ಕಿಕ್ಕಿರಿದು ತುಂಬಿದ ಸಭಾಂಗಣ; ನಿಗದಿತ ಸಮಯಕ್ಕೆ ಮುಕ್ತಾಯ
Team Udayavani, Jan 26, 2019, 5:41 AM IST
ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಉಜ್ವಲ ಗ್ಯಾಸ್ ಉಚಿತ ಸಂಪರ್ಕ ಫಲಾನು ಭವಿಗಳ ಸಮಾವೇಶ, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಮಾಹಿತಿ ಕಾರ್ಯಕ್ರಮ ಸಂಪನ್ನಗೊಂಡಿತು.
ಬೆಳಗ್ಗೆ 11ಕ್ಕೆ ಆರಂಭವಾದ ಸಭೆ ಅಪರಾಹ್ನ್ನ 1ಕ್ಕೆ ವಂದನೆ ಯೊಂದಿಗೆ ಮುಕ್ತಾಯ ಆಗುವ ಮೂಲಕ ಸಮ ಯದ ಪಾಲನೆ ಮೆಚ್ಚುಗೆಗೆ ಪಾತ್ರ ವಾಯಿತು. ವೇದಿಕೆಯಲ್ಲಿ ಸಚಿವರು, ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಗ್ಯಾಸ್ ಕಂಪೆನಿ ಮುಖ್ಯಸ್ಥರು, ಅತಿಥಿ ಉಪಸ್ಥಿತರಿದ್ದರು. ಸಭಾಂಗಣದೆದುರು ಪಕ್ಷದ ಪ್ರಮುಖರು, ಗಣ್ಯರು ಉಪಸ್ಥಿತ ರಿದ್ದರು. ಅನಂತರ ದ್ರಶ್ಯ ಮತ್ತು ಸುದ್ದಿ ಮಾದ್ಯಮಕ್ಕೆ ಪ್ರತ್ಯೇಕ ವ್ಯವಸ್ಥೆ ಆಗಿತ್ತು.
ಮೆಟಲ್ ಡಿಟೆಕ್ಟರ್
ಬೆಳಗ್ಗೆ 9ರಿಂದ ಜನರ ಆಗಮಿಸಲು ಆರಂಭಿಸಿದ್ದರು. ಭದ್ರತೆ ಉದ್ದೇಶ ದಿಂದ ಪೊಲೀಸರು ಮೆಟಲ್ ಡಿಟೆಕ್ಟರ್ ಮೂಲಕ ಸಾಗುವಂತೆ ಕ್ರಮ ಕೈಗೊಂಡಿ ದ್ದರು. ಸಾರ್ವಜನಿಕರು, ಆಶಾ ಕಾರ್ಯಕರ್ತೆಯರು, ಉಜ್ವಲ ಫಲಾನುಭವಿ ಗಳು, ಆಯುಷ್ಮಾನ್ ಯೋಜನೆ ಫಲಾನುಭವಿಗಳು ಸಭಾಂಗಣದಲ್ಲಿ ಆಸೀನರಾಗಿದ್ದರು.
ಕಿಕ್ಕಿರಿದ ಸಭಾಂಗಣ
ಸಭಾಂಗಣದಲ್ಲಿ ಸುಮಾರು 12 ಸಹಸ್ರ ಮಂದಿಗೆ ಆಸನದ ವ್ಯವಸ್ಥೆ ಮಾಡಿದ್ದು, ಸಭೆ ಆರಂಭ ಆಗುವ ಹೊತ್ತಿಗೆ ಸಭಾಂಗಣ ಕಿಕ್ಕಿರಿದು ತುಂಬಿ ದ್ದಲ್ಲದೆ, ಹೊರಗೂ ಜನಸಂದಣಿ ಇತ್ತು. ಕಾರ್ಯಕ್ರಮ ಆರಂಭದಲ್ಲಿ ಗಣೇಶ್ ಪ್ರಸಾದ್ ಮಂಚಿ ಅವರು ಉಜ್ವಲ ಯೋಜನೆ ಬಗ್ಗೆ ಪ್ರಸ್ತಾವನೆ, ಆಯುಷ್ಮಾನ್ ಭಾರತ ವಿಮಾ ಯೋಜನೆ ಬಗ್ಗೆ ಮೈಸೂರು ವಿಭಾಗ ಸಲಹೆಗಾರ ಪ್ರಸಾದ್ ಎಚ್.ಎಸ್. ಮಾಹಿತಿ ನೀಡಿದರು.
