ದ್ವಿಚಕ್ರ ವಾಹನಗಳಿಗೆ ಭಾರೀ ಡಿಸ್ಕೌಂಟ್; ಭರ್ಜರಿ ಮಾರಾಟ
Team Udayavani, Apr 1, 2017, 2:26 PM IST
ಮಹಾನಗರ: ಬಿಎಸ್ -3 (ಭಾರತ್ ಸ್ಟೇಜ್) ಮಾದರಿಯ ಪರಿಸರ ಮಾಲಿನ್ಯ ನಿಯಮಾವಳಿ ಪೂರೈಸುವ ವಾಹನಗಳ ಮಾರಾಟ ಹಾಗೂ ನೋಂದಣಿ ಎ.1ರಿಂದ ಜಾರಿಗೆ ಬರುವಂತೆ ಸ್ಥಗಿತಗೊಳ್ಳುವುದರಿಂದ ಮಾ. 31ರಂದು ಜಿಲ್ಲೆಯಲ್ಲಿ ದ್ವಿಚಕ್ರ ವಾಹನಗಳ ಭರ್ಜರಿ ಮಾರಾಟ ನಡೆಯಿತು.
ಭಾರೀ ರಿಯಾಯತಿಯನ್ನು ದ್ವಿಚಕ್ರ ಕಂಪೆನಿಗಳು ಘೋಷಿಸಿದ ಪರಿಣಾಮ ಬಿಎಸ್- 3 ಮಾದರಿಯ ಸ್ಕೂಟರ್ ಹಾಗೂ ಮೋಟಾರ್ ಬೈಕ್‌ಗಳ ದಾಸ್ತಾನು ಬಹುತೇಕ ಖಾಲಿಯಾಗಿವೆ.
ಬಿಎಸ್- 3 ವಾಹನಗಳ ಮಾರಾಟ ಹಾಗೂ ನೋಂದಣಿಯನ್ನು ಎ.1 ರಿಂದ ಜಾರಿಗೆ ಬರುವಂತೆ ನಿಷೇಧಿಸಿ ಮಾ. 30ರಂದು ತೀರ್ಪು ನೀಡಿದೆ. ಮಾ. 31ವರೆಗೆ ಮಾತ್ರ ಈ ಮಾದರಿಯ ವಾಹನಗಳ ಮಾರಾಟ ಹಾಗೂ ನೋಂದಣಿಗೆ ಅವಕಾಶವಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳ ಮೇಲೆ ಕಂಪೆನಿಗಳು ಭರ್ಜರಿ ಡಿಸ್ಕೌಂಟ್ ಘೋಷಿಸಿದ್ದವು. ದ್ವಿಚಕ್ರ ವಾಹನಗಳಿಗೆ 7 ಸಾವಿರದಿಂದ 22,000 ರೂ. ವರೆಗೆ ರಿಯಾಯತಿ ಅಫರ್ ನೀಡಲಾಗುತ್ತಿತ್ತು.
ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಬಿಎಸ್-3 ಮಾದರಿಯ ನವಿ, ಡ್ರೀಮ್ ಯುಗ, ಸಿಬಿ ಶೈನ್, ಸಿಡಿಆರ್ 25 ಡಿಆರ್ ಬೈಕ್‌ಗಳ ಮೇಲೆ ಸುಮಾರು 22,000 ರೂ. ವರೆಗೆ ಡಿಸ್ಕೌಂಟ್ ಘೋಷಿಸಿದ್ದು, ಮಂಗಳೂರು ಶೋರೂಂಗಳಲ್ಲಿ ಬಹುತೇಕ ಗಾಡಿಗಳು ಮಾರಾಟವಾಗಿವೆ.
ಹೀರೋ ಕಂಪೆನಿಯು ಡ್ನೂಯೆಟ್, ದ ಬೋಲೋ ನ್ಯೂ ಮ್ಯಾಸ್ಟ್ರೋ ಸ್ಕೂಟರ್, ಸೂಪರ್ ಸ್ಪೆಡರ್, ಗ್ಲಾಮರ್ ಮೋಟಾರ್ ಬೈಕ್ ಮೇಲೆ 12,500 ರೂ. ಕಡಿತ ಹಾಗೂ ಉಚಿತ ವಿಮೆ ಆಫರ್ ಘೋಷಿಸಿತ್ತು. ಮಂಗಳೂರಿನಲ್ಲಿ ಈ ವಾಹನಗಳ ದಾಸ್ತಾನು ಪೂರ್ಣ ಖಾಲಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ಟಿವಿಎಸ್ ಕಂಪೆನಿ ತನ್ನ ಸ್ಕೂಟರ್ ಹಾಗೂ ಬೈಕ್‌ಗಳು ಮೇಲೆ ಭರ್ಜರಿ ಡಿಸ್ಕೌಂಟ್ ನೀಡಿತ್ತು. 7 ಸಾವಿರದಿಂದ 15,000 ರೂ. ವರೆಗೆ ಡಿಸ್ಕೌಂಟ್ ಇತ್ತು.
