳು ವಿಷಯದಲ್ಲಿ ಪರೀಕ್ಷೆ ಬರೆದ 283ರಲ್ಲಿ 42 ಮಂದಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಹೀಗಾಗಿ ಹೆಚ್ಚು ಅಂಕ ಗಳಿಕೆಗೆ ಇಲ್ಲಿ ಅವಕಾಶವಿದೆ ಎಂದರು.
ಅಕಾಡೆಮಿಯ ಉಪಸಮಿತಿಯ ಸಂಚಾಲಕ ಪ್ರಭಾಕರ ನೀರುಮಾರ್ಗ ಸ್ವಾಗತಿಸಿದರು. ಮಾಜಿ ಸದಸ್ಯ ಯಾದವ ಕರ್ಕೇರ ವಂದಿಸಿದರು. ಸದಸ್ಯೆ ಸುಧಾ ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು.
ಮನವೊಲಿಸುವ ನಿರ್ಣಯ
ತುಳು ಪಠ್ಯವನ್ನು ಹೆಚ್ಚು ಶಾಲೆಗಳಲ್ಲಿ ಅಳವಡಿಸುವ ನಿಟ್ಟಿನಲ್ಲಿ ತುಳು ಅಕಾಡೆಮಿ, ಉಪ ಸಮಿತಿ ಹಾಗೂ ತುಳುಪರ ಸಂಘಟನೆಗಳ ಪ್ರಮುಖರ ನಿಯೋಗ ಶಿಕ್ಷಣ ಇಲಾಖೆಯ ಡಿಡಿಪಿಐ ಅವರ ಸಹಕಾರದೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಕೆಲ ವೊಂದು ಶಾಲೆಗಳಿಗೆ ಭೇಟಿ ನೀಡಿ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಸಮಿತಿಯ ಮನವೊಲಿಸುವ ಕಾರ್ಯ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.