ಶ್ರಮಕ್ಕೆ ದೇವರು ಕರುಣಿಸಿದ ಫಲ; ಪ್ರಶಸ್ತಿಯ ಖುಷಿಯಲ್ಲಿ ಅಮೈ ಮಹಾಲಿಂಗ ನಾಯ್ಕ
Team Udayavani, Jan 26, 2022, 7:05 AM IST
ವಿಟ್ಲ: ಕೇಪು ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅಮೈ ಅವರು ನೀರಿಗಾಗಿ ಭಗೀರಥ ಪ್ರಯತ್ನ ಮಾಡಿದವರು. ಕಷ್ಟದ ಜೀವನ, ದುಡಿದೇ ದೇಹದಂಡನೆ ಮಾಡಿದ ಈ ಕೃಷಿಕನ ಸ್ವಾವಲಂಬಿ ಯಶೋಗಾಥೆ ಅತ್ಯದ್ಭುತ. ಪತಿ, ಪತ್ನಿ ಇಬ್ಬರಿಗೂ ವಿದ್ಯಾಭ್ಯಾಸವಿಲ್ಲ. ಆದರೆ ಬಂಗಾರ ವನ್ನೇ ಬೆಳೆದವರು. ಹಲವು ಬೆಳೆ ಗಳೊಂದಿಗೆ ದನ, ಜೇನು ಸಾಕಣೆ ಮಾಡುತ್ತ ಬಂದವರು. ಅವರಿಗೀಗ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿ ದ್ದೀರಿ. ಏನು ಅನಿಸಿತು?
– ತುಂಬಾ ಸಂತೋಷವಾಗಿದೆ. ನನ್ನ ಶ್ರಮಕ್ಕೆ ದೇವರು ಪ್ರಶಸ್ತಿ ಕರುಣಿಸಿದ್ದಾರೆ. ಹಳ್ಳಿಯ ಮೂಲೆ ಯಲ್ಲಿ ಕೃಷಿ ಮಾಡಿ ಬದುಕಿದ ನಾನು ದೇಶದ ಅತ್ಯುನ್ನತ ಪ್ರಶಸ್ತಿ ಸಿಗುತ್ತದೆ ಎಂದು ಊಹಿಸಿರಲೇ ಇಲ್ಲ.
ಪ್ರಶಸ್ತಿಗೆ ಭಾಜನರಾಗಿದ್ದೀರೆಂದು ಯಾವಾಗ ತಿಳಿಯಿತು?
ಮಧ್ಯಾಹ್ನ ನನಗೆ ಫೋನ್ ಬಂತು. ಹಿಂದಿಯಲ್ಲೋ ಇಂಗ್ಲಿಷ್‌ನಲ್ಲೋ ಮಾತ ನಾಡಿದರು. ನನಗೆ ಅರ್ಥವಾಗಲಿಲ್ಲ. ಮಧ್ಯಾಹ್ನ ಒಂದು ಗಂಟೆಗೆ ವಿಟ್ಲದ ಕೃಷಿ ಇಲಾಖೆ ಅಧಿಕಾರಿಗಳು ಪ್ರಶಸ್ತಿಯ ಮಾಹಿತಿ ನೀಡಿದರು.
ಯಾವಾಗ ದಿಲ್ಲಿಗೆ ತೆರಳುತ್ತೀರಿ?
ಯಾವಾಗ ಅಂತ ಗೊತ್ತಿಲ್ಲ. ದಿನ ಮತ್ತು ಸಮಯ ತಿಳಿಸುತ್ತೇವೆ, ದಿಲ್ಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಬೇಕೆಂದು ಹೇಳಿದ್ದಾರೆ. ಏನೂ ತಿಳಿಯದ ನನಗೆ ಅಲ್ಲಿಗೆ ಹೋಗಿ ಪ್ರಶಸ್ತಿ ಪಡೆಯುವಂತಹ ಭಾಗ್ಯ ಸಿಕ್ಕಿದೆ. ದೇವರ ಅನುಗ್ರಹ.
2020ರ ಜನವರಿ 7ಕ್ಕೆ ಉದಯವಾಣಿ ಯಲ್ಲಿ ನಿಮ್ಮ ಬಗ್ಗೆ ಲೇಖನ ಪ್ರಕಟಿಸಿತ್ತು..
ಹೌದು, ನೆನಪಿದೆ. ಕೃಷಿಭೂಮಿಯಲ್ಲಿ ಓಡಾಡಿದ್ದು, ಸುರಂಗವನ್ನು ತೋರಿಸಿದ್ದು ಎಲ್ಲವೂ ನೆನಪಿದೆ. ಕಷ್ಟಪಟ್ಟು ದುಡಿದಿದ್ದೆ. ಮನೆಯವರೂ ಸಹಕರಿಸುತ್ತಿದ್ದರು. ವಿದ್ಯೆಯಿಲ್ಲದೇ ಇದ್ದರೂ ವಿದ್ಯಾವಂತರನ್ನು ಸಂಪರ್ಕಿಸಲು ಇದೆಲ್ಲ ಕಾರಣವಾಗಿದೆ.
ಹಾಗಾದರೆ ಈಗ ನಿಮ್ಮ ಶ್ರಮ ಸಾರ್ಥಕವಾಯಿತು ಅಲ್ಲವೇ?
ನಿಜ. ನನಗೆ ಬೇರೇನೂ ಹೇಳಲು ಬರುವುದಿಲ್ಲ. ಖುಷಿ ಯಂತೂ ಆಗಿದೆ. ಇಲಾಖೆಯವರು ತಿಳಿಸಿದ ಮೇಲೆ ಫೋನ್ ಕರೆಗಳು ನಿರಂತರವಾಗಿ ಬರುತ್ತಿವೆ. ಎಲ್ಲರ ಪ್ರೀತಿಗೆ ಸಂತೋಷವಾಗುತ್ತಿದೆ.
ಮಧ್ಯಾಹ್ನ ತನಕ ಕೂಲಿ ಕೆಲಸ. ಬಳಿಕ ಮನೆಗೆ ಬಂದು ಸುರಂಗ ತೋಡುತ್ತಿದ್ದೆ. ರಾತ್ರಿ 12ರ ವರೆಗೂ ಒಬ್ಬನೇ ದುಡಿಯುತ್ತಿದ್ದೆ. ಜತೆಗೆ ಗುಡ್ಡವನ್ನು ಸಮತಟ್ಟಾಗಿಸಿ, ಸಾಧ್ಯವಾದಷ್ಟು ಅಡಿಕೆ ಸಸಿಯನ್ನು ನೆಡುತ್ತಿದ್ದೆ. ಈ ಅಡಿಕೆ ಸಸಿಗಳು ಕೆಲಸಕ್ಕೆ ಹೋಗುತ್ತಿದ್ದ ಮನೆಯವರ ತೋಟದಲ್ಲಿ ಬಿದ್ದು ಹುಟ್ಟಿದ ಸಸಿಗಳು. ಈ ಜಾಗದ ಅಭಿವೃದ್ಧಿಗೆ ಯಾವುದೇ ಸಾಲ ಮಾಡಲಿಲ್ಲ. ಸರಕಾರದ ಸವಲತ್ತುಗಳನ್ನೂ ಪಡೆಯಲಿಲ್ಲ. ಉಳಿಕೆಯಾಗುವಂತೆ ಯೋಜನೆ ರೂಪಿಸಿ, ಕಾರ್ಯನಿರ್ವಹಿಸುತ್ತಿದ್ದೆ.
-ಮಹಾಲಿಂಗ ನಾಯ್ಕ ಅಮೈ
- ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.