ಉಚ್ಚಿಲ: ಶಾಶ್ವತ ಕಾಮಗಾರಿಯಿಂದ ಕಡಲ್ಕೊರೆತ
ವಿವಿಧೆಡೆ ನಷ್ಟ,ಮನೆಗಳು ಮುಳುಗುವ ಭೀತಿ
Team Udayavani, Jun 13, 2019, 6:00 AM IST
ಉಚ್ಚಿಲದಲ್ಲಿ ಕಡಲ್ಕೊರೆತ ಉಂಟಾಗಿರುವುದು.
ಉಳ್ಳಾಲ: ಮೂರು ದಿನಗಳಲ್ಲಿ ಸೋಮೇಶ್ವರ ಉಚ್ಚಿಲದಲ್ಲಿ ನಿರಂತರ ಕಡಲ್ಕೊರೆತವಾಗುತ್ತಿದ್ದು, ಉಚ್ಚಿ ಲಕ್ಕೆ ಈ ಬಾರಿ ಶಾಶ್ವತ ಕಾಮಗಾರಿಯ ಅವಾಂತರವೇ ಬಟ್ಟಪ್ಪಾಡಿಯಿಂದ ಸೋಮೇಶ್ವರ ರುದ್ರಪಾದೆಯವರೆಗಿನ ಮನೆಗಳಿಗೆ ಹಾನಿಯಾಗಲು ಕಾರಣವಾಗಿದೆ.
ಎಂಟು ವರ್ಷದ ಹಿಂದೆ ಉಚ್ಚಿಲದಲ್ಲಿ ಕಡಲ್ಕೊರೆತ ಆರಂಭವಾಗಿತ್ತು. ಉಳ್ಳಾಲ ದಲ್ಲಿ ಶಾಶ್ವತ ಕಾಮಗಾರಿ ಮತ್ತು ತಾತ್ಕಾಲಿಕವಾಗಿ ಕಲ್ಲು ಹಾಕುವ ಕಾರ್ಯ ದೊಡ್ಡಮಟ್ಟದಲ್ಲಿ ನಡೆದಾಗ ಉಚ್ಚಿಲಕ್ಕೆ ಕೊರೆತದ ಬಿಸಿ ತಾಗಿತ್ತು. ಕಡಲ್ಕೊರೆತ ಆರಂಭವಾದ ಬಳಿಕ ಹಲ ವಾರು ಮನೆಗಳು, ಬೀಚ್ ಬದಿಯ ರೆಸಾರ್ಟ್‌ಗಳು ಸಮುದ್ರ ಪಾಲಾಗಿತ್ತು. ನಾಲ್ಕು ವರ್ಷಗಳಿಂದ ತಾತ್ಕಾಲಿಕ ಕಾಮಗಾರಿ ಕಲ್ಲು ಹಾಕುವ ಕಾಮಗಾರಿ ಆರಂಭಗೊಂಡಿದ್ದರೂ ಕಡಲ್ಕೊರೆತ ಸಮಸ್ಯೆ ಯಥಾಸ್ಥಿತಿಯಿತ್ತು. ಈ ಬಾರಿ ಉಚ್ಚಿಲ ಸಮುದ್ರ ತೀರದುದ್ದಕ್ಕೂ ಸೆಮಿ ಪರ್ಮನೆಂಟ್ ಕಲ್ಲಿನ ವಾಲ್ ನಿರ್ಮಾಣ ಕಾರ್ಯ ನಡೆದಿದ್ದರೂ ಈ ಬಾರಿಯ ಕಡಲ್ಕೊರೆತಕ್ಕೆ ಅದೂ ಕುಸಿದಿದೆ.
