ಉಡಾ ವ್ಯಾಪ್ತಿ: ಸೈಟು ಕೊಂಡರೂ ಮನೆ ಕಟ್ಟುವಂತಿಲ್ಲ !
Team Udayavani, Feb 5, 2018, 9:15 AM IST
ಬೆಳ್ತಂಗಡಿ: ಕಷ್ಟಪಟ್ಟು ದುಡಿದ ಸಂಪಾದನೆಯಲ್ಲಿ ಐದೋ ಹತ್ತೋ ಸೆಂಟ್ಸ್ ಜಾಗ ಖರೀದಿಸಿ ಸ್ವಂತ ಮನೆ ಕಟ್ಟುವ ಯೋಚನೆಯಲ್ಲಿದ್ದರೆ, ಆಯಾ ನಗರಾಭಿವೃದ್ಧಿ ಪ್ರಾಧಿಕಾರ(ಉಡಾ)ದ ಅನುಮತಿ ಪಡೆಯದ ಸೈಟು ಖರೀದಿಸಿದವರ ಸ್ವಂತ ಮನೆ ಕನಸು ಭಗ್ನ ವಾಗಲಿದೆ. ಮನೆ ಅಥವಾ ಯಾವುದೇ ಕಟ್ಟಡ ರಚನೆಗೆ ಅನುಮತಿ ದೊರೆಯುವುದಿಲ್ಲ. ಅಷ್ಟೇ ಅಲ್ಲ, ಆ ಜಾಗ ಖರೀದಿದಾರರ ಹೆಸರಿಗೆ ವರ್ಗವೂ ಆಗುವುದಿಲ್ಲ. ಗ್ರಾಮ ಪಂಚಾಯತ್ ವ್ಯಾಪ್ತಿಯ ಸೈಟುಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ನಗರಾಭಿವೃದ್ಧಿ ಪ್ರಾಧಿಕಾರಗಳು ಅಸ್ತಿತ್ವದಲ್ಲಿರುವ ಎಲ್ಲ ಪೌರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಸಮಸ್ಯೆ ಉದ್ಭವಿಸಿದೆ.
ಹೀಗಿದೆ ನಿಯಮ
ಯಾವುದೇ ಭೂಮಿಯನ್ನು ಕೃಷಿಯೇತರ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸುವುದಾದರೆ ಅಂತಹ ಭೂಮಿಯನ್ನು ಸರಕಾರದ ನಿಯಮಾ ವಳಿ ಪ್ರಕಾರ ಶುಲ್ಕ ಕಟ್ಟಿ ಅಳತೆ, ನಕ್ಷೆ ಮಾಡಿಸಿ ಭೂ ಪರಿವರ್ತನೆ (ಕನ್ವರ್ಷನ್) ಮಾಡಿಸಬೇಕು. ಹಾಗೆ ಕನ್ವರ್ಷನ್ ಮಾಡಿದ ಭೂಮಿಯಲ್ಲಿ ಕಟ್ಟಡ, ಮನೆ ಇತ್ಯಾದಿ ರಚನೆಗೆ ಅನುಮತಿ ನೀಡಲಾಗುತ್ತದೆ. ಅಂತಹ ಕಟ್ಟಡಕ್ಕೆ ಕಟ್ಟಡ/ಮನೆ ನಂಬರ್ ನೀಡಿ ತೆರಿಗೆ ಹಾಕಲಾಗುತ್ತದೆ. ಆ ಕಟ್ಟಡಕ್ಕಷ್ಟೇ ವಿದ್ಯುತ್, ನೀರಿನ ಸಂಪರ್ಕ ದೊರೆಯುತ್ತದೆ. ಅದು ಅಧಿಕೃತ ಕಟ್ಟಡ/ಮನೆ ಎನಿಸಲ್ಪಡುತ್ತದೆ.