ಯಮಹಾದಿಂದಲೂ ಸುಮಾರು 10,000 ರೂ. ವರೆಗೆ ರಿಯಾಯಿತಿ ಇದ್ದ ಕಾರಣ ಬಿಎಸ್- 3 ಮಾದರಿಯ ಮೋಟರ್ ಬೈಕ್‌ಗಳು ಸಂಪೂರ್ಣ ಮಾರಾಟವಾಗಿವೆ.
ಮಾಲಿನ್ಯ ನಿಯಂತ್ರಣ ತಂತ್ರಜ್ಞಾನ
ಪ್ರಸ್ತುತ ಕಾರುಗಳು ಬಿಎಸ್- 4 ಕಾರುಗಳೇ ನೋಂದಣಿಯಾಗುತ್ತಿವೆ. ಆದುದರಿಂದ ಕಾರುಗಳಿಗೆ ಸಮಸ್ಯೆ ಇರುವುದಿಲ್ಲ. ದ್ವಿಚಕ್ರ ವಾಹನಗಳಿಗೆ ಮಾತ್ರ ಸಮಸ್ಯೆ ಇದೆ. ಭಾರತ್ ಸ್ಟೇಜ್ ( ಬಿಎಸ್) 3 ಗಿಂತ ಹಾಗೂ 4ರಲ್ಲಿ ವಾಯುಮಾಲಿನ್ಯ ಪ್ರಮಾಣದಲ್ಲಿ ಅಂತರ ಕಡಿಮೆ ಇರುತ್ತದೆ. ಈ ಪೂರಕವಾಗಿ ಬಿಎಸ್ 4ರಲ್ಲಿ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಬಿಎಸ್3ಯಲ್ಲಿ ಕಾರ್ಬನ್ ಮೋನೊಕ್ಸೆ„ಡ್ 2.30 ಗ್ರಾಂ/ ಕಿ.ಮೀ., ಎಚ್‌ಸಿ 0.10 ಗ್ರಾಂ/ ಕಿ.ಮೀ., ಹಾಗೂ ಎನ್‌ಒ ಎಕ್ಸ್ 0.15 ಗ್ರಾಂ/ಕಿ.ಮೀ. ಇರುತ್ತದೆ. ಬಿಎಸ್4 ರಲ್ಲಿ ಕಾರ್ಬನ್ ಮೋನೋಕ್ಸೆ„ಡ್ 1.00 ಗ್ರಾಂ/ಕಿ.ಮೀ., ಎಚ್‌ಸಿ 0.10 ಗ್ರಾಂ/ಕಿ.ಮೀ., ಎನ್‌ಒಎಕ್ಸ್ 0.08 ಗ್ರಾಂ/ಕಿ.ಮೀ. ಇರುತ್ತದೆ.
ಮಾರುಕಟ್ಟೆಯಲ್ಲಿರುವುದು ಬಿಎಸ್- 4 ದರ್ಜೆಯ ಇಂಧನ
ಪ್ರಸ್ತುತ ಮಾರುಕಟ್ಟೆಯಲ್ಲಿರುವುದು ಬಿಎಸ್- 4 ದರ್ಜೆಯ ಇಂಧನ. ರಾಜ್ಯದಲ್ಲಿ ಎಲ್ಲ ತೈಲ ಕಂಪೆನಿಗಳು ಬಿಎಸ್4 ದರ್ಜೆಯ ಇಂಧನವನ್ನು ಸರಬರಾಜು ಮಾಡುತ್ತಿವೆ. ಆದರೆ ಹೆಚ್ಚಿನ ವಾಹನಗಳು ಇನ್ನೂ ಕೂಡ ಬಿಎಸ್-4 ದರ್ಜೆಗೆ ಏರಿಲ್ಲ. ಉನ್ನತ ಗ್ರೇಡ್‌ನ ಇಂಧನ ಬಳಸಿದರೂ ತಾಂತ್ರಿಕತೆ ಬಿಎಸ್ 3 ಇದ್ದರೆ ಬಿಎಸ್- 4ನ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.