ಉಕ್ರೇನ್ ಸಂಕಷ್ಟ: ಭಾರತದ ವಿಮಾನದ ನಿರೀಕ್ಷೆಯಲ್ಲಿ ಉಜಿರೆ ವಿದ್ಯಾರ್ಥಿನಿ
ಉಕ್ರೇನ್ ನಲ್ಲಿ ಸಿಲುಕಿದ್ದ ಉಜಿರೆಯ ಹೀನಾ ಫಾತಿಮಾ ಪೋಲಂಡ್ ನಲ್ಲಿ ವಾಸ್ತವ್ಯ
Team Udayavani, Mar 4, 2022, 9:26 AM IST
ಬೆಳ್ತಂಗಡಿ: ಯುದ್ಧಗ್ರಸ್ಥ ಉಕ್ರೇನ್‌ನ ಖಾರ್ಕಿವ್ ನಲ್ಲಿ ಸಿಲುಕಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರು ಇದೀಗ ಪೋಲಂಡ್ ನಲ್ಲಿ ವಾಸ್ತವ್ಯ ಹೂಡಿದ್ದು ಇವರೊಂದಿಗೆ ಕರ್ನಾಟಕ ಭೂಮಿಕಾ, ಅಕ್ಷಿತಾ ಇರುವುದಾಗಿ ತಿಳಿದುಬಂದಿದೆ.
ಹೀನಾ ಫಾತಿಮಾ ಸಹಿತ ಅನೇಕುರು ನಿನ್ನೆಯವರೆಗೆ ಕಾರ್ಕೀವ್ ಪ್ರದೇಶದದಿಂದ ಸುಮಾರು 1000 ಕಿ.ಮೀ. ದೂರದ ಲಿವಿವ್ ಪ್ರದೇಶಕ್ಕೆ ರೈಲಿನ ಮೂಲಕ ಬಂದು ಅಲ್ಲಿಂದ ಅಹಾರ, ನೀರು ಇಲ್ಲದೆ ಹೊರಟಿದ್ದರು. ಲಿವಿವ್ ನಿಂದ ವಾಹನ ಮೂಲಕ ಪೋಲಂಡ್ ತಲುಪಿದ್ದರಾದರೂ ಗುರುವಾರ ರಾತ್ರಿ11 ಗಂಟೆಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಹೀನಾ ಫಾತಿಮಾ ಸಹಿತ ಜತೆಗಿದ್ದವರಿಗೆ ವಾಸ್ತವ್ಯ ಲಭಿಸಿದ್ದು ಸಧ್ಯದ ಪರಿಸ್ಥಿಯಲ್ಲಿ ಸುರಕ್ಷಿತರಾಗಿದ್ದು, ಪೋಲಂಡ್ ನಿಂದ ಭಾರತಕ್ಕೆ ಬರಲು ವಿಮಾನ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ಉಕ್ರೇನ್ ನ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾ ದಾಳಿ; ತಕ್ಷಣ ಕದನವಿರಾಮಕ್ಕೆ ಕೀವ್ ಒತ್ತಾಯ
ನನ್ನ ತಂಗಿಯ ಮಗಳ ಹಾಗೆ ಈ ದೇಶದ ಎಷ್ಟೋ ಅಕ್ಕ ತಂಗಿಯರ ಮಕ್ಕಳು ಉಕ್ರೇನ್ ನಲ್ಲಿ ಸಿಲುಕಿ ಕೊಂಡಿದ್ದಾರೆ. ಅವರೆಲ್ಲ ಈ ದೇಶಕ್ಕೆ ಬಂದು ಅವರ ಕುಟುಂಬವನ್ನು ಸೇರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಉಕ್ರೇನ್ ನಲ್ಲಿ ಸಿಲುಕಿರುವವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಸರಕಾರವು ಬಹಳಷ್ಟು ಸ್ಪಂದನೆ ನೀಡಿ, ಧೈರ್ಯ ತುಂಬುತ್ತಿದೆ ಎಂದು ಹೀನಾ ಅವರ ಮಾವ ಉದ್ಯಮಿ ಆಬಿದ್ ಅಲಿ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.