ಉಕ್ಕುಡ: 44 ಪವನ್‌ ಚಿನ್ನಾಭರಣ ಕಳವು

Team Udayavani, Dec 8, 2017, 9:55 AM IST

4-a.jpg

ವಿಟ್ಲ: ವಿಟ್ಲಕಸಬಾ ಗ್ರಾಮದ ಉಕ್ಕುಡ ಚೆಕ್‌ ಪೋಸ್ಟ್‌ ಸಮೀಪ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಿಂಭಾಗದ ತಡೆಗೋಡೆಯನ್ನು ಒಡೆದು ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಅಡಗಿಸಿಟ್ಟ ಸುಮಾರು 10.50 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹುಡುಕಿ, ಕಳವುಗೆ„ದ ಘಟನೆ ಬುಧವಾರ ತಡ ರಾತ್ರಿ ಸಂಭವಿಸಿದೆ.

ಉಕ್ಕುಡ ನಿವಾಸಿ ಅಬ್ಟಾಸ್‌ ಹಾಜಿ ಮನೆ ಮಂದಿ ಬುಧವಾರ ಸಂಜೆ ಗಂಟೆ 5.30ಕ್ಕೆ ಮನೆಗೆ ಬೀಗ ಹಾಕಿ ಕುಂಬ್ರದಲ್ಲಿರುವ ಬಂಧುಗಳ ಮನೆಗೆ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ, ರಾತ್ರಿ 12.30ಕ್ಕೆ ಮನೆಗೆ ಹಿಂದಿರುಗಿದ್ದು, ಬಾಗಿಲು ತೆಗೆದು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಕಳ್ಳತನ ನಡೆದಿರುವುದು ತಿಳಿದುಬಂತು. ಹಿಂಬಾಗಿಲು ತೆರೆದುಕೊಂಡಿತ್ತು. ಮನೆಯೊಳಗೆ ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಕಳ್ಳರು ಕಪಾಟುಗಳನ್ನು ಜಾಲಾಡಿರುವುದು ಸ್ಪಷ್ಟವಾಯಿತು.

ಕಬ್ಬಿಣದ ಸಲಾಖೆ ಬಳಕೆ!

ಸಿಟೌಟ್‌ನಲ್ಲಿ ಅಳವಡಿಸಿದ ಎರಡಡಿಯ ಸಿಮೆಂಟ್‌ ಕಂಬಗಳನ್ನು ಮುರಿದ ಕಳ್ಳರು, ಕಿಟಕಿಯನ್ನೂ ತುಂಡರಿಸಿದ್ದಾರೆ. ಹಾಲ್‌ಗೆ ಪ್ರವೇಶಿಸಲು ಬಾಗಿಲಿನ ತಡೆ ಇದ್ದು, ಇದನ್ನು ಕಬ್ಬಿಣದ ರಾಡ್‌ನ‌ ಮೂಲಕ ಜಜ್ಜಿ ಹಾನಿಗೊಳಿಸಿದ್ದಾರೆ. ಕೊನೆಗೆ ಸ್ಟೋರ್‌ ರೂಮಿನಲ್ಲಿದ್ದ ಅಕ್ಕಿ ಡಬ್ಬದಲ್ಲಿ ಅಡಗಿಸಿಟ್ಟಿದ್ದ ಸುಮಾರು 44 ಪವನ್‌ ಚಿನ್ನಾಭರಣವನ್ನು ಎಗರಿಸುವಲ್ಲಿ ಕಳ್ಳರು ಯಶಸ್ವಿಯಾಗಿದ್ದಾರೆ.
ಚಿನ್ನ ಅಕ್ಕಿ ಡಬ್ಬದಲ್ಲಿತ್ತು !

ಅಪರಾಧ ತಡೆ ಮಾಸಾಚಾರಣೆಯ ಸಂದರ್ಭ ಪೊಲೀಸ್‌ ಇಲಾಖೆ ವಿವಿಧ ಕರಪತ್ರಗಳನ್ನು ವಿತರಿಸಿ, ಚಿನ್ನಾಭರಣಗಳನ್ನು ಕಪಾಟಲ್ಲಿಡುವ ಬದಲು ಬ್ಯಾಂಕ್‌ ಲಾಕರ್‌ಗಳಲ್ಲಿರಿಸಿ ಮತ್ತು ಅಡುಗೆ ಮನೆ ಅಥವಾ ಸ್ಟೋರ್‌ ರೂಮ್‌ಗಳಲ್ಲಿರಿಸಿ ಎಂದು ಸೂಚಿಸಿದ್ದರು. ಇದನ್ನೇ ಪಾಲಿಸಿರಬಹುದೋ ಏನೋ, ಮನೆ ಮಂದಿ ಸ್ಟೋರ್‌ ರೂಮಿನಲ್ಲಿದ್ದ ಅಕ್ಕಿ ಡಬ್ಬದಲ್ಲಿ ಆಭರಣ ಇರಿಸಿದ್ದರು. ಆದರೆ ಕಳ್ಳರು ಅಕ್ಕಿಡಬ್ಬಕ್ಕೇ ಕೈಹಾಕಿ, ಅಕ್ಕಿಯನ್ನು ಬಿಟ್ಟು ಚಿನ್ನಾಭರಣವನ್ನು ಎಗರಿಸಿದ್ದಾರೆ. ಮಾಹಿತಿ ಇರುವ ಸ್ಥಳೀಯರು ಈ ಘಟನೆಯಲ್ಲಿ ಪಾಲ್ಗೊಂಡಿರುವ ಸಾಧ್ಯತೆ ಇದೆ.