ಲೇಔಟ್ ಮಾಡಬೇಕು
ಸ್ವಂತ ಉಪಯೋಗಕ್ಕಾದರೆ ಆತನ ಸ್ವಂತ ಜಾಗದಲ್ಲಿ ನಿರ್ದಿಷ್ಟ ಅಳತೆಯ ಸ್ಥಳವನ್ನು ಕನ್ವರ್ಷನ್ ಮಾಡಿ, ಅನುಮತಿ ಪಡೆದು ಕಟ್ಟೋಣ ಪ್ರಕ್ರಿಯೆಗೆ ಮುಂದುವರಿಯಬಹುದು. ಆದರೆ ಒಂದೇ ಜಾಗವನ್ನು ತುಂಡರಿಸಿ ಅನೇಕರಿಗೆ ಮಾರಾಟ ಮಾಡುವುದಾದರೆ ಅಂತಹ ಜಾಗದ ಖರೀದಿದಾರರು ಜಾಗರೂಕರಾಗಿರಲೇಬೇಕು. ಏಕೆಂದರೆ ಈಗಿನ ನಿಯಮ ಪ್ರಕಾರ, ಒಬ್ಬ ವ್ಯಕ್ತಿ 1 ಎಕರೆ ಜಾಗವನ್ನು ಕನ್ವರ್ಷನ್ ಮಾಡುವು ದಾದರೆ ಆತ ಅದರಲ್ಲಿ 38 ಸೆಂಟ್ಸ್ ಜಾಗವನ್ನು ಸ್ಥಳೀಯಾಡಳಿತ ಸಂಸ್ಥೆಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡುವ ಮೂಲಕ ನೀಡಬೇಕು. ಹಾಗೆ ನೀಡಿದ ಜಾಗದಲ್ಲಿ ಲೇಔಟ್ ಮಾಲಕರು ರಸ್ತೆ, ನೀರು, ಆಟದ ಮೈದಾನ, ಉದ್ಯಾನವನ ನಿರ್ಮಿಸುತ್ತಾರೆ ಅಥವಾ ಅನು ದಾನ ಲಭ್ಯತೆ ಮೇರೆಗೆ ಸರಕಾರ ನಿರ್ಮಿಸುತ್ತದೆ. ಉಳಿಕೆ 62 ಸೆಂಟ್ಸ್ ಜಾಗವನ್ನು ನಿರ್ದಿಷ್ಟ ಅಳತೆಯ ಸೈಟ್‌ಗಳಾಗಿ ವಿಂಗಡಿಸಬೇಕು. ಒಟ್ಟು ಜಾಗ ದಲ್ಲಿ ಪ್ರತೀ ಸೈಟ್‌ಗೂ ರಸ್ತೆ ತೋರಿಸಿ ಇತರ ಮೂಲಭೂತ ಆವಶ್ಯಕತೆಗೆ ಅನುವು ಮಾಡಿ ಕೊಟ್ಟ ವಿನ್ಯಾಸ ನಕ್ಷೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ದೊರೆತ ಬಳಿಕ ಜಾಗ ವನ್ನು ಮಾರಾಟ ಮಾಡಬಹುದಾಗಿದೆ. ಹೀಗೆ ಕಾನೂನುಬದ್ಧ ಪ್ರಕ್ರಿಯೆಯಲ್ಲಿ ಮಾಡಿದ ಲೇಔಟ್‌ನಲ್ಲಿ ಜಾಗ ಖರೀದಿಸಿದವರಿಗೆ ಮನೆ ರಚನೆಗೆ ಅನುಮತಿ ದೊರೆಯುತ್ತದೆ.
ಖಾತೆ ಬದಲಾವಣೆ ಇಲ್ಲ
ವಿನ್ಯಾಸ ನಕ್ಷೆಗೆ ಅನುಮತಿ ಪಡೆಯದ ಸೈಟು ಗಳನ್ನು ಖರೀದಿಸಿ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿದ್ದರೂ ಅಂತಹ ಭೂಮಿಯ ಖಾತೆ ಬದಲಾವಣೆ (ಆರ್‌ಟಿಸಿಯಲ್ಲಿ ಖರೀದಿ ದಾರನ ಹೆಸರು ನಮೂದಿಸುವ ಪ್ರಕ್ರಿಯೆ) ಮಾಡದಂತೆ ಸರಕಾರ ಸ್ಪಷ್ಟ ಸುತ್ತೋಲೆ ನೀಡಿದೆ. ಒಂದೊಮ್ಮೆ ಖಾತೆ ಬದಲಾಯಿಸಿದರೆ ಅಂತಹ ಸ್ಥಳೀಯ ಸಂಸ್ಥೆಯ ಆಯುಕ್ತರು, ಪೌರಾ ಯುಕ್ತರು, ಮುಖ್ಯಾಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಕ್ರಮ ಕಟ್ಟಡ
ವಿನ್ಯಾಸ ನಕ್ಷೆಗೆ ಅನುಮತಿ ದೊರೆಯದೆ, ಸೈಟ್ ಖರೀದಿಸಿದವರ ಖಾತೆ ಬದಲಾವಣೆ ಯಾಗದೆ ಅವರಿಗೆ ಬ್ಯಾಂಕ್ ಸೌಲಭ್ಯ, ಸರಕಾರಿ ಸೌಲಭ್ಯ ದೊರೆಯುವುದಿಲ್ಲ. ಕಟ್ಟಡ ರಚನೆಗೆ ಅನುಮತಿಯೂ ಇಲ್ಲ. ಒಂದೊಮ್ಮೆ ಅಕ್ರಮವಾಗಿ ಮನೆ ಕಟ್ಟಿದರೂ ಮನೆ ನಂಬರ್, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ದೊರೆಯುವುದಿಲ್ಲ. ಅಕ್ರಮ ಸಕ್ರಮ ಕಾಯ್ದೆಯೇ ಬರಬೇಕು ಅಥವಾ ಭಾರೀ ದಂಡ ಪಾವತಿಸಬೇಕು. ಆದ್ದರಿಂದ ನಗರ ಪ್ರದೇಶ ದಲ್ಲಿ ಅಂತಹ ಸೈಟುಗಳನ್ನು ಕೊಂಡ ಪ್ರತೀ ತಾಲೂಕಿನ ನೂರಾರು ಮಂದಿ ಈಗ ಅತಂತ್ರ ರಾಗಿದ್ದು, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅಂಡಲೆಯುತ್ತಿದ್ದಾರೆ. ಇವರಿಗೆ ಅಕ್ರಮಸಕ್ರಮ ಭಾಗ್ಯವೇ ಬರಬೇಕಿದೆ.
