ಕೃಷಿಯಲ್ಲಿ ಖುಷಿ ಕಾಣುವ ತುಳುನಾಡ ಜನರು
Team Udayavani, Jul 31, 2017, 7:20 AM IST
ಬೆಳ್ತಂಗಡಿ : ತುಳುನಾಡಿನ ಜನರದ್ದು ಕೃಷಿ ಧರ್ಮ. ಕೃಷಿಯಿಂದ ದುರ್ಭಿಕ್ಷ ನಾಶವಾಗುತ್ತದೆ ಎನ್ನುವ ಮಾತಿನಂತೆ ನಮ್ಮವರು ಕೃಷಿಯಲ್ಲೇ ಖುಷಿ ಕಾಣುತ್ತಿದ್ದಾರೆ. ಇದು ಯಾವುದೇ ವಿಶ್ವವಿದ್ಯಾಲಯದ ಮೂಲಕ ದೊರೆಯುವ ವಿದ್ಯೆಯಲ್ಲ, ನಮ್ಮ ಪರಂಪರೆಯೇ ನಮಗೆ ಕಲಿಸಿಕೊಟ್ಟಿದೆ ಎಂದು ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯದ ವಿಭಾಗ ಮುಖ್ಯಸ್ಥ ಡಾ| ಎಂ.ಎಂ. ದಯಾಕರ್ ಹೇಳಿದರು.
ಅವರು ರವಿವಾರ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಓಡಿಲಾ°ಳ ಗ್ರಾಮದ ಸೇಡಿ ಥೋಮಸ್ ಪಿರೇರ ಅವರ ಗದ್ದೆಯಲ್ಲಿ ಭತ್ತದ ನಾಟಿ ಪ್ರಾತ್ಯಕ್ಷಿಕೆ, ಕೆಸರುಗದ್ದೆ ಆಟೋಟ ಸ್ಪರ್ಧೆ, ಕಂಬಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆ ವಹಿಸಿ, ಮರೆಯಾಗುತ್ತಿರುವ ಜನಪದ ಸಂಸ್ಕೃತಿಯ ಸೊಗಡನ್ನು ಮತ್ತೆ ಮರುಕಳಿಸುವಂತೆ ಮಾಡಲು ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದರು.
ಕೃಷಿ ಇಲಾಖೆಯ ಸಹಯೋಗದಲ್ಲಿ ಭತ್ತದ ಗದ್ದೆಯಲ್ಲಿ ನಾಟಿ ಪ್ರಾತ್ಯಕ್ಷಿಕೆ ನಡೆಯಿತು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಕೆಸರು ಗದ್ದೆಯಲ್ಲಿ ನಡೆದವು. ಕಂಬಳದ ಪ್ರದರ್ಶನ ಪಂದ್ಯ ಕೂಡ ನಡೆಯಿತು. ತಾಲೂಕು ಮಟ್ಟದ ಮುಕ್ತ ಪುರುಷರ ಹಗ್ಗಜಗ್ಗಾಟ, ಮಹಿಳೆಯರ ಹಗ್ಗ ಜಗ್ಗಾಟ ನಡೆಯಿತು.
ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ರಘುರಾಮ ಭಟ್ ಮಠ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಾರಾಯಣ ಭಟ್ ನಡುಮನೆ ಭತ್ತದ ನಾಟಿಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಧ.ಗ್ರಾ. ಯೋಜನೆ ತಾ| ಯೋಜನಾಧಿಕಾರಿ ಜಯಕರ ಶೆಟ್ಟಿ, ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಕೃಷಿ ವಿಜ್ಞಾನಿ ಹರೀಶ್ ಶೆಣೈ, ತಾ. ಪಂ. ಸದಸ್ಯರಾದ ಗೋಪಿನಾಥ ನಾಯಕ್, ಪ್ರವೀಣ್ ಗೌಡ, ಎಪಿಎಂಸಿ ಸದಸ್ಯೆ ಸೆಲ್ವಿಸ್ಟಿನ್ ಡಿ’ಸೋಜಾ, ಕುವೆಟ್ಟು ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್, ಕಳಿಯ ಪಂ. ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಪ್ರಗತಿಪರ ಕೃಷಿಕ ಜೆರಾಲ್ಡ್ ಪಿರೇರ, ಬೆಳ್ತಂಗಡಿ ಪ್ರಾಥಮಿಕ ಕೃ.ಪ. ಸಹಕಾರಿ ಸಂಘದ ಅಧ್ಯಕ್ಷ ಮುನಿರಾಜ ಅಜ್ರಿ, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಪದು¾ಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ರೈ, ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎಂ. ಜನಾರ್ದನ, ಬಿ. ಜಗನ್ನಾಥ್, ಸಂಜೀವ ಬಂಗೇರ, ಎಂ. ಹರಿದಾಸ ಪಡಂತ್ತಾಯ, ಉಪಾಧ್ಯಕ್ಷ ರಾಜೀವ ಗೌಡ, ಮದ್ದಡ್ಕ ಹಾಲಿನ ಸೊಸೈಟಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು, ಓಡಿಲಾ°ಳ ಹಾಲಿನ ಸೊಸೈಟಿ ಅಧ್ಯಕ್ಷ ಚಿನ್ನಯ ಮೂಲ್ಯ, ಸ್ನೇಹ ಸಂಗಮ ಅಟೋ ಚಾಲಕ -ಮಾಲಕ ಸಂಘದ ಅಧ್ಯಕ್ಷ ಪದ್ಮನಾಭ ಪೂಜಾರಿ, ಶಕ್ತಿ ಯುವಕ ಮಂಡಲದ ಅಧ್ಯಕ್ಷ ತಾರಾನಾಥ ನ್ಯಾಕ, ಯುವ ಶಕ್ತಿ ಭದ್ರಕಜೆ ಅಧ್ಯಕ್ಷ ಅರುಣ್ ಸುಮಿತ್, ನವೋದಯ ಸ್ವ ಸಹಾಯ ಒಕ್ಕೂಟದ ಅಧ್ಯಕ್ಷ ಶ್ಯಾಮಣ್ಣ ನಾಯಕ್ ಉಪಸ್ಥಿತರಿದ್ದರು.
ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜತೆಗೆ ಲಯನ್ಸ್ ಕ್ಲಬ್ ಬೆಳ್ತಂಗಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವೋದಯ ಸ್ವಸಹಾಯ ಗುಂಪುಗಳ ಒಕ್ಕೂಟ ಗೇರುಕಟ್ಟೆ, ಸ್ನೇಹ ಸಂಗಮ ಅಟೋ ಚಾಲಕ – ಮಾಲಕರು ಗೇರುಕಟ್ಟೆ, ಗ್ರಾಮ ಪಂಚಾಯತ್ ಕಳಿಯ, ಗ್ರಾಮ ಪಚಾಯತ್ ಕುವೆಟ್ಟು, ಹಾಲು ಉತ್ಪಾದಕರ ಸಹಕಾರ ಸಂಘ ಗೇರುಕಟ್ಟೆ, ನಾಳ, ಓಡಿಲಾ°ಳ, ಮದ್ದಡ್ಕ, ಯುವಶಕ್ತಿ ಭದ್ರಕಜೆ ಓಡಿಲಾ°ಳ, ಶಕ್ತಿ ಯುವಕ ಮಂಡಲ ರೇಷ್ಮೆ ರೋಡ್ ಇವರು ಸಹಯೋಗ ನೀಡಿದ್ದರು.
ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಧರಣೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿ, ಸಂಚಾಲಕ ಶೇಖರ್ ನಾಯ್ಕ ಸ್ವಾಗತಿಸಿ, ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಪ್ರಸಾದ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.