ತುಮಕೂರು ಬಳಿ ರಸ್ತೆ ಅಪಘಾತ : ಕಟೀಲು ಅರ್ಚಕ ಪುತ್ರನ ಸಹಿತ ಇಬ್ಬರ ಸಾವು
Team Udayavani, Jul 26, 2018, 4:10 AM IST
ಕಿನ್ನಿಗೋಳಿ: KSRTC ಬಸ್ ಮತ್ತು ಕ್ಯಾಂಟರ್ ನಡುವೆ ಸಿಲುಕಿದ ಕಾರಿನಲ್ಲಿದ್ದ ದಕ್ಷಿಣ ಕನ್ನಡ ಮೂಲದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ತಾಳೆಕೆರೆ ಕ್ರಾಸ್ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಕಟೀಲು ದುರ್ಗಾಪರಮೇಶ್ವರೀ ದೇಗುಲದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅವರ ಪುತ್ರ ಶ್ರೀನಿಧಿ ಆಸ್ರಣ್ಣ (21) ಹಾಗೂ ತುಮಕೂರಿನಲ್ಲಿ ಹೊಟೇಲ್ ಉದ್ಯಮಿಯಾಗಿರುವ ಗುರುಪುರ ಕೈಕಂಬ ಮೂಲದ ಗುರುಪ್ರಕಾಶ್ – ವಿದ್ಯಾಲಕ್ಷ್ಮೀ ದಂಪತಿಯ ಪುತ್ರ ಪ್ರಜ್ವಲ್ (20) ಮೃತಪಟ್ಟವರು.
ಶ್ರೀನಿಧಿ ಅವರು ರವಿವಾರ ಕಟೀಲಿನಿಂದ ಬೆಂಗಳೂರಿಗೆ ಹೋಗಿದ್ದರು.ಮಂಗಳವಾರ ರಾತ್ರಿ ಗೆಳೆಯ ಪ್ರಜ್ವಲ್ ಅವರ ಸಹೋದರ ಪ್ರತೀಕ್ ನನ್ನು ಪ್ರಜ್ವಲ್ ಅವರ ಕಾರಿನಲ್ಲಿ ತುಮಕೂರಿಗೆ ಬಿಟ್ಟು ವಾಪಸಾಗುವಾಗ ಅವಘಡ ಸಂಭವಿಸಿತು. ಶ್ರೀನಿಧಿ ಆಸ್ರಣ್ಣ ಮತ್ತು ಪ್ರಜ್ವಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಜತೆಗಿದ್ದ ಶರತ್ ಉಡುಪ ಮತ್ತು ಶರತ್ ಭಂಡಾರಿ ಗಂಭೀರ ಗಾಯಗೊಂಡಿದ್ದಾರೆ.
ಶ್ರೀನಿಧಿ ನಿಧನದ ಪ್ರಯುಕ್ತ ಕಟೀಲು ದೇಗುಲಕ್ಕೆ ಸಂಬಂಧಿಸಿದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ರಜೆ ಸಾರಲಾಗಿತ್ತು. ಕಟೀಲು ಪೇಟೆಯ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದರು. ರಿಕ್ಷಾ, ಕಾರು ಚಾಲಕರು ಬಾಡಿಗೆ ಮಾಡದೆ ಶೋಕಾಚರಣೆಯಲ್ಲಿ ಪಾಲ್ಗೊಂಡರು. ಬುಧವಾರ ಸಂಜೆ 6 ಗಂಟೆಗೆ ಮಿತ್ತಬೈಲ್ ನ ಅವರ ಮನೆಯಲ್ಲಿ ಅಂತ್ಯಸಂಸ್ಕಾರ ನಡೆದಿದ್ದು, ಉಭಯ ಜಿಲ್ಲೆಗಳ ಹೆಚ್ಚಿನ ಜನ ಪ್ರತಿನಿಧಿಗಳು, ಯಕ್ಷಗಾನ ಮೇಳಗಳ ಯಜಮಾನರು, ಕಲಾವಿದರು ಭಾಗವಹಿಸಿದ್ದರು.
ಪ್ರತಿಭಾವಂತ ವಿದ್ಯಾರ್ಥಿ ಶ್ರೀನಿಧಿ ಆಸ್ರಣ್ಣ
ಕಟೀಲು ದೇಗುಲದ ಅರ್ಚಕ ಆಸ್ರಣ್ಣ ಹರಿನಾರಾಯಣ ದಾಸ ಆಸ್ರಣ್ಣ ಅವರ ಇಬ್ಬರು ಮಕ್ಕಳಲ್ಲಿ ಹಿರಿಯವನಾದ ಶ್ರೀನಿಧಿ ಆಸ್ರಣ್ಣ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ಕಾಲೇಜಿನಲ್ಲಿ ಪೂರೈಸಿದ್ದು ಪ್ರಸ್ತುತ ನಿಟ್ಟೆಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದರು. ಬಾಲ್ಯದಲ್ಲಿಯೇ ಚುರುಕು ಸ್ವಭಾವದವರಾದ ಅವರು ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರತಿಭಾವಂತರಾಗಿದ್ದರು. ತಂದೆ ನಡೆಸುತ್ತಿದ್ದ ಶ್ರೀ ದುರ್ಗಾ ಮಕ್ಕಳ ಮೇಳದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳ ತರಬೇತಿ ಪಡೆದು ಉತ್ತಮ ಚೆಂಡೆವಾದಕ ಹಾಗೂ ಬಣ್ಣದ ವೇಷಧಾರಿಯಾಗಿದ್ದರು. ಕಬಡ್ಡಿಯಲ್ಲಿ ರಾಜ್ಯ ಮಟ್ಟದ ಆಟಗಾರರಾಗಿದ್ದರು. ಬಜಪೆಯ ಜಾಗೋ ಫ್ರೆಂಡ್ಸ್ ತಂಡದ ಪ್ರಮುಖ ಆಟಗಾರರಾಗಿದ್ದರು.
ಚುರುಕುಮತಿ ಪ್ರಜ್ವಲ್
ಮೃತ ಪ್ರಜ್ವಲ್ ಅವರು ಗುರುಪುರ ಕೈಕಂಬದ ಶ್ರೀರಾಮ್ ಹೊಟೇಲ್ ಮಾಲಕ ಹರಿರಾವ್ ಅವರ ಪುತ್ರಿ ವಿದ್ಯಾಲಕ್ಷ್ಮೀ ಅವರ ಪುತ್ರ. ಗಾಯಾಳು ಶರತ್ ಅವರು ಹರಿರಾವ್ ಅವರ ಮತ್ತೋರ್ವ ಪುತ್ರಿ ಪ್ರೇಮಲತಾ ಅವರ ಪುತ್ರ. ವಿದ್ಯಾಲಕ್ಷ್ಮೀ ಅವರನ್ನು ಪ್ರಸ್ತುತ ತುಮಕೂರಿನಲ್ಲಿ ಹೊಟೇಲ್ ಉದ್ಯಮಿಯಾಗಿರುವ ಮಂಜೇಶ್ವರ ಮೂಲದ ಗುರುಪ್ರಕಾಶ್ ಬಳ್ಳಕ್ಕುರಾಯ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಪ್ರಜ್ವಲ್ ಚುರುಕಿನ ವಿದ್ಯಾರ್ಥಿಯಾಗಿದ್ದು ಅಲ್ಲೇ ವಿದ್ಯಾರ್ಜನೆ ನಡೆಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.