ಮಂಗಳೂರು: ಕಾಶ್ಮೀರಿ ಮೂಲದ ನಕಲಿ ವೈದ್ಯ ಸೇರಿ ಇಬ್ಬರು ಶಂಕಿತರ ಬಂಧನ
Team Udayavani, Aug 24, 2019, 4:09 PM IST
ಮಂಗಳೂರು: ವಿಶ್ವ ಅರೋಗ್ಯ ಸಂಸ್ಥೆಯ ಹೆಸರಿನಲ್ಲಿ ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಮಂಗಳೂರಿನ ಬರ್ಕೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಡಾ ಪಿ ಎಸ್ ಹರ್ಷ, ಆಗಸ್ಟ್ 17ರಂದು ಖಚಿತ ಮಾಹಿತಿ ಆಧರಿಸಿ ವಿಶ್ವ ಅರೋಗ್ಯ ಸಂಸ್ಥೆಯ ಹೆಸರಿನಲ್ಲಿ ಸಂಚರಿಸುತ್ತಿದ್ದ ವಾಹನವನ್ನು ತಡೆದು, ತಪಾಸಣೆ ನಡೆಸಿದಾಗ ಕಾಶ್ಮೀರದ ವಕುರಾ ಜಿಲ್ಲೆಯ ನಿವಾಸಿ ಶೌಖತ್ ಅಹಮ್ಮದ್ ಲೋನೆ ಅಲಿಯಾಸ್ ಬಸೀತ್ ಷಾ ಮತ್ತು ಪಂಜಾಬ್ ಮೂಲದ ಬಲ್ಜೀಂದರ್ ಸಿಂಗ್ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಬಸೀತ್ ಷಾ ಒಬ್ಬ ನಕಲಿ ವೈದ್ಯನಾಗಿದ್ದು, ಆತನ ಬಳಿ ನಕಲಿ ದಾಖಲೆಗಳು ಪತ್ತೆಯಾಗಿದೆ. ಈತನ ವಿರುದ್ಧ ಕಾಶ್ಮೀರ ಸೇರಿದಂತೆ ದೇಶದ ಹಲವೆಡೆ ವಂಚನೆ ಆರೋಪಗಳಿವೆ. ಈತ ತಲೆ ಮರೆಸಿ ದೇಶ ಸುತ್ತುತ್ತಿರುವುದು ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಡಾ ಬಸೀತ್ ಷಾ ಎಂಬ ಹೆಸರಿನಲ್ಲಿ ಮ್ಯಾಟ್ರಿಮೋನಿಯಲ್ ನಲ್ಲಿ ತನ್ನ ಹೆಸರು ನೊಂದಾಯಿಸಿ ಮದುವೆ ಆಗುವುದಾಗಿ ನಂಬಿಸಿ ಹಲವಾರು ಮಹಿಳೆಯರನ್ನು ಗೋವಾ, ಬೆಳಗಾವಿ , ಮುಂಬಯಿ, ಜಾರ್ಖಂಡ್, ಜೈಪುರ, ಕೊಲ್ಕಾತ್ತಾ, ಛತ್ತೀಸ್ ಗಡ್, ಅಮೃತ್ ಸರ್, ಹೈದರಬಾದ್ ಮುಂತಾದ ಕಡೆಗಳಲ್ಲಿ ವಂಚಿಸಿದ್ದಾನೆಂದು ವಿಚಾರಣೆಯ ಸಮಯ ತಿಳಿದು ಬಂದಿದ್ದು, ಅದರಂತೆ ಮ್ಯಾಟ್ರಿಮೋನಿಯಲ್ ಮೂಲಕ ಮಂಗಳೂರಿನಲ್ಲಿ ಹೆಸರು ನೊಂದಾಯಿಸಿದ್ದ ಮಹಿಳೆಯೊಂದಿಗೆ ಸಂಪರ್ಕಿಸಲು ಬಂದಿದ್ದ ಸಮಯ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾಗಿದೆ. ಆರೋಪಿತನು ಯಾವುದೇ ವೆಬ್ ಸೈಟ್ ನ್ನು ತನ್ನ ಹೆಸರಿನಲ್ಲಿ ತೆರೆದು ತಾನೊಬ್ಬ ಡಾಕ್ಟರ್ ಎಂಬುದಾಗಿ ಬಿಂಬಿಸಿ ಮೋಸ ಮಾಡುತ್ತಿರುವ ವ್ಯಕ್ತಿ ಎಂಬುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.