- ಸೈಟು ಕೊಳ್ಳುವ ಮುನ್ನ ಯೋಚಿಸಿ
- ನ.ಅ.ಪ್ರಾ. ಅನುಮತಿ ರಹಿತ ಸೈಟಿಗಿಲ್ಲ ವಸತಿ ಅನುಮತಿ
- ವಿನ್ಯಾಸ ನಕ್ಷೆ ಇದೆಯೇ ಎಂದು ಪರೀಕ್ಷಿಸಿ ಸೈಟು ಪಡೆಯಿರಿ
- ರಿಯಲ್ ಎಸ್ಟೇಟ್ ಲಾಬಿಯಿಂದ ಭಾರೀ ಮೋಸ
- ಅಂಥ ಜಾಗದ ಆರ್‌ಟಿಸಿ ಕೂಡ ಆಗುವುದಿಲ್ಲ
ಸಮಸ್ಯೆ ಉಂಟಾಗಿರುವುದು ಹೀಗೆ
ಸಾಮಾನ್ಯವಾಗಿ ಎಕರೆಗಟ್ಟಲೆ ಜಾಗ ಖರೀದಿಸಿ ಅದನ್ನು ಏಕಗಂಟಿನಲ್ಲಿ ಕನ್ವರ್ಷನ್ ಮಾಡಿಸಲಾಗುತ್ತದೆ. ಬಳಿಕ ಅದನ್ನು ಸೈಟುಗಳಾಗಿ ವಿಂಗಡಿಸಿ ಮಾರಾಟ ಮಾಡಲಾಗುತ್ತದೆ. ಸರಕಾರದ ನಿಯಮ ಪ್ರಕಾರ ಲೇಔಟ್‌ನ ಸೈಟ್‌ಗಳಿಗೆ 30 ಅಡಿ ಅಗಲದ ದಾರಿ ಇರಬೇಕು. ಆದರೆ ಈ ರೀತಿ ಏಕಗಂಟಿನ ಕನ್ವರ್ಷನ್ ಮಾಡಿದ ವ್ಯಕ್ತಿ ತನ್ನಲ್ಲಿನ ಸೈಟ್‌ಗಳಿಗೆ ಮನಸೋ ಇಚ್ಛೆಯಷ್ಟು ಅಗಲದ ದಾರಿ ಬಿಟ್ಟಿರುತ್ತಾನೆ. ಸೈಟ್‌ಗಳ ನೋಂದಣಿಯೇನೋ ಆಗುತ್ತದೆ. ಆದರೆ ಎಷ್ಟು ದಿನ ಕಳೆದರೂ ಪಹಣಿ ಪತ್ರಿಕೆಯಲ್ಲಿ (ಆರ್‌ಟಿಸಿ) ಖರೀದಿಸಿದವನ ಹೆಸರು ದಾಖಲಾಗುವುದೇ ಇಲ್ಲ. ಮಾತ್ರವಲ್ಲ, ಮನೆ ರಚನೆಗೆ ಸ್ಥಳೀಯಾಡಳಿತದ ಅನುಮತಿಗೆ ಹೋದಾಗ ಅನುಮತಿಯೂ ದೊರೆಯುವುದಿಲ್ಲ. ಏಕೆಂದರೆ ಆ ಸೈಟ್‌ನ ವಿನ್ಯಾಸನಕ್ಷೆ ನ.ಅ.ಪ್ರಾ.ದಿಂದ ಅನುಮೋದನೆ ಆಗಿರುವುದಿಲ್ಲ! ಚಳ್ಳೆಹಣ್ಣು ತಿನ್ನಿಸುವ ಸೈಟ್ ಮಾಲಕ ಸರಕಾರಕ್ಕೆ ಜಾಗ ಬಿಟ್ಟುಕೊಡದೆಯೇ ಅಷ್ಟೂ ಸೈಟ್‌ಗಳನ್ನು ಮಾರಿಯಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.