ಒಡಿಯೂರು ಗ್ರಾಮ ವಿಕಾಸ ಯೋಜನೆ : ಮಾಣಿಲದ ಬಡ ಕುಟುಂಬಕ್ಕೆ ಮನೆ
Team Udayavani, Aug 9, 2018, 1:30 AM IST
ಒಡಿಯೂರು: ಮಾಣಿಲ ಗ್ರಾಮದ ಬಡ ಕುಟುಂಬದ ಬಗ್ಗೆ ಉದಯವಾಣಿ ಸುದಿನದಲ್ಲಿ ಪ್ರಕಟವಾದ ವರದಿಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಮಾರ್ಗದರ್ಶನದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸ್ಪಂದಿಸಿದೆ. ಜೂ. 8ರಂದು ಉದಯವಾಣಿ ಸುದಿನದಲ್ಲಿ ಪ್ರಕಟವಾದ ಸರಕಾರದ ಯಾವ ಸೌಲಭ್ಯಗಳೂ ‘ಅರ್ಹ ಫಲಾನುಭವಿಗೆ ತಲುಪಿಲ್ಲ, ಅನಕ್ಷರಸ್ಥ, ಕೂಲಿ ಕಾರ್ಮಿಕ ಬಡ ಕುಟುಂಬಕ್ಕೆ ಮನೆ – ಶೌಚಾಲಯವಿಲ್ಲ’ ಎಂಬ ಅಗ್ರವಾರ್ತೆಯನ್ನು ಗಮನಿಸಿದ ಸಾಧ್ವಿ ಮಾತಾನಂದಮಯೀ ಅವರು ಶ್ರೀ ಗುರುದೇವಾನಂದ ಸ್ವಾಮೀಜಿ ಗಮನಕ್ಕೆ ತಂದಿದ್ದರು.
ತತ್ ಕ್ಷಣ ಸ್ಪಂದಿಸಿದ ಸ್ವಾಮೀಜಿ, ಗ್ರಾಮ ವಿಕಾಸ ಯೋಜನೆಯವರು ಸ್ಥಳ ಪರಿಶೀಲಿಸುವುದಕ್ಕೆ ಮಾರ್ಗದರ್ಶನ ಮಾಡಿದರು. ಅದರಂತೆ ಯೋಜನೆಯ ಪದಾಧಿಕಾರಿಗಳು ನೆಕ್ಕರೆ ನಿವಾಸಿ ನಾರಾಯಣ ನಾಯ್ಕ-ಲಲಿತಾ ದಂಪತಿಯ ಮುರುಕಲು ಮನೆಗೆ ಭೇಟಿ ನೀಡಿ ಭೂಮಿಗೆ ಸಂಬಂಧಪಟ್ಟ ದಾಖಲೆಗಳನ್ನು ಕಂದಾಯ ಇಲಾಖೆಗೆ ಕಳುಹಿಸಿ, ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಅದಲ್ಲದೇ ಯೋಜನೆಯ ನವನಿಕೇತನ ಯೋಜನೆಯಡಿ ಅವರಿಗೆ ಮನೆ ಮಂಜೂರು ಮಾಡಲಾಗಿದೆ.
ಗುರುವಾರ ನಡೆದ ಒಡಿಯೂರು ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವದ ಸಮಾರಂಭದಲ್ಲಿ ಆ ಕುಟುಂಬಕ್ಕೆ ಕ್ಷೇತ್ರದ ಸಹಸಂಸ್ಥೆ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಮೂಲಕ ಶ್ರೀಗಳು ನವನಿಕೇತನ ಯೋಜನೆಯ ವ್ಯವಸ್ಥೆಗೆ ಸೇರ್ಪಡೆಗೊಳಿಸಿ, ಮನೆ ನಿರ್ಮಿಸಿಕೊಡುವುದಕ್ಕೆ ಮೊದಲ ಕಂತಿನ ಅನುದಾನವನ್ನು ನೀಡಿ ಹರಸಿದರು. ಮಾಣಿಲ ಗ್ರಾಮ ಸಮಿತಿ ಅಧ್ಯಕ್ಷರಿಗೆ ಅನುದಾನವನ್ನು ಹಸ್ತಾಂತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.