ಮಂಗಳೂರು: 13 ದೇವಸ್ಥಾನ/ದೈವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಚೋರರ ಬಂಧನ
Team Udayavani, Dec 9, 2021, 3:25 PM IST
ಮಂಗಳೂರು: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ 13 ದೇವಸ್ಥಾನ/ದೈವಸ್ಥಾನಗಳು ಮತ್ತು ಮೂರು ಮನೆಗಳಲ್ಲಿ ಕಳ್ಳತನ ನಡೆಸಿದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿ, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಚಿಕ್ಕಮಗಳೂರು ಜಿಲ್ಲೆ ಬೈರಪುರದ ನಾಗ ನಾಯ್ಕ (55) ಮತ್ತು ದಾವಣಗೆರೆ ಜಿಲ್ಲೆಯ ಮಾರುತಿ.ಸಿ.ವಿ (33) ಎಂದು ಗುರುತಿಸಲಾಗಿದೆ. ಇವರನ್ನು ಡಿ.3ರಂದು ಸೆರೆ ಹಿಡಿಲಾಗಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಇದನ್ನೂ ಓದಿ:ರೈತರ ಬೇಡಿಕೆ ಈಡೇರಿಕೆಗೆ ಕೇಂದ್ರ ಅಸ್ತು; 13 ತಿಂಗಳ ರೈತರ ಹೋರಾಟ ಕೊನೆಗೂ ಅಂತ್ಯ
ಪ್ರಮುಖ ಆರೋಪಿ ನಾಗ ನಾಯ್ಕ, ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ವಿಚಾರಣೆ ವೇಳೆಯಲ್ಲಿ 2018ರಿಂದ ಮಂಗಳೂರಿನ ಹಲವು ದೇವಸ್ಥಾನ/ ದೈವಸ್ಥಾನಗಳಲ್ಲಿ ತಾನು ನಡೆಸಿದ ಕಳ್ಳತನ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾನೆ.
ಈತನ ನಗರದ ಮೈದಾನಗಳಲ್ಲಿ ವಾಸವಿದ್ದು. ಹಗಲು ಹೊತ್ತಿನಲ್ಲಿ ಒಂಟಿ ಮನೆಗಳನ್ನು, ದೇವಸ್ಥಾನಗಳನ್ನು ಗುರುತು ಮಾಡಿ ರಾತ್ರಿ ಕಳ್ಳತನ ಮಾಡಿ ನಂತರ ತನ್ನ ಊರಿಗೆ ಹೋಗಿ ಮತ್ತೋರ್ವ ಆರೋಪಿ ಮಾರುತಿಯ ಜುವಲ್ಲರಿ ಶಾಪ್ ನಲ್ಲಿ ಮಾರಾಟ ಮಾಡುತ್ತಿದ್ದ. ಆರೋಪಿ ಮಾರುತಿಯು ಈ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ನಾಗನಾಯ್ಕನ ಜೊತೆ ಸೇರಿ ಸ್ವಂತ ಜುವೆಲ್ಲರಿ ನಡೆಸುತ್ತಿದ್ದ. ಸದ್ಯ ಮಾರುತಿಯನ್ನು ಪೊಲೀಸರು ಬಂಧಿಸಿದ್ದು, 18 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು 10.40 ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಾಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.