ಇಚ್ಲಂಪಾಡಿ ಬೀಡು ಉಳ್ಳಾಕ್ಲು ದೈವದ ವಾಹನ ಕುದುರೆ ಸಮರ್ಪಣೆ
Team Udayavani, Apr 15, 2018, 12:44 PM IST
ನೆಲ್ಯಾಡಿ : ಇಚ್ಲಂಪಾಡಿ ಬೀಡು ಶ್ರೀ ಉಳ್ಳಾಕ್ಲು ಸಹ ಪರಿವಾರ ದೈವಗಳ ದೈವಸ್ಥಾನದ ಶ್ರೀ ಉಳ್ಳಾಕ್ಲು ದೈವಕ್ಕೆ ನೂತನವಾಗಿ ನಿರ್ಮಿಸಿದ ‘ವಾಹನ ಕುದುರೆ’ಯ ಸಮರ್ಪಣೆ ಶನಿವಾರ ನಡೆಯಿತು.
ಮರದಿಂದ ನಿರ್ಮಾಣಗೊಂಡ ಕುದುರೆಯನ್ನು ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ವೈಭವದ ಮೆರವಣಿಗೆಯ ಮೂಲಕ ನೇರ್ಲ ಮಾರ್ಗವಾಗಿ ಉಳ್ಳಾಕ್ಲು ದೈವಸ್ಥಾನಕ್ಕೆ ತರಲಾಯಿತು. ಚೆಂಡೆ, ಬ್ಯಾಂಡ್, ವಾದನದೊಂದಿಗೆ ಆಗಮಿಸಿದ ಮೆರವಣಿಗೆಯಲ್ಲಿ ಮಹಿಳೆಯರು ಸಹಿತ ನೂರಾರು ಮಂದಿ ಭಾಗವಹಿಸಿದ್ದರು. ಪಟಾಕಿ ಸಿಡಿಸಿ ಮೆರವಣಿಗೆಯನ್ನು ಸ್ವಾಗತಿಸಲಾಯಿತು. ಉಳ್ಳಾಕ್ಲು ಮಾಡದಲ್ಲಿ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗಣಪತಿ ಹೋಮ, ಕಲಶಪೂಜೆ ನಡೆಯಿತು. ಬಳಿಕ 11.36ಕ್ಕೆ ನೂತನ ವಾಹನ ಕುದುರೆಯ ಸಮರ್ಪಣೆ, ಮಹಾಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಕುದುರೆಮುಖ, ಉದ್ರಾಂಡಿ ದೈವಗಳ ನೇಮ
ಎ. 14ರಂದು ಸಂಜೆ ಧ್ವಜಾರೋಹಣ ನಂತರ ಭಂಡಾರ ತೆಗೆದು ಕುದುರೆಮುಖ ಮತ್ತು ಉದ್ರಾಂಡಿ ದೈವಗಳ ನೇಮ ನಡೆಯಿತು. ಎ. 15ರಂದು ಬೆಳಗ್ಗೆ ಬಿಸು ಕಾಣಿಕೆ, ಎ. 17ರಂದು ಮಧ್ಯಾಹ್ನ ಶ್ರೀ ಉಳ್ಳಾಕ್ಲು ದೈವಕ್ಕೆ ಎಣ್ಣೆ ವೀಳ್ಯ ಕೊಡುವುದು, ಅನಂತರ ನೇಮ ನಡೆಯಲಿದೆ. ಎ. 18ರಂದು ಶ್ರೀ ಹಳ್ಳತ್ತಾಯ ದೈವಕ್ಕೆ ಎಣ್ಣೆ ವೀಳ್ಯ ಕೊಡುವುದು, ಅನಂತರ ನೇಮ, ಶ್ರೀ ಪನ್ಯಾಡಿತ್ತಾಯ, ಪೊಟ್ಟ ದೈವಗಳ ನೇಮ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.