Ullal; ತಲಪಾಡಿ ಟೋಲ್ ಸಿಬಂದಿಗೆ ಹಲ್ಲೆ: ಕಾರಿನಲ್ಲಿದ್ದ ಮೂವರ ತಂಡದ ಕೃತ್ಯ
Team Udayavani, Dec 3, 2024, 12:02 AM IST
ಉಳ್ಳಾಲ: ಟೋಲ್ ಸಿಬಂದಿಗೆ ಕಾರಿನಲ್ಲಿದ್ದ ಮೂವರ ತಂಡ ಹಲ್ಲೆ ನಡೆಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಲ್ಲಿ ರವಿವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಕೃತ್ಯ ಸಂಬಂಧ ಹಲ್ಲೆ ನಡೆಸಿದ ಉಳ್ಳಾಲದ ಓರ್ವನನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ಉತ್ತರಪ್ರದೇಶ ನೋಂದಾಯಿತ ಐ-20 ಕಾರೊಂದಲ್ಲಿ ಮಂಗಳೂರಿನಿಂದ ಕೇರಳ ಕಡೆಗೆ ಐವರು ಯುವಕರ ತಂಡ ತೆರಳುತಿತ್ತು. ತಲಪಾಡಿ ಟೋಲ್ ಗೇಟಿನಲ್ಲಿ ಟೋಲ್ ಪಾವತಿಸದೆ ಕಾರು ಮುಂದೆ ಚಲಿಸಿದ್ದು, ಈ ವೇಳೆ ಟೋಲ್ ನಿರ್ವಹಣೆ ನಡೆಸುವ ಇಜಿಎಸ್ ಸಂಸ್ಥೆ ಉದ್ಯೋಗಿ ಕಾರಿನ ಹಿಂಭಾಗಕಕ್ಕೆ ಕೈಯಿಂದ ಬಡಿದಿದ್ದಾನೆ. ಇದರಿಂದ ರೊಚ್ಚಿಗೆದ್ದ ಕಾರಿನಲ್ಲಿದ್ದ ತಂಡ ಮುಂದೆ ನಿಲ್ಲಿಸಿ ಸಿಬಂದಿಯತ್ತ ದೌಡಾಯಿಸಿ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಟೋಲ್ ಸಿಬಂದಿ ಮನು, ಸುಧಾಮ, ಅಮನ್ ಅವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ನಡೆಸಿದವರು ಮೂವರು ಮೂಲತಃ ಉಳ್ಳಾಲ ನಿವಾಸಿಗಳಾಗಿದ್ದು, ಅವರನ್ನು ಝುಲ್ಪಾನ್, ನಿಫಾನ್, ಫಯಾಝ್ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿ ಪೊಲೀಸರು ಸಿಸಿಟಿವಿ ವೀಡಿಯೋ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿ
Govt Hospitalಔಷಧಕ್ಕಾಗಿ ರೋಗಿಗಳನ್ನು ಹೊರಗೆ ಕಳಿಸಬೇಡಿ: ಉಪಲೋಕಾಯುಕ್ತ ನ್ಯಾ|ಮೂ|ಬಿ.ವೀರಪ್ಪ
Mangaluru: ಅಡಿಕೆ ಸಂಶೋಧನೆಗಾಗಿ ಅನುದಾನ: ಸಚಿವೆ ನಿರ್ಮಲಾರಿಗೆ ಕ್ಯಾಂಪ್ಕೊ ಆಗ್ರಹ
Vatican: ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ಮಾನವೀಯತೆ ಸಂದೇಶ ನೀಡಿದ ಖಾದರ್
Mangaluru: ಆಸ್ಪತ್ರೆಯಿಂದ ವ್ಯಕ್ತಿ ನಾಪತ್ತೆ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.