ತುಂಬೆ ಪ.ಪೂ.ಕಾಲೇಜು; ಬ್ಯಾಂಕಿಂಗ್ ಸುಧಾರಣೆ: ಉಪನ್ಯಾಸ
Team Udayavani, Jul 13, 2017, 3:25 AM IST
ಬಂಟ್ವಾಳ : ಹಣಕಾಸಿನ ಸುಧಾರಣೆಗಳಾದ ಕ್ಯಾಶ್‌ಲೆಸ್ ವ್ಯವಹಾರ, ಡಿಜಿಟಲ್ ವ್ಯವಹಾರಗಳು ಬ್ಯಾಂಕಿಂಗ್ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಅಲ್ಲದೆ ಇದು ತೆರಿಗೆ ತಪ್ಪಿಸುವುದನ್ನು ನಿಯಂತ್ರಣ ಮಾಡಲು ಪೂರಕ ಎಂದು ತುಂಬೆ ವಿಜಯಾ ಬ್ಯಾಂಕ್ ಶಾಖಾ ಪ್ರಬಂಧಕ ಶ್ರೀದಾಮ್ಲೆ ಹೇಳಿದರು.
ಅವರು ಜು. 10ರಂದು ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಸಂಘದ ಆಶ್ರಯದಲ್ಲಿ ನಡೆದ “ಬ್ಯಾಂಕಿಂಗ್ ಸುಧಾರಣೆಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಕೆ. ಎನ್. ಗಂಗಾಧರ ಆಳ್ವ ಮಾತನಾಡಿ, ನೂತನ ಬ್ಯಾಂಕಿಂಗ್ ಸುಧಾರಣೆಗಳು ಹಾಗೂ ತೆರಿಗೆ ಪದ್ಧತಿ ಪಾರದರ್ಶಕತೆಯನ್ನು ಪ್ರತಿಬಿಂಬಿಸುತ್ತಿದ್ದು, ಪ್ರತಿಯೊಬ್ಬರೂ ಜವಾಬ್ದಾರಿಯುತ ಪ್ರಜೆಯಾಗಿ ಬದುಕಿದಾಗ ರಾಷ್ಟ್ರದ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.
ಇತಿಹಾಸ ಉಪನ್ಯಾಸಕಿ ಶರ್ಮಿಳಾ ಸ್ವಾಗತಿಸಿದರು. ದೆ„ಹಿಕ ಶಿಕ್ಷಣ ಶಿಕ್ಷಕ ಸಾಯಿರಾಂ ನಾಯಕ್ ವಂದಿಸಿ ವಾಣಿಜ್ಯ ಸಂಘದ ನಿರ್ದೇಶಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.