ಮನೆಯವರು ರಾತ್ರಿಯೇ ವಿಟ್ಲ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ತತ್‌ಕ್ಷಣ ಆಗಮಿಸಿದ ಪೊಲೀಸರು ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಗುರುವಾರ ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್‌ ಭೇಟಿ ನೀಡಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಜತೆ ತನಿಖೆ ಆರಂಭಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯ ರಸ್ತೆಗೆ ತಲುಪಿ ಅತ್ತಿತ್ತ ನೋಡಿದ ಶ್ವಾನ !ಉಕ್ಕುಡ ಚೆಕ್‌ ಪೋಸ್ಟ್‌ನಿಂದ ಆಲಂಗಾರು ಸಂಪರ್ಕಿಸುವ ಡಾಮರು ರಸ್ತೆಯಲ್ಲಿ ಚೆಕ್‌ ಪೋಸ್ಟ್‌ ನಿಂದ ಸುಮಾರು 100 ಮೀಟರ್‌ ಹೋಗುತ್ತಿದ್ದಂತೆ ಎಡ ಬದಿಗೆ 50 ಮೀಟರ್‌ ದೂರದಲ್ಲಿ ಅಬ್ಟಾಸ್‌ ಹಾಜಿ ಅವರ ಮನೆಯಿದೆ. ಮನೆಯ ಹಿಂಭಾಗದಿಂದ ಹೊರಟ ಶ್ವಾನದಳ ಮನೆಗೆ ಸುತ್ತು ಹೊಡೆದು 50 ಮೀಟರ್‌ ಕಚ್ಛಾ ರಸ್ತೆಯಲ್ಲಿ ಓಡಿ ಡಾಮರು ರಸ್ತೆಯ ಬಳಿ ಹೋಗಿ ನಿಂತು ಅತ್ತಿತ್ತ ನೋಡಿದೆ. ಆದುದರಿಂದ ಕಳ್ಳರು ಮುಖ್ಯ ರಸ್ತೆಯಿಂದ ವಾಹನದಲ್ಲಿ ತೆರಳಿರುವ ಸಾಧ್ಯತೆಯಿದೆ ಎನ್ನಲಾಗುತ್ತದೆ.

ಸಿಸಿಟಿವಿಯಲ್ಲಿ ದಾಖಲಾಗಿರಬಹುದೇ ? 
ಉಕ್ಕುಡ ಚೆಕ್‌ ಪೋಸ್ಟ್‌ ನಲ್ಲಿರುವ ಅರಣ್ಯ ಇಲಾಖೆ ಚೆಕ್‌ ಪೋಸ್ಟ್‌ ಮುಂಭಾಗದಲ್ಲಿ ಹೋಗುವ ರಸ್ತೆಯನ್ನೇ ಕಳ್ಳರು ಬಳಸಿರುವ ಸಾಧ್ಯತೆಯನ್ನು ಶ್ವಾನದಳದ ತನಿಖೆ ಖಚಿತ ಪಡಿಸಿದೆ. ಚೆಕ್‌ ಪೋಸ್ಟ್‌ ನಲ್ಲಿರುವ ಸಿಸಿಟಿವಿಯಲ್ಲಿ ರಸ್ತೆಯ ಮುಂಭಾಗ ದಾಖಲಾಗುತ್ತಿದೆ. ಆ ಮೂಲಕ ಮಾಹಿತಿ ಸಿಗುವ ಸಾಧ್ಯತೆ ಇದೆ ಎಂದು ನಾಗರಿಕರು ಆಡಿಕೊಳ್ಳುತ್ತಿದ್ದರು.
 
ಟಾಪ್ ನ್ಯೂಸ್

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

4-mnglr

Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

3-bantwala

Bantwala: ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

2-yadagiri-3

Yadagiri: ಮೈಲಾಪುರ ಜಾತ್ರೆಯಲ್ಲಿ ಕುರಿ ಮರಿ ಎಸೆತ.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-mnglr

Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ

3-bantwala

Bantwala: ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

5

Mangaluru: ರಸ್ತೆಯಲ್ಲೇ ಪಾರ್ಕಿಂಗ್‌ ಕಿರಿಕಿರಿ!

3

Kinnigoli: ತುಂಬಿ ತುಳುಕಿದ ಪಂಜ ಅಣೆಕಟ್ಟು

2

Kadaba ತಾಲೂಕಿನಲ್ಲಿ ಸೋಲಾರ್‌ ಪಾರ್ಕ್‌?

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Sandalwood: ಮುಹೂರ್ತ ಕಂಡ ರಮೇಶ್‌ ಅರವಿಂದ್ ‌ʼದೈಜಿʼ

Sandalwood: ಮುಹೂರ್ತ ಕಂಡ ರಮೇಶ್‌ ಅರವಿಂದ್ ‌ʼದೈಜಿʼ

6-sirsi

Sirsi: ಟ್ರಾಫಿಕ್ ಪೊಲೀಸ್ ಠಾಣಾ ಕಟ್ಟಡ ಪರಿಶೀಲಿಸಿದ ಎಸ್ಪಿ ನಾರಾಯಣ

15

Parvathy Movie: ಪಾರು ಪಾರ್ವತಿಯ ಕಾರ್‌ಬಾರು 

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.