ಈ ಬಾರಿ ಉಚ್ಚಿಲದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿ ಆರಂಭವಾಗಿರುವುದೇ ಮುಖ್ಯ ಕಾರಣವಾಗಿದೆ. ಒಂದೆಡೆ ಚಂಡಮಾರುತದ ಗಾಳಿ ಪ್ರಭಾವ ಇನ್ನೊಂದೆಡೆ ಶಾಶ್ವತ ಕಾಮಗಾರಿಯ ಬಮ್ಸ್ì ನಿರ್ಮಾಣದಿಂದ ಬಟ್ಟಪ್ಪಾಡಿ ಯಿಂದ ಉತ್ತರದ ಕಡೆಗೆ ಫೆರಿಬೆಲು, ಸೋಮೇಶ್ವರ ರುದ್ರಪಾದೆಯವೆರೆಗೆ ಈ ಬಾರಿ ಸಮಸ್ಯೆ ಉದ್ಭವಿಸಿದೆ. ಬಟ್ಟ ಪ್ಪಾಡಿಬಳಿ ದಕ್ಷಿಣಕ್ಕೆ ಎರಡು ಬಮ್ಸ್ ì ನಿರ್ಮಾಣ ನಡೆದಿದ್ದು, ಬಟ್ಟಪ್ಪಾಡಿಯ ದಕ್ಷಿಣಕ್ಕೆ ಮರಳು ಶೇಖರಣೆಯಾಗಿದೆ. ಉತ್ತರಕ್ಕೆ ಸುಮಾರು ಎಂಟು ಬಮ್ಸ್ ರಚನೆಯಾಗಬೇಕಾಗಿದ್ದು ಮಳೆಗಾಳ ಆರಂಭವಾದ ಹಿನ್ನಲೆಯಲ್ಲಿ ಕಾಮಗಾರಿ ನಿಲ್ಲಿಸಿದ್ದು ಇದರಿಂದ ಕಡಲ್ಕೊರೆತದ ಪ್ರಭಾವ ಈ ಪ್ರದೇಶಗಳಿಗೆ ಆಗಿದೆ.
ಅವೈಜ್ಞಾನಿಕ ಕಾಮಗಾರಿ
ಉಳ್ಳಾಲದಲ್ಲಿ ಕಾಮಗಾರಿ ನಡೆದಂತೆ ಇಲ್ಲಿಯೂ ಇನ್‌ಶೋರ್ ರೀಫ್ ಕಾಮ ಗಾರಿ ನಡೆಸದೆ ಬಮ್ಸ್ì ಕಾಮಗಾರಿ ಯಿಂದ ಸಮುದ್ರದ ಅಲೆಗಳು ಬಟ್ಟಪ್ಪಾಡಿ, ಫೆರಿಬೈಲು ಮತ್ತು ಸೋಮೇಶ್ವರ ರುದ್ರಪಾದೆಯವರೆಗಿನ ಮನೆಗಳ ಹಾನಿಗೆ ಕಾರಣವಾಗಿದೆ. ರೀಫ್ ಕಾಮಗಾರಿ ನಡೆಯುತ್ತಿದ್ದರೆ ಸಮುದ್ರದ ಅಲೆಗಳ ವೇಗ ದಡಕ್ಕೆ ಬರುವಾಗ ತಡೆಯಾಗುತ್ತಿತ್ತು. ಉಳ್ಳಾಲದಲ್ಲೂ ಕಾಮಗಾರಿ ಆರಂಭದ ಹಂತದಲ್ಲಿ ಸಮಸ್ಯೆ ಎದುರಾಗಿತ್ತು.
