ಉಜಿರೆ: ನೆನಪಿನಲ್ಲುಳಿದ ಮೋದಿ ಭೇಟಿ
Team Udayavani, Oct 30, 2017, 10:22 AM IST
ಉಜಿರೆ: ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಆಗಮನ ನಿರೀಕ್ಷಣೆ ಮಾಡುತ್ತಿದ್ದ ಜನರಿಗೆ ರವಿವಾರ ಹಬ್ಬದ ಸಂಭ್ರಮ ನಿರ್ಮಾಣವಾದಂತಾಗಿತ್ತು. ಪ್ರಧಾನಿ ಆಗಮನಕ್ಕೂ ಮುನ್ನ ಭಾರೀ ಭದ್ರತೆಯೊಂದಿಗೆ ಪೊಲೀಸರ ಸರ್ಪಗಾವಲಿನ ನಡುವೆಯೇ ಮೋದಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಮೋದಿ ಆಗಮನಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ಮುಂಜಾನೆಯೆ ಉಜಿರೆಗೆ ಗುಂಪು ಗುಂಪಾಗಿ ದೌಡಾಯಿಸಿದ್ದರು. 11 ಗಂಟೆಗೆ ಸಭಾಂಗಣ ಪೂರ್ತಿಯಾಗಿದ್ದು, ಜೈಕಾರ ಮಾತ್ರ ಕೇಳುತ್ತಿತ್ತು.
ಉಜಿರೆ ಫುಲ್ ರಶ್
ಮೋದಿ ಆಗಮನಕ್ಕೂ ಮುನ್ನ ಉಜಿರೆ ಪೇಟೆ ಪೊಲೀಸರ ನಿಯಂತ್ರಣದಲ್ಲಿದ್ದು, ವಾಹನ ಸಂಚಾರ ನಿಯಂತ್ರಿಸುತ್ತಿದ್ದರು. ಉಜಿರೆ ದ್ವಾರದ ಒಳಗೆ ವಾಹನ ಸಂಚಾರ ನಿರ್ಬಂಧಿಸಿದ್ದು, ಸಾರ್ವಜನಿಕ ವಾಹನಗಳನ್ನು ಅಜ್ಜರಕಲ್ಲು ಮೈದಾನ, ಜನಾರ್ದನ ಶಾಲೆ ಬಳಿ, ಜನಾರ್ದನ ದೇವಸ್ಥಾನ ಬಳಿ, ಅನುಗ್ರಹ ಶಾಲೆ ಬಳಿ, ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು ಬಳಿ ನಿಲ್ಲಿಸಲಾಗಿತ್ತು. ಒಟ್ಟು 1,600 ಬಸ್ಸುಗಳು ಹಾಗೂ 1,500 ವಾಹನ ನಿಲ್ಲಿಸಲು ಸ್ಥಳಾವಕಾಶ ಏರ್ಪಡಿಸಲಾಗಿತ್ತು. ಆದರೆ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಉಳಿದ ವಾಹನಗಳು ರಸ್ತೆ ಬದಿಗಳಲ್ಲಿ ಅಡ್ಡಾದಿಡ್ಡಿ ನಿಂತಿದ್ದವು. ಕಾರ್ಯಕ್ರಮ ಮುಗಿದ ಬಳಿಕ ಉಜಿರೆ ಪೇಟೆಯಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ವಾಹನ ಸವಾರರನ್ನು ಮತ್ತು ಜನರನ್ನು ನಿಯಂತ್ರಣ ಮಾಡುವಲ್ಲಿ ಪೊಲೀಸರು ಹರಸಾಹಸಪಡಬೇಕಾಯಿತು.
ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಭೋಜನ ವ್ಯವಸ್ಥೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರಿಗೆ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಒಟ್ಟು ನಾಲ್ಕು ಕಡೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಪ್ರಾಂಗಣ, ದೇವಸ್ಥಾನದ ಕೆಳಗೆ, ಎಡಬದಿ ಮತ್ತು ಮುಂಭಾಗದಲ್ಲಿ ಸುಮಾರು 60,000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಡುಗೆ ಪಾತ್ರೆಗಳನ್ನು ಧರ್ಮಸ್ಥಳ ಅನ್ನಪೂರ್ಣ ಛತ್ರದಿಂದಲೇ ತರಲಾಗಿತ್ತು. ಊಟದ ವ್ಯವಸ್ಥೆಗೆ ಉಜಿರೆ ಸ್ವಯಂ ಸೇವಕರ ಜತೆಗೆ ದ.ಕ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಲಕ್ಷ್ಮೀಶ್ ಮೋಹನ್, ಗ್ರಾ.ಯೋ. ಧರ್ಮಸ್ಥಳ, ಸಿದ್ಧವನ ಮತ್ತು ರುಡ್‌ಸೆಟ್ ಸಂಸ್ಥೆಯ ಸುಮಾರು 950 ಸ್ವಯಂ ಸೇವಕರು ಭೋಜನ ಸ್ಥಳದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರು.