ಉಚಿತ ಎಲ್‌ಪಿಜಿ ಫಲಾನುಭವಿಗಳ ಪರವಾಗಿ ಬಿಜೆಪಿ ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್, ಬೆಳ್ತಂಗಡಿ ತಾ| ಅಳದಂಗಡಿಯ ಆಶಾ ಕಾರ್ಯಕರ್ತೆ ರೇಖಾ ಮಾತನಾಡಿದರು. ಆಶಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ವೇದಿಕೆಯಿಂದ ಪೆಟ್ರೋಲಿಯಂ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಿ.ಟಿ. ರವಿ, ಸಭಾಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮಾತನಾಡಿದರು. ವಿ.ಪ. ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಹಿತ ಜಿಲ್ಲೆಯ ಎಲ್ಲ ಶಾಸಕರು, ಪ್ರಮುಖರು ಉಪಸ್ಥಿತರಿದ್ದರು. ಸಂಸದ ನಳಿನ್ ಕುಮಾರ್ ಕಟೀಲು ಪ್ರಸ್ತಾವಿಸಿದರು. ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಕಾರ್ಯಕ್ರಮದ ಪರಿಚಯ ನೀಡಿದರು. ಭಾರತ್ ಪೆಟ್ರೋಲಿಯಂ ಸಂಸ್ಥೆಯ ತಂಗವೇಲು ಸ್ವಾಗತಿಸಿ, ಅನಿಲ ಸಂಸ್ಥೆಯ ಅಂಬಾಭವಾನಿ ಕುಮಾರ್ ವಂದಿಸಿದರು.
ಊಟೋಪಚಾರ
ಸಭೆ ಮುಕ್ತಾಯ ಘೋಷಣೆ ಆಗುತ್ತಿದ್ದಂತೆ ಊಟೋಪಚಾರಕ್ಕೆ ಸರತಿ ಸಾಲಲ್ಲಿ ಬಂದಿದ್ದ ಜನರು ಶಿಸ್ತುಬದ್ದವಾಗಿ ನಡೆದುಕೊಳ್ಳುವ ಮೂಲಕ ಸಂಘಟಕರ ಮೆಚ್ಚುಗೆ ಪಡೆದರು.
ಎಷ್ಟುಬೇಕೋ ಅಷ್ಟನ್ನೇ ಬಳಸಿಕೊಳ್ಳಿ, ಉಣ್ಣುವ ಅನ್ನವನ್ನು ಚೆಲ್ಲಬೇಡಿ, ಕಸ ಮುಸುರೆಯನ್ನು ಅದಕ್ಕಾಗಿ ಇಟ್ಟಿದ ತೊಟ್ಟಿಯಲ್ಲೇ ಹಾಕಿ ಎನ್ನುವ ಘೋಷಣೆ ಸಹಿತ ಎಲ್ಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆ ಸಂಘಟಿಸಲಾಗಿತ್ತು. ಶೌಚಾಲಯ ವ್ಯವಸ್ಥೆ ಮಾಡಲಾಗಿತ್ತು.
ಯಕ್ಷಗಾನ ನಾಟ್ಯ ವೈಭವ
ಸಭೆ ಆರಂಭದಲ್ಲಿ ಪಿ. ವಸಂತ ಪ್ರಭು ಬಂಟ್ವಾಳ ಮತ್ತು ವಿಜೇತ ಕಾಮತ್ ವಂದೇ ಮಾತರಂ ಪ್ರಾರ್ಥನೆ ಹಾಡಿದರು. ಸಭಾ ಕಾರ್ಯಕ್ರಮ ಮುಕ್ತಾಯದಲ್ಲಿ ಪಟ್ಲ ಸತೀಶ್ ಶೆಟ್ಟಿ ಬಳಗದಿಂದ ಯಕ್ಷಗಾನ ನಾಟ್ಯ ವೈಭವ ಹಮ್ಮಿಕೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.