ಕುಸಿದ ಸೆಮಿ ಪರ್ಮನೆಂಟ್ ಕಲ್ಲಿನ ಗೋಡೆ
ಉಚ್ಚಿಲ ಕಡಲ್ಕೊರೆತ ಪ್ರದೇಶದಲ್ಲಿ ಸೆಮಿ ಪರ್ಮನೆಂಟ್ ಕಲ್ಲಿನ ಗೋಡೆ(ವಾಲ್) ಕುಸಿದಿದೆ. ಈ ಹಿಂದೆ ತಾತ್ಕಾಲಿಕ ಕಾಮಗಾರಿ ಸಂದರ್ಭದಲ್ಲಿ ಹಾಕಿದ್ದ ಕಲ್ಲುಗಳ ಮೇಲೆ ವಾಲ್ ನಿರ್ಮಾಣ ಮಾಡಿದ್ದರೆ ಕುಸಿಯುವ ಭೀತಿಯಿರಲಿಲ್ಲ. ಆದರೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಮರಳಲ್ಲಿ ಹೂತು ಹೋಗಿದ್ದ ಕಲ್ಲುಗಳನ್ನು ತೆಗೆದು ಗೋಡೆ ನಿರ್ಮಾಣ ಮಾಡಿದ್ದರಿಂದ ವಾಲ್ ಕುಸಿಯುತ್ತಿದ್ದು, ಸಮುದ್ರ ಪಾಲಾಗುವ ಭೀತಿಯಲ್ಲಿದೆ.ಈ ವ್ಯಾಪ್ತಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದ್ದು, ಬೀಚ್ ರಸ್ತೆಯೂ ಸಮುದ್ರಪಾಲಾಗುವ ಭೀತಿಯಲ್ಲಿದೆ.
ನಷ್ಟವನ್ನು ಇಲಾಖೆ ಭರಿಸಲಿ
ಶಾಶ್ವತ ಕಾಮಗಾರಿಯನ್ನು ಮಳೆಗಾಲ ಆರಂಭಕ್ಕೆ ಕೆಲವು ತಿಂಗಳುಗಳ ಮೊದಲು ಆರಂಭಿಸಿದ್ದೆ ಸಮಸ್ಯೆಗೆ ಕಾರಣವಾಗಿದೆ. ಇನ್‌ಶೋರ್ ರೀಫ್ ಕಾಮಗಾರಿ ನಡೆಸುತ್ತಿದ್ದರೆ ಈ ಬಾರಿ ಹಾನಿಯ ಪ್ರಮಾಣ ಕಡಿಮೆಯಾಗಿತ್ತು. ಬಟ್ಟಪ್ಪಾಡಿಯಿಂದ ಫೆರಿಬೈಲು ಪ್ರದೇಶದ ಬಮ್ಸ್ì ರಚನೆ ಮಾಡಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಸ್ಥಳೀಯರ ಆಸ್ತಪಾಸ್ತಿ ನಷ್ಟ ಸಂಬಂಧಿತ ಇಲಾಖೆ ಭರಿಸಬೇಕು.
– ರೂಪೇಶ್,ಉಚ್ಚಿಲ ಬೀಚ್ ರೋಡ್ ನಿವಾಸಿ
ಪರಿಹಾರಕ್ಕೆ ಒತ್ತಾಯ
ನಿರಂತರ ಕಡಲ್ಕೊರೆತದಿಂದ ಹಾನಿಯಾದ ಪ್ರದೇಶಗಳ ಜನರ ರಕ್ಷಣೆಗೆ ಸೋಮೇಶ್ವರ ಗ್ರಾಮ ಪಂಚಾಯತ್‌ನಿಂದ ಬೇಕಾದ ಸಹಕಾರವನ್ನು ನೀಡಲಾಗುತ್ತಿದೆ. ಶಾಶ್ವತ ಕಾಮಗಾರಿ ಪ್ರಾರಂಭದ ಹಂತದಲ್ಲಿರುವುದರಿಂದ ಈ ಕೆಲವು ಕಡೆ ಸಮಸ್ಯೆ ಉದ್ಭವಿಸಿದ್ದು, ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಂತ್ರಸ್ಥರಿಗೆ ಪರಿಹಾರ ನೀಡಲು ಸಚಿವರನ್ನು ಮತ್ತು ಸಂಸದರನ್ನು ಒತ್ತಾಯಿಸಲಾಗುವುದು.
- ರಾಜೇಶ್ ,ಉಚ್ಚಿಲ್,ಅಧ್ಯಕ್ಷರು,ಸೋಮೇಶ್ವರ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.