ಅರ್ಧದಲ್ಲೇ ನಿಂತ ಕಾಮಗಾರಿ; ರಾಜ್ಯ ಹೆದ್ದಾರಿ ಬದಿ ಮೋರಿ ಕುಸಿತ
Team Udayavani, Oct 4, 2018, 10:24 AM IST
ಎಕ್ಕಾರು: ರಾಜ್ಯ ಹೆದ್ದಾರಿ 67ರ ಕಟೀಲು- ಬಜಪೆ ವ್ಯಾಪ್ತಿಯ ಎಕ್ಕಾರು ಮಜಿಕರೆಯಲ್ಲಿ ಮೋರಿ ಕುಸಿತಗೊಂಡಿದ್ದು ಅದರ ಕಾಮಗಾರಿ ಅರ್ಧದಲ್ಲೇ ನಿಂತು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಹಳೆಯದಾಗಿರುವ ಮೋರಿಯ ಎರಡೂ ಬದಿಗಳಲ್ಲಿ ಕಲ್ಲುಗಳು ಮುರಿದು ಬಿದ್ದಿವೆ. ಲೋಕೋಪಯೋಗಿ ಇಲಾಖೆಯು ಮೋರಿಯ ಒಂದು ಬದಿಗೆ ನೀರು ಹರಿಯಲು ಪೈಪ್ ಹಾಕಿ ಕಾಂಕ್ರೀಟ್ ಹಾಗೂ ಮಣ್ಣು ಹಾಕಿ ಅರ್ಧದಷ್ಟು ತುಂಬಿಸಲಾಗಿದೆ. ಆದರೆ ಇಲ್ಲಿ ಇನ್ನೊಂದು ಬದಿಯೂ ಕೂಡ ಮುರಿದಿದೆ.
ಕಿರಿದಾದ ಇಳಿಜಾರು ತಿರುವಿನಿಂದ ಕೂಡಿದ ರಸ್ತೆ ಇದಾ ಗಿದ್ದು, ಅಲ್ಲೇ ಹೊಂಡ ಕೂಡ ಸೃಷ್ಟಿಯಾಗಿದೆ. ಇದು ವಾಹನ ಸಂಚಾರಕ್ಕೆ ಅಪಾಯವಾಗಿ ಪರಿಣಮಿಸಿದೆ. ಮೋರಿ ಕುಸಿತದ ಬಗ್ಗೆ ವೇಗ ವಾಗಿ ಬರುವ ವಾಹನ ಚಾಲಕರಿಗೆ ತಿಳಿಯದೆ ಸಮಸ್ಯೆಯುಂಟಾಗುತ್ತಿದೆ.
ಕಾಮಗಾರಿ ಅರ್ಧದಲ್ಲಿ ನಿಂತು ನಾಲ್ಕು ತಿಂಗಳು ಕಳೆದಿದ್ದು, ಮೋರಿಯಲ್ಲಿ ತೋಡಿನ ನೀರು ಹರಿದು ಬರುವ ಕಾರಣ ಕಾಮ ಗಾರಿಗೆ ತೊಡ ಕಾಗುತ್ತಿದೆ ಎನ್ನಲಾಗಿದೆ. ಆರು ತಿಂಗಳ ಹಿಂದೆ ಈ ಮೋರಿಗೆಂದು ನಾಲ್ಕು ಪೈಪ್ ಗಳನ್ನು ತರಲಾಗಿತ್ತು. ಅದರಲ್ಲಿ ಒಂದು ಪೈಪ್ ಅನ್ನು ಮಾತ್ರ ಉಪಯೋಗಿಸಲಾಗಿದೆ. ಬಾಕಿ ಉಳಿದ ಮೂರು ಪೈಪ್ ಗಳನ್ನು ಅಲ್ಲೇ ಇಡಲಾಗಿದೆ.
ಪರ್ಯಾಯ ರಸ್ತೆ ಇದೆ
ಈ ರಸ್ತೆಗೆ ಪರ್ಯಾಯ ರಸ್ತೆಯೂ ಇದೆ. ಕಾಮಗಾರಿ ವೇಳೆ ಇದನ್ನು ಬಳಸಬಹುದು. ಬಡಗ ಎಕ್ಕಾರು ಮುಚ್ಚಾರು ರಸ್ತೆಯನ್ನು ಬಳಸಿ ಅರಸು ಪದವು ಆಗಿ, ಮಾಲೇವು ಚೆನ್ನಯ್ಯ ಪೂಜಾರಿ ರಸ್ತೆಯಾಗಿ ಹುಣ್ಸೆಕಟ್ಟೆಗೆ ಬರಬಹುದಾಗಿದೆ. ಈ ರಸ್ತೆ ಸುಮಾರು 2 ಕಿ.ಮೀ. ಹೆಚ್ಚು ದೂರವಾಗುತ್ತದೆ.
ಇದರಿಂದ ರಾಜ್ಯ ಹೆದ್ದಾರಿಯನ್ನು 4-5 ಗಂಟೆಗಳ ಕಾಲ ಮುಚ್ಚಿ ಈ ಕಾಮಗಾರಿಯನ್ನು ಪೂರ್ತಿಗೊಳಿಸಲು ಸಾಧ್ಯವಿದೆ. ಈ ಅವಧಿಯಲ್ಲಿ ಪರ್ಯಾಯ ರಸ್ತೆ ಬಳಸಲು ಸೂಚಿಸಬಹುದು.
ಕಾಮಗಾರಿ ನಡೆಸಲು ಬಂದವರು ವಾಪಸ್
ಗ್ರಾಮ ಪಂಚಾಯತ್ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಅದರಂತೆ ಮೋರಿಗೆ ಪೈಪ್ ಹಾಕಲು ಗುತ್ತಿಗೆದಾರರು ಜೆಸಿಬಿಯೊಂದಿಗೆ ಬಂದಿದ್ದರು. ಆದರೆ ಬಜಪೆ ಪೊಲೀಸ್ ಈ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಲು ಅನುಮತಿ ನೀಡದ ಕಾರಣ ಅವರು ಹಿಂತಿರುಗಬೇಕಾಯಿತು.
ಮೋರಿ ಕುಸಿತ ಸಂಚಾರಕ್ಕೆ ಅಪಾಯ
ಇಲ್ಲಿನ ಸಮಸ್ಯೆಯ ಬಗ್ಗೆ ಶಾಸಕ ಮತ್ತು ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು. ಮೋರಿ ಕುಸಿತದಿಂದ ವಾಹನ ಸಂಚಾರಕ್ಕೆ ಅಪಾಯವಿದೆ. ಪರ್ಯಾಯ ರಸ್ತೆ ಇರುವ ಕಾರಣ ವಾಹನ ಸಂಚಾರಕ್ಕೆ ಹೆಚ್ಚು ತೊಂದರೆಯಾಗದಂತೆ ಇಲ್ಲಿ ಕಾಮಗಾರಿ ನಡೆಸಬಹುದು. ಕಲ್ಲುಗಳು ಕುಸಿದಲ್ಲಿ ವಾಹನ ಸಂಚಾರವೇ ಅಸಾಧ್ಯವಾಗಬಹುದು.
– ಸುರೇಶ್ ಶೆಟ್ಟಿ,
ಎಕ್ಕಾರು ಗ್ರಾ.ಪಂ. ಅಧ್ಯಕ್ಷರು
ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.