ವಿಜಯ ರಾಘವ ಪಡ್ವೆಟ್ನಾಯ, ಶರತ್‌ಕೃಷ್ಣ ಪಡ್ವೆಟ್ನಾಯ, ರಾಜೇಶ್ ಪೈ, ಜಯಂತ್ ಶೆಟ್ಟಿ, ರಾಮಚಂದ್ರ ಶೆಟ್ಟಿ, ಭರತ್ ಕುಮಾರ್, ಪರಾರಿ ವೆಂಕಟರಮಣ ಹೆಬ್ಟಾರ್, ಮೋಹನ್ ಶೆಟ್ಟಿಗಾರ್, ರಾಜೇಂದ್ರ ಕಾಮತ್, ಲಕ್ಷ್ಮೀಮೋಹನ್, ರಾಘವೇಂದ್ರ ಬೈಪಡಿತ್ತಾಯ, ಲಕ್ಷ್ಮಣ ಸಫಲ್ಯ, ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್, ಧರ್ಮಸ್ಥಳ ಯೋಜನೆಯ ನಿರ್ದೇಶಕ ಮನೋಜ್ ಮಿನೇಜಸ್ ಮತ್ತಿತರರು ಊಟದ ಉಸ್ತುವಾರಿ ನೋಡಿಕೊಂಡಿದ್ದರು. 5 ಸಾವಿರ ಪೊಲೀಸರಿಗೆ ಆಹಾರದ ಪೊಟ್ಟಣ ತಯಾರಿಸಿ ನೀಡಲಾಗಿತ್ತು.
ಉಪಾಹಾರದ ವ್ಯವಸ್ಥೆ
ಬೆಳಗ್ಗೆ ಸುಮಾರು 20 ಸಾವಿರ ಜನರಿಗೆ ಉಪಾಹಾರ ನೀಡಲಾಗಿತ್ತು. ಉಪ್ಪಿಟ್ಟು, ಅವಲಕ್ಕಿ, ಶೀರ, ಟೀ, ಕಾಫಿ
ವ್ಯವಸ್ಥೆ ಮಾಡಲಾಗಿತ್ತು. 20 ನಿಮಿಷದಲ್ಲಿ ಸುಮಾರು 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 30 ಜನ ಅಡುಗೆಯವರು ಅಡುಗೆ ತಯಾರಿಯಲ್ಲಿ ಭಾಗಿಯಾಗಿದ್ದು, ಅನ್ನ ಸಾಂಬಾರು, ಮಜ್ಜಿಗೆ, ಉಪ್ಪಿನಕಾಯಿ ಮತ್ತು ಸ್ವೀಟ್ ತಯಾರಿಸಿದ್ದರು. ಮಧ್ಯಾಹ್ನ 12 ಗಂಟೆಯಿಂದ ಊಟ ಆರಂಭವಾಗಿತ್ತು.
ಬಿಸಿಲ ಬೇಗೆಗೆ ಸೀಯಾಳದ ತಂಪು
ಸಭಾಂಗಣದ ಒಳಗೆ ಬೆಳಗ್ಗೆಯಿಂದ ಕಾದು ಕುಳಿತ ಮೋದಿ ಅಭಿಮಾನಿಗಳಿಗೆ ಬಾಟಲಿ ನೀರು ಕೊಂಡು ಹೋಗಲು ನಿಷೇಧವಿದ್ದು, ಸ್ವಯಂಸೇವಕರು ಬಕೆಟ್, ಲೋಟದಲ್ಲಿ ನೀರಿನ ವ್ಯವಸ್ಥೆ ಮಾಡುತ್ತಿದ್ದರು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ನೀರಿನ ಸರಬರಾಜು ನಿಲ್ಲಿಸಲಾಗಿತ್ತು. ಕಾರ್ಯಕ್ರಮ ಮುಗಿದು ಹೊರ ಬರುತ್ತಲೇ ಜನರು ಬಾಯಾರಿಕೆಯಿಂದ ಬಳಲಿ, ಅಂಗಡಿ ಮುಂಗಟ್ಟುಗಳು ಕೂಡ ಬಂದ್ ಆದ ಕಾರಣ ರಸ್ತೆ ಬದಿ ಮಾರಾಟ ಮಾಡುತ್ತಿದ್ದ ಸೀಯಾಳಕ್ಕೆ ಮೊರೆ ಹೋದರು.
ನಿರ್ಮಾಣವಾದ ತಾತ್ಕಾಲಿಕ ಅಂಗಡಿಗಳು
ಜನರ ಮನಃಸ್ಥಿತಿ ತಿಳಿದುಕೊಂಡ ಹಣ್ಣುಹಂಪಲು ವ್ಯಾಪಾರಸ್ಥರು, ಕಾರ್ಯಕ್ರಮ ಮುಗಿಯುವ ಸಂದರ್ಭ ಉಜಿರೆ ರಸ್ತೆ ಬದಿಗಳಲ್ಲಿ ಸೀಯಾಳ, ಕಲ್ಲಂಗಡಿ ಮತ್ತು ಚರುಂಬುರಿ ಅಂಗಡಿಗಳನ್ನು ನಿರ್ಮಿಸಿದ್ದರು. ಇದರಿಂದ ಜನರ ದಾಹವೂ ತೀರಿತು, ವ್ಯಾಪಾರಸ್ಥರ ಜೇಬೂ ತುಂಬಿತು.
ಪ್ರಮೋದ್ ಬಳ್ಳಮಂಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.