ಉಜಿರೆ: ಭಾವೀ ಪರ್ಯಾಯ ಶ್ರೀಗಳಿಗೆ ಭವ್ಯ ಸ್ವಾಗತ; ತುಲಾಭಾರ
Team Udayavani, Dec 24, 2017, 12:43 PM IST
ಬೆಳ್ತಂಗಡಿ: ಕೃಷ್ಣ ಮುರಲೀಕೃಷ್ಣನಾಗಿ, ಗೋಪಾಲಕೃಷ್ಣನಾಗಿ, ಪಾರ್ಥಸಾರಥಿಯಾಗಿ ಕಾಣಿಸಿಕೊಂಡಿದ್ದಾನೆ. ಒಂದು ಕೈಯಲ್ಲಿ ಕಡೆಗೋಲು, ಇನ್ನೊಂದು ಕೈಯಲ್ಲಿ ಪಾಶ (ಹಗ್ಗ) ಹಿಡಿದ ಉಡುಪಿಯ ಕೃಷ್ಣ ವಿಗ್ರಹ ಅತ್ಯಂತ ಅಪೂರ್ವ. ಹಸುವಿನ ಹಾಲಿನಿಂದ ಮೊಸರು, ಬೆಣ್ಣೆ, ತುಪ್ಪ ಕಾಣದ ವಸ್ತು ಲಭಿಸಿದಂತೆ ಭಗವಂತ ನಮ್ಮ ಭಕ್ತಿಗೆ ಸತ್ಯವಾದ ವಸ್ತುವನ್ನೇ ಅನುಗ್ರಹಿಸುತ್ತಾನೆ. ಭಗವಂತನನ್ನು ವೈಭವದಿಂದ ಒಲಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮೊಳಗಿನ ಪ್ರೀತಿಯಿಂದ ಮಾತ್ರ ಒಲಿಸಿಕೊಳ್ಳಲು ಸಾಧ್ಯ ಎಂದು ಉಡುಪಿ ಭಾವೀ ಪರ್ಯಾಯ ಪೀಠಾಧೀಶ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಗಳು ನುಡಿದರು.
ಅವರು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾ ಮಂಟಪದಲ್ಲಿ ಉಜಿರೆ ನಾಗರಿಕರ ಪರವಾಗಿ ಏರ್ಪಡಿಸಲಾದ ಸ್ವಾಗತ, ಪಾದಪೂಜೆ, ತುಲಾಭಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. 750 ವರ್ಷಗಳಿಂದ ಉಡುಪಿ ಶ್ರೀಕೃಷ್ಣನನ್ನು ಭಕ್ತಿಯಿಂದ ಪೂಜಿಸಿ ಮಠದ ಅಧಿಕಾರವನ್ನು ಪ್ರೀತಿಯಿಂದ ಹಸ್ತಾಂತರಿಸುವ ವ್ಯವಸ್ಥೆ ಉಡುಪಿಯ ವೈಶಿಷ್ಟ್ಯ.ನಮ್ಮ ಸಂಕಲ್ಪ ದೊಡ್ಡದಾಗಿದ್ದರೆ ಭಗವಂತ ಅದನ್ನು ನಡೆಸಿಕೊಡುತ್ತಾನೆ. ಮಾತು ದೇವರು ನಮಗೆ ಕೊಟ್ಟ ವರ. ದೇವರ ನಾಮಸ್ಮರಣೆ ಮಾಡುವುದೇ ನಾವು ಭಗವಂತನಿಗೆ ಅರ್ಪಿಸುವ ಕಾಣಿಕೆ. ನಾಲಗೆಯಲ್ಲಿ ಶಕ್ತಿಯಿರುವ ತನಕ ಭಗವಂತನ ನಾಮಸ್ಮರಣೆ ಮಾಡಿ ಬದುಕು ಸಾರ್ಥಕಗೊಳಿಸೋಣ ಎಂದರು.
ಮುಂದಿನ ಶ್ರೀಕೃಷ್ಣ ಪೂಜಾ ಪರ್ಯಾಯದಲ್ಲಿ ನಿತ್ಯ ಲಕ್ಷ ತುಳಸಿ ಅರ್ಚನೆಗಾಗಿ ಭಕ್ತರೊಬ್ಬರು ತುಳಸಿ ಬೆಳೆಸಲು 10 ಎಕ್ರೆ ಜಾಗ ಒದಗಿಸಿದ್ದಾರೆ. ಉಜಿರೆಯ ನಾಗರಿಕರೂ ತುಳಸಿ ಬೆಳೆಸಿ ನಾಮಾವಳಿಯಲ್ಲಿ ಕೃಷ್ಣನಿಗೆನೇರವಾಗಿ ಅರ್ಪಿಸಿದರೆ ಕೃಷ್ಣ ಲಕ್ಷ್ಯ ನಿಮ್ಮ ಕಡೆಗೆ (ತುಳಸಿ ಬ್ಯಾಂಕ್) ಬಡ್ಡಿ ಸಹಿತ ತಲುಪಿಸುತ್ತಾನೆ. ಅನ್ನಬ್ರಹ್ಮನ ಸನ್ನಿಧಿಯಲ್ಲಿ 750 ವರ್ಷಗಳಿಂದ ನಿರಂತರ ಅನ್ನದಾನ ನಡೆದುಕೊಂಡು ಬರುತ್ತಿದೆ. ಅಖಂಡ ನಾಮ ಸಂಕೀರ್ತನೆ, ನಿರಂತರ ರಾರಾಜಿಸುವ ಶಾಶ್ವತ ಸುವರ್ಣ ಗೋಪುರ ನಿರ್ಮಾಣ ಕಾರ್ಯದಲ್ಲಿ ಭಕ್ತರು ಮನಸ್ಸನ್ನೇ ಕೃಷ್ಣನಿಗರ್ಪಿಸಲು ಸಾಧ್ಯವೆಂದರು. ಉತ್ಛಭೂತಿ (ಐಶ್ವರ್ಯದ ಭೂಮಿ)ಯೆಂದೇ ಹೆಸರು ಪಡೆದ ಉಜಿರೆ ಕಾವ್ಯ ಶಾಸ್ತ್ರದಲ್ಲಿ ದಾಖಲಾಗಿ ಜನರ ಹೃದಯ, ಪ್ರೀತಿ, ಶ್ರೀಮಂತಿಕೆಗೆ ಉಡುಪಿ ಕೃಷ್ಣನ ಪೂರ್ಣಾನುಗ್ರಹವಿರಲೆಂದು ಆಶೀರ್ವದಿಸಿದರು.
ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಮನವಿಯೊಂದನ್ನು ಶ್ರೀಗಳವರಿಗೆ ಅರ್ಪಿಸಿ ಬ್ರಾಹ್ಮಣ ಯುವಕರಿಗೆ ಉತ್ತರ ಭಾರತದ ಕನ್ಯೆಯರೊಂದಿಗೆ ಸಂಬಂಧ ಕಲ್ಪಿಸಲು ಮಾರ್ಗದರ್ಶನ ನೀಡುವಂತೆ ಕೋರಿಕೊಂಡರು. ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅವರ ಪರವಾಗಿ ಜ್ಯೋತಿ ಮತ್ತು ಶಿವರಾಮ ಪಡ್ವೆಟ್ನಾಯ ದಂಪತಿ ಶ್ರೀಗಳಿಗೆ ಪಾದ ಪೂಜೆ, ಮಾಲಿಕೆ ಮಂಗಲಾರತಿ ಹಾಗೂ ನಾಣ್ಯ ತುಲಾಭಾರ ನೆರವೇರಿಸಿದರು.
ಉಪಾಧ್ಯಕ್ಷ ನಾಗೇಶ ರಾವ್ ಮುಂಡ್ರುಪ್ಪಾಡಿ, ಕಾರ್ಯದರ್ಶಿ ರಾಜಪ್ರಸಾದ್ ಪೋಳ್ನಾಯ, ಜನಾರ್ದನ ಸೊಸೈಟಿ ಅಧ್ಯಕ್ಷ
ಗಂಗಾಧರ ರಾವ್ ಕೆವುಡೇಲು, ಶಿವಪ್ರಸಾದ್ ಬಾಯಾರಿತ್ತಾಯ, ಶ್ರೀಪತಿ ಎಳಚಿತ್ತಾಯ, ವಾದಿರಾಜ ಶಬರಾಯ ಮೊದಲಾದವರು ಉಪಸ್ಥಿತರಿದ್ದರು. ಮುರಲಿಕೃಷ್ಣ ಆಚಾರ್ ನಿರೂಪಿಸಿ, ಪರಾರಿ ವೆಂಕಟ್ರಮಣ ಹೆಬ್ಟಾರ್ ಸ್ವಾಗತಿಸಿ, ನಿಡ್ಲೆ ವಲಯಾಧ್ಯಕ್ಷ ರಾಘವೇಂದ್ರ ಭಟ್ ವಂದಿಸಿದರು.
ಭವ್ಯ ಶೋಭಾಯಾತ್ರೆ
ಶ್ರೀಗಳನ್ನು ಉಜಿರೆಯ ನಾಗರಿಕರು ಅರಿಪ್ಪಾಡಿ ಮಠದ ಸಂಕೀರ್ಣದಲ್ಲಿ ಸ್ವಾಗತಿಸಿ ವಿಶೇಷ ಅಲಂಕೃತ ವಾಹನದಲ್ಲಿ ಭವ್ಯ ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಜನಾರ್ದನ ದೇವಸ್ಥಾನಕ್ಕೆ ಬರಮಾಡಿಕೊಂಡರು. ವಿದ್ವಜ್ಜನರ ವೇದಘೋಷ, ನಾದಸ್ವರ, ಚೆಂಡೆ ಬಳಗ, ಯಕ್ಷಗಾನ ಗೊಂಬೆಗಳು, ಮಹಿಳಾ ಭಜನ ತಂಡ, ಗಣ್ಯ ನಾಗರಿಕರು, ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸುಬ್ರಾಯ ಶೆಣೈ, ಹರೀಶ್ ಪೂಂಜಾ, ಪ್ರತಾಪಸಿಂಹ ನಾಯಕ್, ತುಳು ಶಿವಳ್ಳಿ ಸಭಾದ ವಿವಿಧ ವಲಯಗಳ ಅಧ್ಯಕ್ಷರು, ಸದಸ್ಯರು, ಉಜಿರೆ ನಾಗರಿಕರು ಭಾಗವಹಿಸಿದ್ದರು. ಶ್ರೀಗಳವರು ಶ್ರೀ ಜನಾರ್ದನ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ, ಶ್ರೀ ಮಧ್ವಾರ್ಚಾಯರ ದರ್ಶನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.