ಉಜಿರೆ: ಎಲೆಕ್ಟ್ರಾನಿಕ್ ಅಂಗಡಿ ಬೆಂಕಿಗಾಹುತಿ
ಹೊಟೇಲ್, ದಿನಸಿ ಅಂಗಡಿಗೂ ಬೆಂಕಿ; 35 ಲ. ರೂ. ಅಂದಾಜು ನಷ್ಟ
Team Udayavani, Apr 11, 2019, 6:02 AM IST
ಬೆಳ್ತಂಗಡಿ: ಉಜಿರೆ ಮಾರಿಗುಡಿ ಸಮೀಪ ಎಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಬುಧವಾರ ಮುಂಜಾನೆ ಅವಧಿಯಲ್ಲಿ ವಿದ್ಯುತ್ ಆಘಾತದಿಂದ ಲಕ್ಷಾಂತರ ಮೌಲ್ಯದ ಸೊತ್ತುಗಳು ಸುಟ್ಟುಹೋಗಿವೆ,ಬುಧವಾರ ತಡರಾತ್ರಿ ಸುಮಾರು 2 ಗಂಟೆಗೆ ಅಕ್ಷಾ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ನೂಟ್ ಉಂಆಟಗಿತ್ತು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕೋಳಿ ಸಾಗಾಟ ಲಾರಿ ಚಾಲಕ ಅಂಗಡಿಯಲ್ಲಿ ಹೊಗೆ ಅವರಿಸಿರುವುದನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ರಿಕ್ಷಾ ಚಾಲಕರು ಸ್ಥಳಕ್ಕಾಗಮಿಸಿ ಅಂಗಡಿ ಮಾಲೀಕರಿಗೆ ಹಾಗೂ ಬೆಳ್ತಂಗಡಿ ಅಗ್ನಿಶಾಮಕಕ್ಕೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಷ್ಟರಲ್ಲಾಗಲೇ ಎಲೆಕ್ಟ್ರಾನಿಕ್ ಅಂಗಡಿಯ ಟಿ.ವಿ. ಫ್ರಿಡ್ಜ್, ಮೊಬೈಲ್ ಸಹಿತ ಸೊತ್ತುಗಳು ಸುಟ್ಟುಹೋಗಿದೆ. ಸಮೀಪದ ಹೊಟೇಲ್ ಸೊತ್ತು, ದಿನಸಿ ಅಂಗಡಿಯಲ್ಲಿದ್ದ ತರಕಾರಿ ದಿನಬಳಕೆಯ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ.
ಒಟ್ಟು 35 ಲಕ್ಷ ರೂ. ನಷ್ಟ.
ಅಶೋಕ್ ಶೆಟ್ಟಿ ಮಾಲಕತ್ವದ ಅಕ್ಷಾ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ 30 ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ಸೊತ್ತು, ಗಣೇಶ್ ಮಾಲಕತ್ವದ ಗುರುಕೃಪಾ ಹೊಟೇಲ್‌ನಲ್ಲಿ 50 ಸಾವಿರ ರೂ.ಗೂ ಹೆಚ್ಚಿನ ಮೌಲ್ಯದ ಸೊತ್ತು, ಮಹಮ್ಮದ್ ಶರೀಫ್ ಮಾಲಕತ್ವದ ಎ.ಬಿ. ಜಡ್ ದಿನಸಿ ಅಂಗಡಿಯಲ್ಲಿ 2 ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ಸೊತ್ತು ನಾಶವಾಗಿದೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಲೆಕ್ಟ್ರಾನಿಕ್ ಅಂಗಡಿಯ ಮಾಲಕರು ಬೆಳಗ್ಗೆ ಮಾಹಿತಿ ತಿಳಿದು ಧಾವಿಸಿ ಬಾಗಿಲು ತೆರೆದಾಗ ಸಣ್ಣದಾಗಿ ಉರಿಯುತ್ತಿದ್ದ ಬೆಂಕಿ ಗಾಳಿಯ ರಭಸಕ್ಕೆ ವ್ಯಾಪಿಸಿದೆ. ಮಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ತಪ್ಪಿದ ಸಿಲಿಂಡರ್ ಸ್ಫೋಟ
ಸಮೀಪದ ಹೊಟೇಲ್‌ನಲ್ಲಿ ಎರಡು ಗ್ಯಾಸ್ ಸಿಲಿಂಡರ್ ಇ ದ್ದು, ಅಗ್ನಿಶಮನ ಸ್ವಲ್ಪ ತಡವಾಗಿದ್ದರೂ ಸ್ಫೋಟಗೊಳ್ಳುವ ಸಾಧ್ಯತೆ ಇತ್ತು. ಅಂಗಡಿ ಮುಂದಿದ್ದ ಗಿಡ ಹೊತ್ತಿದ್ದು, ಹಿಂಬದಿ ಅಂಗಡಿಗೂ ಸಮೀಪಿಸಿದೆ.
ತಡವಾಗಿ ಬಂದ ಅಗ್ನಿಶಾಮಕ
ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ ಕೂಡಲೆ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ವಿದ್ಯುತ್ ಪ್ರವಹಿಸಬಹುದೆಂಬ ಆತಂಕದಲ್ಲಿ ಅಗ್ನಿಶಾಮಕಕ್ಕೆ ಮಾಹಿತಿ ನೀಡಿದ್ದರು.
ಆಗ್ನಿಶಾಮಕ ಸಿಬಂದಿ ಆಗಮಿಸು ವಾಗ ಸುಮಾರು 6ಗಂಟೆಯಾಗಿತ್ತು. ಅಷ್ಟರಲ್ಲಿ ಬೆಂಕಿ ಅಂಗಡಿಗಳನ್ನು ಆವರಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.